Tiger Death: ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಹುಲಿ ಶವ ಪತ್ತೆ; ಸಂರಕ್ಷಿತಾರಣ್ಯದಲ್ಲೇ ನಡೆದುಹೋಯ್ತು ದುರಂತ

ಮಧ್ಯಪ್ರದೇಶ: Tiger Death: ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲೇ ಹುಲಿಯ ಶವವೊಂದು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ನಡೆದಿದೆ. ಹುಲಿಯ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿದ್ದು ತನಿಖೆ ನಡೆಸಲಾಗುತ್ತಿದೆ.

ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಸಂರಕ್ಷಿತಾರಣ್ಯದಲ್ಲಿ ಮರವೊಂದರಕ್ಕೆ ವೈರ್ ನಿಂದ ನೇಣುಬಿಗಿದ ಸ್ಥಿತಿಯಲ್ಲಿ ಹುಲಿಯ ಶವ ಪತ್ತೆಯಾಗಿದೆ. ವಾಹನಗಳಲ್ಲಿ ಅಳವಡಿಸಲಾಗುವ ಕ್ಲಚ್ ವೈರ್ ನಿಂದ ಹುಲಿಗೆ ನೇಣು ಬಿಗಿಯಲಾಗಿದೆ. ಬೇರೆ ಪ್ರಾಣಿಗಳನ್ನು ಹಿಡಿಯುವ ಸಲುವಾಗಿ ಹಾಕಲಾಗಿದ್ದ ಉರುಳಿಗೆ ಸಿಲುಕಿ ಹುಲಿ ಸಾವನ್ನಪ್ಪಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಬೇಟೆಗಾರರು ಪ್ರಾಣಿಗಳನ್ನು ಹಿಡಿಯುವ ಸಲುವಾಗಿ ಅರಣ್ಯ ಪ್ರದೇಶದಲ್ಲಿ ಇಂಥ ಉರುಳು ಹಾಕಿರುತ್ತಾರೆ.

ಇದನ್ನೂ ಓದಿ: Accident between 2 vehicles: ಟಾಟಾ ಏಸ್ – ಲಾರಿ ಢಿಕ್ಕಿ : 6 ಸಾವು, 5 ಮಂದಿಗೆ ಗಾಯ

ನಿನ್ನೆ ತಡರಾತ್ರಿ ಅರಣ್ಯ ಸಿಬ್ಬಂದಿಯೊಬ್ಬರು ನೇಣುಬಿಗಿದ ಸ್ಥಿತಿಯಲ್ಲಿದ್ದ ಹುಲಿಯ ಶವವನ್ನು ಕಂಡಿದ್ದಾರೆ. ಪೆನ್ನಾ ಹುಲಿ ಸಂರಕ್ಷಿತಾರಣ್ಯದ ತಿಲ್ಗು ಬೀಟ್ ನ ಉತ್ತರ ಭಾಗದ ಕಾಡಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಹುಲಿಯ ಸಾವಿನ ಬಗ್ಗೆ ಹಲವಾರು ಅನುಮಾನಗಳು ಮೂಡಿದೆ. 2 ವರ್ಷ ವಯಸ್ಸಿನ ದೊಡ್ಡ ಗಾತ್ರ ಹುಲಿಯು ವೈರ್ ಗೆ ಸಿಲುಕಿ ನೇಣು ಬಿಗಿಯಲು ಹೇಗೆ ಸಾಧ್ಯ ಎಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚತ್ತರ್ ಪುರ ವ್ಯಾಪ್ತಿಯ ಅರಣ್ಯ ಸಂರಕ್ಷಣಾಧಿಕಾರಿ ಸಂಜೀವ್ ಝೂ ಅವರು, ಹುಲಿಯ ಸಾವಿನ ಬಗ್ಗೆ ಅನುಮಾನಗಳಿವೆ. ಹೀಗಾಗಿ ಹುಲಿಯನ್ನು ಹೇಗೆ ಮತ್ತು ಯಾವ ಸಂದರ್ಭದಲ್ಲಿ ಕೊಲೆಗೈಯಲಾಗಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಹುಲಿಯ ಶವದ ಮಾದರಿಗಳನ್ನು ಸಂಗ್ರಹಿಸಿದ್ದು, ಪಶುವೈದ್ಯರು ಶವಪರೀಕ್ಷೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Car Accident in sindagi: ಭೀಕರ ರಸ್ತೆ ಅಪಘಾತ: ಪೊಲೀಸ್‌ ಅಧಿಕಾರಿ-ಪತ್ನಿ ಸಾವು

ಇದೊಂದು ಗಂಭೀರ ಪ್ರಕರಣವಾಗಿದ್ದು, ಶ್ವಾನದಳವನ್ನು ಕರೆಸಿ ಅರಣ್ಯಾಧಿಕಾರಿಗಳು ಘಟನೆ ನಡೆದ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಹುಲಿ ಸಾವಿಗೆ ಸಂಬಂಧಿಸಿದಂತೆ ಏನೇ ಮಾಹಿತಿ ಸಿಕ್ಕರೂ ಕೂಡಲೇ ತಮ್ಮ ಗಮನಕ್ಕೆ ತರುವಂತೆ ಅರಣ್ಯಾಧಿಕಾರಿಗಳು ಸ್ಥಳೀಯರಿಗೆ ಸೂಚನೆ ನೀಡಿದ್ದಾರೆ. ಅಂದಹಾಗೆ, ಮಧ್ಯಪ್ರದೇಶವು ಪನ್ನಾ, ಕನ್ಹಾ, ಬಾಂಧವಗಢ, ಪೆಂಚ್, ಸತ್ಪುರ, ಸಂಜಯ್ ದುಬ್ರಿ ಈ 6 ಹುಲಿ ಸಂರಕ್ಷಿತಾರಣ್ಯಗಳನ್ನು ಹೊಂದಿದೆ. ಆದರೆ ಸಂರಕ್ಷಿತಾರಣ್ಯದಲ್ಲೇ ಹುಲಿ ಹೀಗೆ ದುರಂತ ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ.

Tiger Death: Tiger body found hanging from tree and the tragedy happened in the Panna reserve forest

Comments are closed.