ಮಂಗಳವಾರ, ಏಪ್ರಿಲ್ 29, 2025
HomekarnatakaAttacked by Hindi speaker: ಬೆಂಗಳೂರು : ಕನ್ನಡ ಮಾತಾಡು ಎಂದಿದ್ದಕ್ಕೆ ಹಿಂದಿ ಭಾಷಿಕನಿಂದ ಹಲ್ಲೆ

Attacked by Hindi speaker: ಬೆಂಗಳೂರು : ಕನ್ನಡ ಮಾತಾಡು ಎಂದಿದ್ದಕ್ಕೆ ಹಿಂದಿ ಭಾಷಿಕನಿಂದ ಹಲ್ಲೆ

- Advertisement -

ಬೆಂಗಳೂರು: (Attacked by Hindi speaker) ಕನ್ನಡದಲ್ಲಿ ಮಾತಾಡು ಎಂದಿದ್ದಕ್ಕೆ ಬಿಹಾರ್‌ ಮೂಲದ ಹಿಂದಿ ಭಾಷಿಕನೋರ್ವ ಕನ್ನಡಿಗನ ಮೇಲೆ ಹಲ್ಲೆ ನಡೆಸಿ ಪೆಪ್ಸಿ ಬಾಟಲಿನಿಂದ ತಲೆಗೆ ಹೊಡೆದ ಘಟನೆ ಬೆಂಗಳೂರಿನ ಚೆನ್ನಮ್ಮನ ಕೆರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿರುವ ತಾಜಾ ಜ್ಯೂಸ್‌ ಶಾಪ್‌ ನಲ್ಲಿ ನಡೆದಿದೆ. ದೀಪಕ್‌ ಎನ್ನುವಾತ ಹಲ್ಲೆಗೊಳಗಾದ ವ್ಯಕ್ತಿ.

ದೀಪಕ್‌ ಎನ್ನುವಾತ ಐಸ್‌ ಕ್ರೀಂ ತಿನ್ನಲು ಜ್ಯೂಸ್‌ ಶಾಪ್‌ ಗೆ ಬಂದಿದ್ದಾನೆ. ನಂತರ ಐಸ್‌ ಕ್ರೀಂ ಗೆ ಹಣ ಎಷ್ಟು ಅಂತ ಕೇಳಿದ್ದಾನೆ. ಈ ವೇಳೆ ಆರೋಪಿ ಶಬ್ಬೀರ್ ಹಿಂದಿಯಲ್ಲಿ ಐಸ್‌ ಕ್ರೀಂ ಬೆಲೆ ತಿಳಿಸಿದ್ದು, ದೀಪಕ್‌ ಗೆ ಹಿಂದಿ ಬಾರದೇ ಇದ್ದ ಕಾರಣ ಕನ್ನಡದಲ್ಲಿ ಹೇಳಪ್ಪ ಎಂದಿದ್ದಾನೆ. ಈ ವೇಳೆ ಕಾರಣವೇ ಇಲ್ಲದೇ ಶಾಪ್‌ ನಲ್ಲಿದ್ದ ಆರೋಪಿ ಶಬ್ಬೀರ್‌ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೇ ಸುಖಾ ಸುಮ್ಮನೇ ದೀಪಕ್‌ ನೊಂದಿಗೆ ಗಲಾಟೆ ಮಾಡಿದ್ದಾನೆ. ಇದಾದ ಬಳಿಕ ದೀಪಕ್‌ ಮುಖಕ್ಕೆ ಪೆಪ್ಸಿ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ.

ಹಲ್ಲೆಗೊಳಗಾದ ದೀಪಕ್‌ ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಪ್ರಜ್ಞೆ ತಪ್ಪಿದ ದೀಪಕ್‌ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಘಟನೆ ಸಂಬಂಧ ದೀಪಕ್‌ನ ಪೋಷಕರು ಚೆನ್ನಮ್ಮನ ಕೆರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ : Govt bus-van accident: ಸರ್ಕಾರಿ ಬಸ್-ವ್ಯಾನ್ ಢಿಕ್ಕಿ: ಒಂದೇ ಕುಟುಂಬದ ಮೂವರು ಸಾವು

ಸರ್ಕಾರಿ ಬಸ್-ವ್ಯಾನ್ ಢಿಕ್ಕಿ: ಒಂದೇ ಕುಟುಂಬದ ಮೂವರು ಸಾವು

ತ್ರಿಪುರಾ: ಸರ್ಕಾರಿ ಬಸ್‌ಗೆ ವ್ಯಾನ್ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ವೆಲ್ಲಕೋವಿಲ್ ಬಳಿ ನಡೆದಿದೆ. ಇನ್ನೂ ಅದೇ ಕುಟುಂಬದ ಮೂವರು ಅಪಘಾತದಲ್ಲಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಮೃತರನ್ನು ತ್ರಿಪುರಾ ಪಾಂಡ್ಯನ್‌ನ ಮನೋಕರನ್ ಅವರ ಪುತ್ರ ಎಂ. ಯೋಗೇಶ್ವರನ್ (26), ಅವರ ಚಿಕ್ಕಮ್ಮ ಪ್ರಮೀಳಾ (45) ಮತ್ತು ತಾಯಿ ದೇವಿ (60) ಎಂದು ಪೊಲೀಸರು ಗುರುತಿಸಿದ್ದಾರೆ.

ಇದನ್ನೂ ಓದಿ : Cow smuggling case: ಹಸು ಕಳ್ಳಸಾಗಣೆ ಪ್ರಕರಣ: 120 ಮಂದಿ ಅರೆಸ್ಟ್‌

ಇದನ್ನೂ ಓದಿ : Madurai govt bus accident: ಮರಕ್ಕೆ ಢಿಕ್ಕಿ ಹೊಡೆದ ಸರ್ಕಾರಿ ಬಸ್: 10ಕ್ಕೂ ಹೆಚ್ಚು ಮಂದಿಗೆ ಗಾಯ

Attacked by Hindi speaker: Bangalore : Attacked by Hindi speaker for speaking Kannada

RELATED ARTICLES

Most Popular