Assault by head : ಸಿದ್ದಾಪುರ : ಕ್ಷಮೆ ಕೇಳಲು ಕೊರಗಜ್ಜನ ಸನ್ನಿಧಿಗೆ ಕರೆಯಿಸಿ ತಲವಾರಿನಿಂದ ಹಲ್ಲೆ

ಸಿದ್ದಾಪುರ : (Assault by head) ಮಾಡಿದ ತಪ್ಪಿಗೆ ಕೊರಗಜ್ಜನ ಸನ್ನಿಧಿಯಲ್ಲಿ ಕ್ಷಮೆಯನ್ನು ಕೇಳುತ್ತೇನೆ ವ್ಯಕ್ತಿಯೋರ್ವರನ್ನು ಕರೆಯಿಸಿಕೊಂಡು ನಂತರ ತಲವಾರಿನಿಂದ ಹಲ್ಲೆ(Assault by head) ನಡೆಸಿರುವ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ನಡೆದಿದೆ. ಇಲ್ಲಿನ ಬಾಳೆಬೇರು ಗ್ರಾಮದ ನಿವಾಸಿ ಭಾಸ್ಕರ ಶೆಟ್ಟಿ ಎಂಬವರೇ ಹಲ್ಲೆಗೆ ಒಳಗಾದ ವ್ಯಕ್ತಿ. ಆರೋಪಿ ಗಣೇಶ್ ಶೆಟ್ಟಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಸಿದ್ದಾಪುರದ ಜನತಾ ಕಾಲೋನಿಯ ನಿವಾಸಿಯಾಗಿರುವ ಗಣೇಶ್ ಶೆಟ್ಟಿ ಹಾಗೂ ಭಾಸ್ಕರ ಶೆಟ್ಟಿ ನಡುವೆ ಆಗಾಗ ಜಗಳ(Assault by head) ನಡೆಯುತ್ತಲೇ ಇತ್ತು. ಈ ಕುರಿತು ಭಾಸ್ಕರ ಶೆಟ್ಟಿ ಅವರು ಗಣೇಶ್ ಶೆಟ್ಟಿ ವಿರುದ್ದ ಪೊಲೀಸರಿಗೆ ದೂರು ನೀಡಿದ್ದರು. ನಂತರದಲ್ಲಿ ಭಾಸ್ಕರ ಶೆಟ್ಟಿ ಅವರಿಗೆ ಪೋನ್ ಕರೆ ಮಾಡಿದ್ದ ಗಣೇಶ್ ಶೆಟ್ಟಿ ತಾನು ಮಾಡಿದ ತಪ್ಪಿಗೆ ಕ್ಷಮೆ ಕೇಳುತ್ತೇನೆ. ನೀವು ಕೊರಗಜ್ಜನ ಸನ್ನಿಧಿಗೆ ಬನ್ನಿ ಎಂದು ತಿಳಿಸಿದ್ದಾರೆ.

ಗಣೇಶ್‌ ಶೆಟ್ಟಿಯ ಮಾತನ್ನು ನಂಬಿದ್ದ ಭಾಸ್ಕರ್‌ ಶೆಟ್ಟಿ ಸಿದ್ದಾಪುರ ಪೇಟೆಯಿಂದ ಆರೋಪಿ ಗಣೇಶ್‌ ಶೆಟ್ಟಿ ಅವರ ಆಟೋದಲ್ಲಿ ಒಟ್ಟಿಗೆ ಸನ್ನಿಧಿಗೆ ಹೊರಟಿದ್ದಾರೆ. ಚಕ್ತೆಬೇರು ಎಂಬಲ್ಲಿ ಕೊರಗಜ್ಜನ ದೇವಸ್ಥಾನದ ಒಳಗೆ ಹೋಗಿ ಕ್ಷಮೆಕೇಳುವ ರೀತಿ ನಟಿಸಿ ದೇವಸ್ಥಾನದಿಂದ ಹೊರಗೆ ಬಂದು ತನ್ನ ಆಟೋದಲ್ಲಿದ್ದ ತಲವಾರಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆಯಲ್ಲಿ ತಾನು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಗಣೇಶ್ ಶೆಟ್ಟಿ ಬೀಸಿದ ತಲವಾರು ಭಾಸ್ಕರ ಶೆಟ್ಟಿ ಅವರ ಬಲಭಾಗದ ಭುಜಕ್ಕೆ ತಾಗಿದೆ ಎಂದು ಭಾಸ್ಕರ್ ಶೆಟ್ಟಿ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Wife torture: ಹೆಂಡ್ತಿ ಚಾಕುವಿನಿಂದ ಚುಚ್ಚುತ್ತಾಳೆ, ಕಿರುಕುಳ ನೀಡ್ತಾಳೆ; ಕಾಪಾಡಿ ಅಂತ ಪ್ರಧಾನಿ, ಪೊಲೀಸ್ ಮೊರೆಹೋದ ಪತಿರಾಯ

ಇದನ್ನೂ ಓದಿ : ಕುಂದಾಪುರ : 24 ಗಂಟೆಯಲ್ಲಿ ಕಾಲೇಜು ವಿದ್ಯಾರ್ಥಿಯ ಅಪಹರಣ ಪ್ರಕರಣ ಬೇಧಿಸಿದ ಪೊಲೀಸರು

ಘಟನೆಗೆ ಸಂಬಂಧಿಸಿದಂತೆ ಶಂಕರನಾರಾಯಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಗಣೇಶ್ ಶೆಟ್ಟಿಯನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಘಟನೆಗೆ ನಿಖರ ಕಾರಣ ತಿಳಿಯ ಬೇಕಾಗಿದೆ.

(Assault by head) An incident of assault by head (assault by head) took place in Siddapur of Kundapur taluk after calling a person and asking for forgiveness in the presence of Koragajjan. Bhaskara Shetty, a resident of Baleberu village here, was the person who was assaulted. The police has taken the accused Ganesh Shetty into custody and has accelerated the investigation.

Comments are closed.