India tour of England : ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾಗೆ ಬಿಗ್ ಶಾಕ್

ಲೀಸೆಸ್ಟರ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ (India tour of England), ಲೀಸೆಸ್ಟರ್ ಶೈರ್ (Leicestershire) ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯ ಆಡುತ್ತಿದೆ. ಅಭ್ಯಾಸ ಪಂದ್ಯದ ಮೊದಲ ದಿನ ಪ್ರಮುಖ ಆಟಗಾರರೆಲ್ಲಾ ವೈಫಲ್ಯ ಕಂಡಿದ್ದಾರೆ. ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ಹನುಮ ವಿಹಾರಿ.. ಹೀಗೆ ತಂಡದ ಪ್ರಮುಖ ಬ್ಯಾಟ್ಸ್’ಮನ್’ಗಳೆಲ್ಲಾ ದೊಡ್ಡ ಮೊತ್ತ ಗಳಿಸಲು ವಿಫಲರಾಗಿದ್ದಾರೆ.

ಲೀಸೆಸ್ಟರ್ ಶೈರ್ ವಿರುದ್ಧದ ಏಕೈಕ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Indian Cricket Team Captain Rohit Sharma) ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇನ್ನಿಂಗ್ಸ್ ಆರಂಭಿಸಿದ ರೋಹಿತ್-ಗಿಲ್ ಜೋಡಿ ಮೊದಲ ವಿಕೆಟ್”ಗೆ 35 ರನ್ ಸೇರಿಸಿ ಬೇರ್ಪಟ್ಟಿತು. ನಾಯಕ ರೋಹಿತ್ 25 ರನ್ ಗಳಿಸಿ ಔಟಾದ್ರೆ, ಗಿಲ್ 21 ರನ್ನಿಗೆ ವಿಕೆಟ್ ಒಪ್ಪಿಸಿದ್ರು.

3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಹನುಮ ವಿಹಾರಿ ಮೂರೇ ರನ್ನಿಗೆ ಔಟಾದ್ರೆ, 4ನೇ ಕ್ರಮಾಂಕದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ 69 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 33 ರನ್ ಗಳಿಸಿ ಔಟಾದ್ರು. ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು.

ಟೀಮ್ ಇಂಡಿಯಾ ಆಟಗಾರರಾದ ಚೇತೇಶ್ವರ್ ಪೂಜಾರ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಈ ಅಭ್ಯಾಸ ಪಂದ್ಯದಲ್ಲಿ ಎದುರಾಳಿ ಲೀಸೆಸ್ಟರ್’ಶೈರ್ ತಂಡದ ಪರ ಆಡುತ್ತಿದ್ದಾರೆ. ವಿಶೇಷ ಏನೆಂದರೆ ಪ್ರಸಿದ್ಧ್ ಕೃಷ್ಣ ಬೌಲಿಂಗ್”ನಲ್ಲಿ ಶ್ರೇಯಸ್ ಅಯ್ಯರ್ , ವಿಕೆಟ್ ಕೀಪರ್ ರಿಷಭ್ ಪಂತ್”ಗೆ ಕ್ಯಾಚಿತ್ತು ಔಟಾದ್ರು.

ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯ ಜುಲೈ ಒಂದರಂದು ಎಡ್ಜ್”ಬಾಸ್ಟನ್ ಮೈದಾನದಲ್ಲಿ ಆರಂಭವಾಗಲಿದೆ. ಇದು ಕಳೆದ ವರ್ಷ ಕೋವಿಡ್ ಕಾರಣದಿಂದ ಮೊಟಕುಗೊಂಡಿದ್ದ ಸರಣಿಯ ಕೊನೆಯ ಪಂದ್ಯ. ಐದು ಪಂದ್ಯಗಳ ಸರಣಿಯಲ್ಲಿ ನಾಲ್ಕು ಪಂದ್ಯಗಳು ಮುಗಿದಿದ್ದ ಸರಣಿಯಲ್ಲಿ ಭಾರತ 2-1ರಲ್ಲಿ ಮುನ್ನಡೆಯಲ್ಲಿದೆ.

ಇದನ್ನೂ ಓದಿ : Rohit Sharma : ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು 15 ವರ್ಷ ; ಭಾವುಕ ಶಬ್ದಗಳಲ್ಲಿ ಪತ್ರ ಬರೆದ ರೋಹಿತ್ ಶರ್ಮಾ

ಇದನ್ನೂ ಓದಿ : India vs Leicestershire : ಟೀಮ್ ಇಂಡಿಯಾದ ವಿರುದ್ಧವೇ ಕಣಕ್ಕಿಳಿದ ಪಂತ್, ಪೂಜಾರ, ಬುಮ್ರಾ, ಪ್ರಸಿದ್ದ ಕೃಷ್ಣ

India tour of England Leicestershire against Match Indian Players poor performance

Comments are closed.