Puneeth Rajkumar flowers Show : ಫಲಪುಷ್ಪ ಪ್ರದರ್ಶನದಲ್ಲಿ ನಮ್ಮ ಅಪ್ಪು : ಅಗಲಿದ ನಟ ಪುನೀತ್‌ ರಾಜ್‌ ಕುಮಾರ್‌ಗೆ ವಿಭಿನ್ನ ಗೌರವ

ಬೆಂಗಳೂರಿನ ಸಾಂಸ್ಕೃತಿಕ‌ ಹಿರಿಮೆ ಯಲ್ಲಿ ಪ್ರತಿ ವರ್ಷವೂ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಡೆಯೋ ಫಲಪುಷ್ಪ ಪ್ರದರ್ಶನಕ್ಕೆ ಅದರದ್ದೇ ಆದ ಸ್ಥಾನ ಹಾಗೂ ಮಹತ್ವವಿದೆ. ಆದರೆ ಕಳೆದ ಎರಡು ವರ್ಷಗಳಿಂದ ಕೊರೋನಾ ಜನರಿಂದ ಈ ಖುಷಿಯನ್ನು ಕಸಿದುಕೊಂಡಿತ್ತು. ಈಗ ಮತ್ತೆ ಫಲಪುಷ್ಪ ಪ್ರದರ್ಶನದ ಸಂಭ್ರಮಕ್ಕೆ ದಿನಗಣನೆ ನಡೆದಿದ್ದು ಈ ಬಾರಿ ಜನಾಕರ್ಷಣೆಯಾಗಿ ಪುನೀತ್ ರಾಜ್ ಕುಮಾರ್ ಹೂವಿನಲ್ಲಿ‌ (Puneeth Rajkumar flowers Show) ಮೂಡಿ ಬರಲಿದ್ದಾರೆ. ಮಾತ್ರವಲ್ಲ ಪುನೀತ್ ಗೆ ಡಾ.ರಾಜ್ ಕೂಡ ಸಾಥ್ ನೀಡಲಿದ್ದಾರೆ.

ಈ ಭಾರಿ ರಾಜ್ಯ ರಾಜಧಾನಿ ಬೆಂಗಳೂರಿನ ಲಾಲ್ ಭಾಗ್‌ನಲ್ಲಿ ಫ್ಲವರ್ ಶೋ ಅಗಸ್ಟ್ 5 ರಿಂದ 15 ರ ತನಕ ನಡೆಯಲಿದೆ. ಇದು ಲಾಲ್ ಭಾಗ್ ನಲ್ಲಿ ನಡೆಯುತ್ತಿರೋ 212 ನೇ ಫವ್ಲರ್ ಶೋ ಆಗಿದ್ದು, ಇದಕ್ಕಾಗಿ ಸಿದ್ಧತೆಗಳು ಬಹುತೇಕ ಅಂತಿಮಗೊಂಡಿವೆ. 75 ನೇ ಸ್ವಾತಂತ್ರ್ಯೋತ್ಸವವನ್ನು ಆಜಾದಿ ಕಾ ಅಮೃತ್ ಮಹೋತ್ಸವ್ ಎಂದು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

ಫವ್ಲರ್ ಶೋನಲ್ಲಿ 500 ಕ್ಕೂ ಹೆಚ್ಚು ಬಗೆಯ ಹೂವುಗಳಿಂದ ಪುನೀತ್ ರಾಜ್ ಕುಮಾರ್ ಪ್ರತಿಮೆ, ಡಾ.ರಾಜ್ ಬೇಡರ ಕಣ್ಣಪ್ಪ ಸಿನಿಮಾದ ವಾಲ್ ಸಿಕ್ವೆನ್ಸ್ ಹಾಗೂ ಡಾ.ರಾಜ್ ಹುಟ್ಟೂರು ಗಾಜನೂರಿನ ಮನೆಯನ್ನು ಹೂವಿನಿಂದಲೇ ಸೃಷ್ಟಿಸಲಾಗುತ್ತದೆ. ಇದಕ್ಕಾಗಿ ಅಂದಾಜು 30 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

10 ದಿನಗಳ ಕಾಲ ನಡೆಯುವ ಈ ಫ್ಲವರ್ ಶೋಗೆ ಲಕ್ಷಾಂತರ ಜನರು ಭೇಟಿ ಕೊಡುವ ನೀರಿಕ್ಷೆ ಇದ್ದು,ವೀಕೆಂಡ್ ನಲ್ಲಿ ದೊಡ್ಡವರಿಗೆ 100 ರೂಪಾಯಿ ಹಾಗೂ ಮಕ್ಕಳಿಗೆ 30 ರೂಪಾಯಿ ದರ ನಿಗದಿ ಪಡಿಸಲಾಗಿದೆ. ಇನ್ನು ವಾರದ ದಿನಗಳಲ್ಲಿ ಹಿರಿಯರಿಗೆ 80 ರೂಪಾಯಿ ದರ ನಿಗದಿಯಾಗಿದೆ. 1 ರಿಂದ 10 ನೇ ತರಗತಿಯ ಸಮವಸ್ತ್ರ ಧರಿಸಿ ಬರುವ ಮಕ್ಕಳಿಗೆ ಫಲಪುಷ್ಪ ಪ್ರದರ್ಶನಕ್ಕೆ ಉಚಿತ ಪ್ರವೇಶವಿದೆ. ಫ್ಲವರ್ ಶೋ ಉದ್ಘಾಟನೆಗೆ ಡಾ.ರಾಜ್ ಹಾಗೂ ಪುನೀತ್ ಕುಟುಂಬ ಭಾಗಿಯಾಗಲಿದ್ದು, ಊಟಿಯಿಂದ ವಿವಿಧ ಬಗೆಯ ಹೂವುಗಳನ್ನು ತರಿಸಿ ಅಲಂಕರಿಸಲು ತೋಟಗಾರಿಕಾ ಇಲಾಖೆ ಸಿದ್ಧವಾಗಿದೆ.

ಈ ಹಿಂದೆ ಸಸ್ಯಕಾಶಿಯಲ್ಲಿ ಫ್ಲವರ್ ಶೋ ವೇಳೆ ಜೇನುನೊಣ ದಾಳಿಯಂತಹ ಘಟನೆಗಳು ನಡೆದಿವೆ. ಹೀಗಾಗಿ ಫ್ಲವರ್ ಶೋ ವೇಳೆ ಟ್ರಾಫಿಕ್, ಜನಸಂಚಾರ ಭದ್ರತೆ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ತೋಟಗಾರಿಕಾ ಇಲಾಖೆ ಹೆಚ್ಚಿನ ಕಾಳಜಿ ವಹಿಸಿದೆ.

ಇದನ್ನೂ ಓದಿ : 5G test Namma metro : ಭಾರತದಲ್ಲೇ ಮೊದಲ ಬಾರಿಗೆ 5ಜಿ ನೆಟ್ವರ್ಕ್ ಪರೀಕ್ಷೆ: ಹೊಸ ಮೈಲಿಗಲ್ಲು ಸ್ಥಾಪಿಸಿದ ನಮ್ಮ ಮೆಟ್ರೋ

ಇದನ್ನೂ ಓದಿ : namma metro : ಲಿಫ್ಟ್​ ದುರ್ಬಳಕೆ ತಪ್ಪಿಸಲು ಬಿಎಂಆರ್​ಸಿಎಲ್​ ಪ್ಲಾನ್​ : ಮೆಟ್ರೋದಲ್ಲಿನ್ನು ಲಿಫ್ಟ್​ ಬಳಕೆಗೆ ಬೇಕು ಟೋಕನ್​

A different tribute to our Appu actor Puneeth Rajkumar flowers Show

Comments are closed.