Bad Weather : ಬೆಂಗಳೂರಲ್ಲಿ ಹೆದಗೆಟ್ಟ ಹವಾಮಾನ : ಶೀತ, ಜ್ವರ, ಕೆಮ್ಮಿಗೆ ತತ್ತರಿಸಿದ ಮಕ್ಕಳು

ಬೆಂಗಳೂರು:( Bad Weather) ಬೆಂಗಳೂರಿನಲ್ಲಿ ಹವಾಮಾನ ಗಂಟೆಗೊಮ್ಮೆ ಬದಲಾಗ್ತಿದೆ. ರಾತ್ರಿ ಮೈ ನಡುಗಿಸೋ ಚಳಿ ಇದ್ದರೇ ಬೆಳ್ಳಂಬೆಳಗ್ಗೆ ಒಳ್ಳೆಯ ಬಿಸಿಲು ಮತ್ತೆ ಸಂಜೆ ಆಗೋವಷ್ಟರಲ್ಲಿ ಧಾರಾಕಾರ ಮಳೆ. ಇಂಥ ವಾತಾವರದಿಂದಾಗಿ ನಗರದಲ್ಲಿ ಮಕ್ಕಳ ಅನಾರೋಗ್ಯದ ಪ್ರಮಾಣ ಹೆಚ್ಚಲಾರಂಭಿಸಿದ್ದು ನಗರದಾದ್ಯಂತ ಮಕ್ಕಳು ಶೀತ,ಜ್ವರ,ಕೆಮ್ಮಿನಂತಹ ಸಮಸ್ಯೆಯಿಂದ ಬಳಲಾರಂಭಿಸಿದ್ದಾರೆ. ಮಾತ್ರವಲ್ಲ ಆಸ್ಪತ್ರೆಗೆ ದಾಖಲಾಗೋ‌ಮಕ್ಕಳ ಪ್ರಮಾಣವೂ ಹೆಚ್ಚಿದೆ.

( weather)ನಗರದಲ್ಲಿ ಚಳಿಗಾಲದ ಪ್ರಭಾವ ಜೋರಾಗಿದೆ. ಅದರ ಜೊತೆ ಆಗಾಗ ಸುರಿಯುತ್ತಿರುವ‌ ಮಳೆ ಹವಾಮಾನದ ಜೊತೆಗೆ ಮಕ್ಕಳ ಆರೋಗ್ಯವನ್ನು ಕೆಡಿಸುತ್ತಿದೆ. ಚಳಿಗಾಲದ ಆರಂಭ ದಲ್ಲೇ ಮಕ್ಕಳಲ್ಲಿ ವೈರಲ್ ಫೀವರ್ ಹೆಚ್ಚುತ್ತಿದ್ದು ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆ ಕಾಣಿಸಲಾರಂಭಿಸಿದೆ. ದೀಪಾವಳಿ ಪಟಾಕಿಯಿಂದಾಗಿ‌ ನಗರದಲ್ಲಿ ಶುದ್ಧ ಗಾಳಿಯ ಕೊರತೆಯೂ ಎದುರಾಗಿದೆ. ಇದರಿಂದ ಮಕ್ಕಳಲ್ಲಿ ಅಸ್ತಮಾದಂತಹ ಸಮಸ್ಯೆಗಳು ಉಲ್ಬಣಿಸಿವೆ.

ಇದರ ಜೊತೆಗೆ ನಗರದ ಮಕ್ಕಳ ಆಸ್ಪತ್ರೆಯಲ್ಲಿ ಓಪಿಡಿಯಲ್ಲಿ ಮಕ್ಕಳು ಬರುವ ಸಂಖ್ಯೆ ಹೆಚ್ಚಲಾರಂಭಿಸಿದ್ದು, ಶೇ. 10-20% ರಷ್ಟು ಮಕ್ಕಳು ಜ್ವರ, ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಗರದ ರೈನ್‌ ಬೋ ಚಿಲ್ಡ್ರನ್ ಆಸ್ಪತ್ರೆ – ದಿನಕ್ಕೆ ಶೇ.10-20% ರಷ್ಟು ಮಕ್ಕಳ ಸಂಖ್ಯೆ ಹೆಚ್ಚಳವಾಗಿದ್ದರೇ, ಕೆ.ಸಿ‌.ಜನರಲ್ ಆಸ್ಪತ್ರೆ – ದಿನಕ್ಕೆ ಶೇ. 5-10% ಮಕ್ಕಳು ಚಿಕಿತ್ಸೆಗೆ ಬರ್ತಿದ್ದಾರೆ. ಇಂದಿರಾಗಾಂಧಿ‌ ಮಕ್ಕಳ ಆಸ್ಪತ್ರೆ – ದಿನಕ್ಕೆ ಶೇ. 10-15% ಮಕ್ಕಳ ಸಂಖ್ಯೆ ಹೆಚ್ಚಳವಾಗಿದ್ದು, ಬೌರಿಂಗ್ ಆಸ್ಪತ್ರೆ – ದಿನಕ್ಕೆ ಶೇ. 5-10% ಮಕ್ಕಳು ವೈದ್ಯರ ಮೊರೆ ಹೋಗ್ತಿದ್ದಾರೆ.

ಶಾಲೆಗಳಲ್ಲಿ ಒಂದು‌ಮಗುವಿನಿಂದ ಇನ್ನೊಂದು ಮಗುವಿಗೆ ಜ್ವರ,ಶೀತ ಹಾಗೂ ಕೆಮ್ಮಿನ ಸೋಂಕು ಬಹುಬೇಗ ಹರಡುತ್ತಿದ್ದು, ಇದರಿಂದ ಮಕ್ಕಳ ಆರೋಗ್ಯ ಹದಗೆಡುತ್ತಿದೆ. ಈ‌ ಹಿನ್ನೆಲೆ ಚಳಿಗಾಲದಲ್ಲಿ ಮಕ್ಕಳನ್ನು ಬಹಳ ಜಾಗೃತಿಯಿಂದ ನೋಡಿಕೊಳ್ಳಬೇಕು ಎಂದು ಮಕ್ಕಳ ವೈದ್ಯರು ಪೋಷಕರಿಗೆ ಸಲಹೆ ನೀಡ್ತಿದ್ದಾರೆ. ಅಲ್ಲದೇ ಮಕ್ಕಳಿಗೆ ಶೀತದಂಥದ ಲಕ್ಷಣಗಳು ಬಂದಾಗ ವೈದ್ಯರನ್ನು ಸಂಪರ್ಕಿಸಬೇಕು. ಮನೆಯಲ್ಲಿಯೇ ಮಕ್ಕಳಿಗೆ ಕಷಾಯದಂಥಹ ಔಷಧಗಳನ್ನು ನೀಡಬೇಕು.‌ಮಕ್ಕಳಿಗೆ ಬಿಸಿ ಬಿಸಿಯಾದ ಆಹಾರ ನೀಡಬೇಕು. ಸ್ವೆಟರ್, ಟೊಪ್ಪಿ,ಸಾಕ್ಸ್ ಗಳನ್ನು ಬಳಸಿ ಮಕ್ಕಳನ್ನು ಬೆಚ್ಚಗೆ ಇಡುವಂತೆಯೂ ವೈದ್ಯರು ಸೂಚಿಸುತ್ತಿದ್ದಾರೆ. ಅಲ್ಲದೇ ಚಳಿಗಾಲದಲ್ಲಿ ಶೀತ ಹೆಚ್ಚಿಸುವಂತ ಹಣ್ಣುಗಳು,ಐಸ್ ಕ್ರೀಂ ಹಾಗೂ ಶೀಥಲೀಕರಿಸಿದ, ಕರಿದ ಆಹಾರ ಪದಾರ್ಥಗಳಿಂದ ಮಕ್ಕಳನ್ನು ದೂರ ಇಡುವಂತೆಯೂ ಪೋಷಕರಿಗೆ ವೈದ್ಯರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ :ಧರ್ಮಸ್ಥಳಕ್ಕೆ ಕಾಂತಾರ ನಟ ರಿಷಬ್ ಶೆಟ್ಟಿ ಭೇಟಿ : ವೀರೆಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದ ದಂಪತಿ

ಇದನ್ನೂ ಓದಿ :Bombay Team : ಕಾಂಗ್ರೆಸ್ ಯಾರಾದ್ರೂ ಬರಬಹುದು: ಪರೋಕ್ಷವಾಗಿ ಬಾಂಬೇ ಟೀಂ ಆಹ್ವಾನಿಸಿದ್ರಾ ಡಿಕೆಶಿ?!

Bad weather in the city: children with cold, fever, cough

Comments are closed.