ಬೆಂಗಳೂರು : ರಾಜ್ಯ ರಾಜಧಾನಿ ಬೆಂದಕಾಳೂರು ಬೆಂಗಳೂರಿಗೆ (Bangalore) ಟ್ರಾಫಿಕ್ ತವರು ಅನ್ನೋ ಹೆಗ್ಗಳಿಕೆ ಇದೆ. ಇದರೊಂದಿಗೆ ಈಗ ರೋಗಗಳ ನಗರಿ ಎಂಬ ಹೊಸ ನಾಮಕರಣವೂ ಆದರೆ ಅಚ್ಚರಿ ಏನಿಲ್ಲ. ಇದಕ್ಕೆ ಕಾರಣ ಡೆಂಘೀ ಕೇಸ್ ಗಳ (Dengue Case Hike) ಸಂಖ್ಯೆ. ಕಳೆದ ಒಂದೆರಡು ತಿಂಗಳಿನಿಂದ ಏರುಗತಿಯಲ್ಲಿದ್ದ ಪ್ರಕರಣಗಳ ಸಂಖ್ಯೆ ಈಗ ಆತಂಕಕಾರಿ ಅಂಕಿಅಂಶದ ಅಂಚು ತಲುಪಿದೆ.
ದಿನಕಳೆದಂತೆ ವಾತಾವರಣದಲ್ಲಿನ ಬದಲಾವಣೆ, ಮಳೆ ಬಿಸಿಲು ಸೇರಿದಂತೆ ಹಲವು ಕಾರಣಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಂಘಿ ಪ್ರಕರಣಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಒಂದರ್ಥದಲ್ಲಿ ಬೆಂಗಳೂರು ಡೆಂಘಿಯ ಹಾಟ್ ಸ್ಪಾಟ್ ಆಗಿ ಬದಲಾಗುತ್ತಿದೆ. ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣ ಹೆಚ್ಚಳವಾಗ್ತಿದ್ದು, ಈ ತಿಂಗಳ 16 ದಿಸ್ಥಿತಇ ಬೆಂಗಳೂರಿನ ಒಟ್ಟು 1,766 ಮಂದಿಗೆ ಡೆಂಘೀ ರೋಗ ತಗುಲಿದೆ.

ಬಿಸಿಲು ,ಮಳೆ ಹವಾಮಾನ ಬದಲಾವಣೆಯಿಂದ ಡೆಂಘೀ ಏರಿಕೆಯಾಗ್ತಿದೆ ಎನ್ನಲಾಗಿದ್ದು, ಆರೋಗ್ಯ ಇಲಾಖೆ ಮಾಹಿತಿಯಂತೆ 12,693 ಮಂದಿ ಡೆಂಘಿ ಯಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿ 11,367 ಮಂದು ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ಕಳುಹಿಸಲಾಗಿದ್ದು ಇದರಲ್ಲಿ 5,220 ಮಂದಿಯಲ್ಲಿ ಡೆಂಘೀ ಧೃಢಪಟ್ಟಿದೆ.
ಇದನ್ನೂ ಓದಿ : ತಮಿಳುನಾಡಿಗೆ ಹರಿದ ಕಾವೇರಿ ನೀರು : ಬೆಂಗಳೂರಿಗೆ ಕಾದಿದೆ ಜಲಕ್ಷಾಮ
ರಾಜ್ಯದ ದಾಖಲಾದ ಡೆಂಘೀ ಪ್ರಕರಣದಲ್ಲಿ ಬಿಬಿಎಂಪಿಯದ್ದೇ ಸಿಂಹ ಪಾಲಾಗಿದ್ದು, ರಾಜ್ಯದ ಇತರ ಜಿಲ್ಲೆಗಳಿಗಿಂತ ಹೆಚ್ಚಿನ ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲೇ ದಾಖಲಾಗಿವೆ. ಕಳೆದ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ 1,161 ಪ್ರಕರಣ ಧೃಢಪಟ್ಟಿತ್ತು ಈ ವರ್ಷಾಂತ್ಯಕ್ಕೆ 75,035 ಶಂಕಿತರಲ್ಲಿ 10,866 ಮಂದಿಗೆ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ2,313 ಮಂದಿಗೆ ಡೆಂಘೀ ಖಚಿತವಾಗಿತ್ತು.
ಆದರೆ ಈ ವರ್ಷ ಮಾತ್ರ ಸದ್ದಿಲ್ಲದೇ ಡೆಂಗ್ಯು ಜೊತೆಗೆ ಚಿಕನ್ ಗುನ್ಯಾ ಸಂಖ್ಯೆಯೂ ಏರಿಕೆಯಾಗಿದೆ. ಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ 415 ಶಂಕಿತರು ಪತ್ತೆಯಾಗಿದ್ದು 75 ಮಂದಿಗೆ ಈಗಾಗಲೇ ರಕ್ತ ಮಾದರಿ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 34 ಮಂದಿಗೆ ಇದುವರೆಗೆ ಚಿಕನ್ ಗುನ್ಯಾ ಧೃಢವಾಗಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ 2000 ರೂ. ಸಿಗದವರಿಗೆ ಗುಡ್‌ನ್ಯೂಸ್ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಕಸದ ನಿರ್ವಹಣೆ ಹಾಗೂ ಮಳೆಯ ನಿರ್ವಹಣೆಯಲ್ಲಿ ಬಿಬಿಎಂಪಿ ವಿಫಲವಾಗಿದ್ದು ಪುಟ್ಟ ಪುಟ್ಟ ಮಳೆಗೂ ಬಿಬಿಎಂಪಿ ವ್ಯಾಪ್ತಿಯ ಚರಂಡಿ, ರಾಜಕಾಲುವೆ ಹಾಗೂ ಮನೆಮತ್ತು ಮನೆಗಳಿಗೆ ನೀರು ತುಂಬುವ ಸ್ಥಿತಿ ಇದೆ. ಇದರಿಂದ ಸೊಳ್ಳೆಗಳ ಉತ್ಪಾದನೆ ಹೆಚ್ಚಿದ್ದು ಜನರು ಸೊಳ್ಳೆ ಕಡಿತದಿಂದಲೇ ಡೆಂಘ್ಯು ಪ್ರಮಾಣ ಹೆಚ್ಚಿದೆ. ಸರಕಾರಿ ಆಸ್ಪತ್ರೆ ಸೇರಿದಂತೆ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲೂ ನೂರಾರು ಸಂಖ್ಯೆಯಲ್ಲಿ ಡೆಂಘ್ಯು ರೋಗಿಗಳು ದಾಖಲಾಗುತ್ತಿದ್ದಾರೆ.

ಸಾಮಾನ್ಯವಾಗಿ ರಕ್ತದಲ್ಲಿ ಪ್ಲೇಟ್ಲೇಟ್ಸ್ ಸಂಖ್ಯೆ ಕಡಿಮೆಯಾಗೋದರಿಂದ ಈ ಕಾಯಿಲೆ ಕಾಣಿಸಿಕೊಳ್ಳುತ್ತೆಯಾದರೂ ಬಿಪಿ,ಶುಗರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಡೆಂಘ್ಯು ಮಾರಣಾಂತಿಕ ಆದರೂ ಅಚ್ಚರಿ ಏನಿಲ್ಲ. ಹೀಗಾಗಿ ಮನೆ ,ಕಚೇರಿ ಸೇರಿದಂತೆ ಎಲ್ಲೆಡೆ ಹಗಲು ಹೊತ್ತಿನಲ್ಲಿ ಸೊಳ್ಳೆ ಕಚ್ಚಿಸಿಕೊಳ್ಳದಂತೆ ಹಾಗೂ ಸೊಳ್ಳೆಗಳ ಉತ್ಪಾದನೆಯಾಗದಂತೆ ನೋಡಿಕೊಳ್ಳುವಂತೆ ಸಾರ್ವಜನಿಕರಿಗೆ ಬಿಬಿಎಂಪಿ ಮನವಿ ಮಾಡಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ 2 ತಿಂಗಳಲ್ಲಿ 3,200 ಡೆಂಗ್ಯೂ ಪ್ರಕರಣ : ಎಚ್ಚರಿಕೆ ಕೊಟ್ಟ ಆರೋಗ್ಯ ಸಚಿವ, ಏನಿದರ ಲಕ್ಷ್ಮಣ
ಮಾತ್ರವಲ್ಲ ಬಿಬಿಎಂಪಿ ವತಿಯಿಂದ ಸೊಳ್ಳೆ ನಾಶ ಹಾಗೂ ಸೊಳ್ಳೆ ಉತ್ಪಾದನೆ ನಿಯಂತ್ರಿಸಲು ಫಾಗಿಂಗ್ ಕೂಡ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಬೆಂಗಳೂರು ಬಿಬಿಎಂಪಿ ಸ್ವಚ್ಛತೆ ಹಾಗೂ ಆರೋಗ್ಯ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಕಾಯಿಲೆಯೊಂದಿಗೆ ಬೆಂಗಳೂರಿಗರು ಹೆಣಗಾಡುವ ಸ್ಥಿತಿ ಎದುರಾಗಿದೆ.
16 days 1700 dengue cases Dengue fever outbreak in Bengaluru