ಬೆಂಗಳೂರು : ರಾಜ್ಯದಲ್ಲಿ ಕೊರೋನಾ ನಾಲ್ಕನೇ ಅಲೆಯ ಭೀತಿಯ ನಡುವೆಯೂ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಆದರೆ ವ್ಯಾಪಾರಸ್ಥರು ಮಾತ್ರ ವ್ಯಾಪಾರದಲ್ಲಿ ಏರಿಕೆ ಕಾಣದೇ ಕಂಗಾಲಾಗಿದ್ದಾರೆ. ಈ ಮಧ್ಯೆ ಎರಡು ವರ್ಷಗಳಿಂದ ನಷ್ಟದಲ್ಲಿರೋ ಹೊಟೇಲ್ ಮಾಲೀಕರು ಮಾತ್ರ ತಮ್ಮ ನಷ್ಟ ಸರಿತೂಗಿಸಿಕೊಂಡು ಉದ್ಯಮಮುಂದುವರೆಸಲು ಬೆಂಗಳೂರಿನಲ್ಲಿ ದಿನದ 24 ಗಂಟೆಯೂ (24 hours Hotel Open) ಹೊಟೇಲ್ ಬಾಗಿಲು ತೆರೆಯಲು ಅನುಮತಿ ಕೋರುತ್ತಿದ್ದಾರೆ.
ಆದರೆ ಈ ಬೇಡಿಕೆಗೆ ಸರ್ಕಾರ ಒಪ್ಪಿದ್ದರೂ ಪೊಲೀಸ್ ಇಲಾಖೆ ಮಾತ್ರ ಅನುಮತಿ ನೀಡಲು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಅನುಮತಿ ವಿಚಾರದಲ್ಲಿ ಹೋಟೆಲ್ ಮಾಲೀಕರ ಸಂಘ ಹಾಗೂ ಪೊಲೀಸರ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ. ಕರ್ನಾಟಕ ಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆ 1961 ರ ಅಡಿಯಲ್ಲಿ ನೋಂದಾಯಿಸಲಾದ ಎಲ್ಲಾ ಹೋಟೆಲ್ ಗಳಿಗೆ ದಿನದ 24 ಗಂಟೆಯೂ ಕೆಲಸ ನಿರ್ವಹಿಸಲು ಅನುಮತಿನೀಡಬೇಕೆಂದು ಹೊಟೇಲ್ ಗಳಮಾಲೀಕರು ಒತ್ತಾಯಿಸುತ್ತಿದ್ದಾರೆ. ಹೊಟೇಲ್ ಮಾಲೀಕರ ಬೇಡಿಕೆ ಈಡೇರಿಸಲು ಕಾರ್ಮಿಕ ಇಲಾಖೆ ಸಿದ್ಧವಾಗಿದೆ. ಆದರೆ ಇದಕ್ಕಾಗಿ ಕಾರ್ಮಿಕ ಇಲಾಖೆ 15 ನಿಬಂಧನೆ ವಿಧಿಸಿದ್ದು ಅದರಲ್ಲಿ ಪೊಲೀಸರ ಅನುಮತಿ ಕಡ್ಡಾಯ ಎಂದಿದೆ.
ಆದರೆ ಸದ್ಯ ಬೆಂಗಳೂರು ಪೊಲೀಸರು ಹಾಗೂ ಹೋಟೆಲ್ ಮಾಲೀಕರ ನಡುವೆ ಇದೇ ವಿಚಾರಕ್ಕೆ ಸಂಘರ್ಷ ಮೂಡಿದ್ದು, 24/7 ಕಾರ್ಯಚಟುವಟಿಕೆಗೆ ಬೆಂಗಳೂರು ಪೊಲೀಸರ ಒಪ್ಪಿಗೆ ನೀಡುತ್ತಿಲ್ಲ. ಕೊರೋನಾ ವೇಳೆಯಲ್ಲೂ ಪೊಲೀಸರು ದಿನದ 24 ಗಂಟೆ ದುಡಿದಿದ್ದರು. ಅಲ್ಲದೇ ಕೊರೋನಾದಿಂದ ಸಾಕಷ್ಟು ಪೊಲೀಸ್ ಸಿಬ್ಬಂದಿಯೂ ಸಾವನ್ನಪ್ಪಿದ್ದು ಪೊಲೀಸ್ ಇಲಾಖೆಯೂ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಇದರಿಂದ ಹೊಟೇಲ್ ಗಳಿಗೆ ರಾತ್ರಿ ಪೂರ್ತಿ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎನ್ನುತ್ತಿರುವ ಪೊಲೀಸ್ ಇಲಾಖೆ 24 ಗಂಟೆಗಳ ಕಾಲ ಭದ್ರತೆ ಒದಗಿಸುವ ಸ್ಥಿತಿ ಎದುರಾಗುತ್ತದೆ. ಹೀಗಾಗಿ ಇಲಾಖೆ ಅನುಮತಿ ನೀಡಲು ಸಿದ್ಧವಿಲ್ಲ.
ಈ ಬಗ್ಗೆ ಜೂನ್ 14 ರಂದು ಅಡಿಷನಲ್ ಚೀಫ್ ಸೆಕ್ರೆಟರಿ ರಮಣ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆದಿತ್ತ. ಸದ್ಯ ಬೆಂಗಳೂರಿನಲ್ಲಿ ರಾತ್ರಿ 1 ಗಂಟೆವರೆಗೂ ಹೋಟೆಲ್ ತೆರೆಯಲು ಅವಕಾಶ ವಿದೆ. ಆದರೂ ಪೊಲೀಸರು ಮುಂಚಿತವಾಗೇ ಮುಚ್ಚಿಸುತ್ತಿದ್ದಾರೆ ಎಂದು ಹೋಟೆಲ್ ಮಾಲೀಕರ ಸಂಘದಿಂದ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಮತ್ತೊಮ್ಮೆ ಹೊಟೇಲ್ ಮತ್ತು ಪೊಲೀಸರ ನಡುವಿನ ತಿಕ್ಕಾಟ ಮುನ್ನಲೆಗೆ ಬಂದಿದೆ. ಸದ್ಯ ಪೊಲೀಸರು ಅನುಮತಿ ಕೊಟ್ಟರೆ ಕಾರ್ಮಿಕ ಇಲಾಖೆಯಿಂದ 24/7 ಹೋಟೆಲ್ ತೆರೆಯಲು ಅನುಮತಿ ಸಿಗೋದು ಪಕ್ಕಾ. ಹೀಗಾಗಿ ಮತ್ತೊಮ್ಮೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮನವೊಲಿಸಲು ಮುಂದಾಗಿರೋ ಹೋಟೆಲ್ ಮಾಲೀಕರ ಸಂಘ ಮನವಿ ಸಲ್ಲಿಸಿದೆ.
ಇದನ್ನೂ ಓದಿ : 4 ಗಂಟೆಯ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಬಿಬಿಎಂಪಿ ಖರ್ಚು ಮಾಡಿದ್ದು 23 ಕೋಟಿ
ಇದನ್ನೂ ಓದಿ : Mulki suicide : ಮೂವರು ಮಕ್ಕಳನ್ನು ಬಾವಿಗೆ ತಳ್ಳಿ, ಪತ್ನಿಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಪಾಪಿ ತಂದೆ
24 hours Hotel Open in Bangalore, Police Department Not permitted