Sindhu Loknath : ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ ಸಿಂಧೂ ಲೋಕನಾಥ್: ಡ್ರಗ್ಸ್ ಕುರಿತ ರೋಚಕ ಕಥೆ ‘1975’

ಸ್ಯಾಂಡಲ್‌ವುಡ್‌ ಸದ್ಯ ಸದ್ದು ಮಾಡ್ತಿರೋ ಸಿನಿಮಾಗಳ ಸಾಲಿಗೆ ಸೇರಿದೆ 1975 ಸಿನಿಮಾ (1975 Movie). ಒನ್ ಲವ್ ಟೂ ಸ್ಟೋರಿ ಸಿನಿಮಾ ಮೂಲಕ ಕನ್ನಡ ಚಿತ್ರ ಲೋಕಕ್ಕೆ ಪರಿಚಿತರಾದ ನಿರ್ದೇಶಕ ವಸಿಷ್ಠ ಬಂಟನೂರು ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ತಯಾರಾಗಿದೆ. ಇದೀಗ ಸಿಂಧೂ ಲೋಕನಾಥ್‌ (Sindhu Loknath ) ಸಿನಿಮಾದ ಹಾಡಿಗೆ ಸಖತ್‌ ಹಾಟ್‌ ಆಗಿ ಸ್ಟೆಪ್‌ ಹಾಕಿ ಸುದ್ದಿಯಲ್ಲಿದ್ದಾರೆ.

Sindhu Loknath who stepped into the special song 1975 Movie 1

1975 ಸಿನಿಮಾದ ಮೆಲೋಡಿ ಪಬ್ ಸಾಂಗ್ ವೊಂದರಲ್ಲಿ ಸಿಂಧೂ ಲೋಕನಾಥ್ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ನನ್ನ ಸಿನಿಮಾ ಜರ್ನಿಯಲ್ಲಿ ಈ ರೀತಿ ಸ್ಪೆಷಲ್ ಸಾಂಗ್ ಗೆ ಹೆಜ್ಜೆ ಹಾಕಿರುವುದು ಇದೇ ಮೊದಲು ಎಂದಿದ್ದಾರೆ ಸಿಂಧೂ ಲೋಕನಾಥ್. ಸಾಂಗ್ ತುಂಬಾ ಚೆನ್ನಾಗಿದೆ. ಈ ಸಾಂಗ್ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಹೊಸಬರ ತಂಡ ಇಡೀ ಟೀಂಗೆ ಒಳ್ಳೆದಾಗಲಿ ಎಂದು ಸಿಂಧು ಲೋಕನಾಥ್ ‌ ಹಾರೈಸಿದ್ದಾರೆ.

Sindhu Loknath who stepped into the special song 1975 Movie 3

ಕ್ರೈಮ್ ಥ್ರಿಲ್ಲರ್ ಕಥಾಹೂರಣ ಈ ಸಿನಿಮಾದಲ್ಲಿ ಚಕ್ರವರ್ತಿ ಚಂದ್ರಚೂಡ್, ಜಯ್ ಶೆಟ್ಟಿ, ಮಾನಸ, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಪ್ರತಿಭಾನ್ವಿತ ತಾರಾ ಬಳಗವಿದೆ. ಡ್ರಗ್ಸ್‌ ಕುರಿತು ಕಥಾ ಹಂದರ ಹೊಂದಿರುವ ಸಿನಿಮಾದ ಸ್ಕ್ರಿಫ್ಟ್‌ ತುಂಬಾನೆ ಚೆನ್ನಾಗಿದೆ. ಜೊತೆಗೆ ನಿರ್ಮಾಪಕರು ಕೂಡ ಕೇಳಿದ್ದನ್ನೆಲ್ಲಾ ಕೊಟ್ಟಿದ್ದಾರೆ ಎಂದ್ರು ಚಕ್ರವರ್ತಿ ಚಂದ್ರಚೂಡ್ ಹೇಳಿದರು.

Sindhu Loknath who stepped into the special song 1975 Movie

ಪ್ರೊಡಕ್ಷನ್ ಸಿಲ್ವರ್ ಸ್ಕ್ರೀನ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ದಿನೇಶ್ ರಾಜನ್ ಸಿನಿಮಾಗೆ ಬಂಡವಾಳ ಹೂಡಿದ್ದು, ಬೆಂಗಳೂರು, ಉಡುಪಿ ಸೇರಿದಂತೆ ಚಿತ್ರೀಕರಣ ನಡೆದಿದೆ. ಈಗಾಗ್ಲೇ ಶೂಟಿಂಗ್ ಮುಗಿಸಿ ಕುಂಬಳಕಾಯಿ ಹೊಡಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಲ್ಲಿ ಬ್ಯುಸಿಯಾಗಿದೆ.

ಇದನ್ನೂ ಓದಿ : ಅಜಯ್​ ದೇವಗನ್​- ಕಿಚ್ಚ ಸುದೀಪ್​ ಹಿಂದಿ ವಾರ್​..! ನಾವೂ ಭಾರತೀಯರಲ್ಲವೇ ಎಂದ ಅಭಿನಯ ಚಕ್ರವರ್ತಿ

ಇದನ್ನೂ ಓದಿ : ಕಿಚ್ಚ ಸುದೀಪ- ಅಜಯ್​ ದೇವಗನ್​ ನಡುವೆ ಭಾಷಾ ವಾರ್​ ಶುರುವಾಗಿದ್ದು ಹೇಗೆ? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​

Sindhu Loknath who stepped into the special song 1975 Movie

Comments are closed.