Kulasekhara Railway track work: ಮಂಗಳೂರು: ಕುಲಶೇಖರ ರೈಲ್ವೇ ಹಳಿ ಕಾಮಗಾರಿ ಹಿನ್ನಲೆ: ಇಂದಿನಿಂದ ಮಾ. 3 ರವರೆಗೆ ರೈಲು ಸಂಚಾರ ವ್ಯತ್ಯಯ

ಮಂಗಳೂರು: (Kulasekhara Railway track work) ಕುಲಶೇಖರ ರೈಲ್ವೇ ಹಳಿ ಕಾಮಗಾರಿ ಹಿನ್ನಲೆಯಲ್ಲಿ ಇಂದಿನಿಂದ ಮಾರ್ಚ್‌ 3 ರವರೆಗೆ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದ್ದು, ಮಂಗಳೂರಿನ ಕುಲಶೇಖರದ ರೈಲು ಹಳಿಯ ಹಳೆಯ ಸುರಂಗ ಮಾರ್ಗದಲ್ಲಿ ಹಳಿಗಳ ಬದಲಾವಣೆ, ಸಿಗ್ನಲ್‌ ವ್ಯವಸ್ಥೆ ಸಹಿತ ವಿವಿಧ ಕಾಮಗಾರಿಗಳ ಹಿನ್ನಲೆಯಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಕೇರಳ ಮೂಲದ ರೈಲುಗಳ ಸಹಿತ ಹಲವು ರೈಲುಗಳ ವೇಳಾಪಟ್ಟಿಯ ಮೇಲೆ ಈ ಬದಲಾವಣೆಯು ಪರಿಣಾಮ ಬೀರಲಿದೆ ಎಂದು ತಿಳಿದುಬಂದಿದೆ. ಈ ಅವಧಿಯಲ್ಲಿ ಮಂಗಳೂರ-ಮಡಗಾಂವ್‌ ಎಕ್ಸ್‌ ಪ್ರೆಸ್ಸ ವಿಶೇಷ ರೈಲು ರದ್ದಾಗಿದೆ. ಮುಂಬೈ ಸಿಎಸ್‌ ಎಂ ಟಿ- ಮಂಗಳೂರು ಜಂಕ್ಷನ್‌ ರೈಲು ಸುರತ್ಕಲ್‌ ತನಕ ಮಾತ್ರ ಸಂಚರಿಸಲಿದೆ. ಈ ರೈಲುಗಳಲ್ಲಿ ಬಂದ ಮಂಗಳೂರಿನ ಪ್ರಯಾಣಿಕರು ಮಂಗಳೂರು ಜಂಕ್ಷನ್‌ ತನಕ ಪ್ರಯಾಣಿಸಲು ರೈಲ್ವೇ ಇಲಾಖೆ ಬಸ್‌ ವ್ಯವಸ್ಥೆ ಮಾಡಲಿದೆ ಎಂದು ಮೂಲಗಳು ತಿಳಿಸಿದೆ.

ಈ ಅವಧಿಯಲ್ಲಿ ಮಡಗಾಂವ್-‌ ಮಂಗಳೂರು ಸೆಂಟ್ರಲ್‌ ಮೆಮು ತೋಕೂರಿನಿಂದ ಪ್ರಯಾಣ ಬೆಳೆಸಲಿದೆ. ಕಾರವಾರ- ಬೆಂಗಳೂರು ಪಂಚಗಂಗಾ ಎಕ್ಸ್‌ ಪ್ರೆಸ್ಸ್‌ ಇಪ್ಪತ್ತೇಳು ದಿನಗಳ ಕಾಲ ಪಡೀಲ್‌ ಬಳಿಕ ಇಪ್ಪತ್ತು ನಿಮಿಷ ವಿಳಂಬವಾಗಿ ಸಂಚರಿಸಲಿದೆ. ಮಂಗಳೂರು ಜಂಕ್ಷನ್‌- ಯಶವಂತಪುರ ಗೋಮಟೇಶ್ವರ ಎಕ್ಸ್‌ ಪ್ರೆಸ್ಸ್‌ ಫೆ. 8 ರಂದು ಮಂಗಳೂರಿನಿಂದ ಒಂದು ಗಂಟೆ ತಡವಾಗಿ ಹೊರಡಲಿದೆ. ಕೇರಳದಿಂದ ಪಶ್ಚಿಮ ಮತ್ತು ಉತ್ತರ ಭಾರತಕ್ಕೆ ಹಲವಾರು ಸಾಪ್ತಾಹಿಕ ಎಕ್ಸ್‌ ಪ್ರೆಸ್ಸ್‌ ಸೇವೆಗಳನ್ನು ರದ್ದುಗೊಳಿಸಕಾಗುತ್ತದೆ ಮತ್ತು ಕೆಲವು ರೈಲುಗಳು ತಡವಾಗಿ ಸಂಚರಿಸಲಿದೆ ಎಂದು ತಿಳಿಸಿದೆ.

ಮಂಗಳೂರು-ಮಡಗಾಂವ್‌ -ಮಂಗಳೂರು ಎಕ್ಸ್‌ ಪ್ರೆಸ್ಸ್‌ ಸ್ಪೆಷಲ್‌ ಇಪ್ಪತ್ತೇಳು ದಿನಗಳವರೆಗೆ ಕಾರ್ಯನಿರ್ವಹಿಸುವುದಿಲ್ಲ. ಮಂಗಳೂರು ಸೆಂಟ್ರಲ್‌- ಕಬಕ ಪುತ್ತೂರು ಹಾಗೂ ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರಸ್ತೆ ಎಕ್ಸ್‌ ಪ್ರೆಸ್ಸ್‌ ಸ್ಪೆಷಲ್‌ ರೈಲುಗಳು ರದ್ದಾಗಿವೆ. ಎರಡು ದಶಕಗಳ ಹಿಂದೆ ಕಾರ್ಯಾರಂಭ ಮಾಡಿದ್ದ ಹಳೆಯ ಸುರಂಗದ ಹಳಿ ಬದಲಾವಣೆ ಹಾಗೂ ತಾಂತ್ರಿಕ ವ್ಯವಸ್ಥೆಯ ಉನ್ನತೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಪಾಲಕ್ಕಾಡ್‌ ವಿಭಾಗೀಯ ರೈಲ್ವೇ ಪ್ರಬಂಧಕ ತ್ರಿಲೋಕ್‌ ಕೊಥಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Udupi Plastic road experiment: ಉಡುಪಿಯಲ್ಲಿ ಯಶಸ್ವಿ ಕಂಡ ಪ್ಲಾಸ್ಟಿಕ್‌ ರಸ್ತೆ ಪ್ರಯೋಗ

ಮಂಗಳೂರು ಜಂಕ್ಷನ್‌ ಮತ್ತು ಜೋಕಟ್ಟೆ ವಿಭಾಗ ನಡುವೆ ಗಂಟೆಗೆ 80 ಕಿ.ಮೀ. ವೇಗದಲ್ಲಿ ಸಂಚರಿಸಲು ಅವಕಾಶವಿದ್ದು, ಹಳೆಯ ಸುರಂಗದ ಒಳಗೆ 20 ಕಿ.ಮೀ. ವೇಗದಲ್ಲಿ ಮಾತ್ರ ಸಂಚರಿಸುತ್ತಿತ್ತು. ಹಳೆಯ ಸುರಂಗದ ಒಳಗಿನ ಕಾಮಗಾರಿ ಪೂರ್ಣಗೊಂಡ ಬಳಿಕ ಸುರಂಗದ ಒಳಗೆ ಕೂಡ ಹೊರಗಿನ ವೇಗದಲ್ಲಿ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.

Kulasekhara Railway track work: Mangalore: Kulasekhara Railway track work Background: From today to Mar. Disruption of train traffic till 3

Comments are closed.