Bangalore Air Pollution: ಬೆಚ್ಚಿಬೀಳಿಸುವ ಮಾಹಿತಿ: ಬೆಂಗಳೂರಿನಲ್ಲಿ ಒಂದೇ ವರ್ಷದಲ್ಲಿ ವಾಯುಮಾಲಿನ್ಯ ಶೇ.40ರಷ್ಟು ಏರಿಕೆ

ಬೆಂಗಳೂರು: Bangalore Air Pollution: ರಾಷ್ಟ್ರ ರಾಜಧಾನಿ ದೆಹಲಿ ವಾಯುಮಾಲಿನ್ಯಕ್ಕೆ ಹೆಸರುವಾಸಿಯಾದ ನಗರ. ಆದರೆ ಇದೀಗ ಬೆಂಗಳೂರಿಗೂ ಅಂಥದ್ದೇ ಪರಿಸ್ಥಿತಿ ಬರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಕಳೆದೊಂದು ವರ್ಷದಲ್ಲಿ ಬೆಂಗಳೂರಿನಲ್ಲಿ ಶೇ.40ರಷ್ಟು ವಾಯುಮಾಲಿನ್ಯ ಹೆಚ್ಚಾಗಿದೆ ಎಂಬ ಆತಂಕಕಾರಿ ವರದಿ ಹೊರಬಿದ್ದಿದೆ.

ಕೋವಿಡ್ ಸಮಯದಲ್ಲಿ ಬೆಂಗಳೂರಿನಲ್ಲಿ ತಗ್ಗಿದ್ದ ವಾಯುಮಾಲಿನ್ಯ ಇದೀಗ ಏಕಾಏಕಿ ಏರಿಕೆ ಕಂಡಿದೆ. ಜನರು ಮತ್ತೆ ಸಹಜ ಸ್ಥಿತಿಯತ್ತ ತೆರಳಿರುವ ಹಿನ್ನೆಲೆ ವಾಹನಗಳ ಓಡಾಟದಿಂದ ಹಿಡಿದು ಕಾರ್ಖಾನೆಗಳು ಉಗುಳುವ ವಿಷಕಾರಿ ಹೊಗೆಯಿಂದಾಗಿ ಬೆಂಗಳೂರಲ್ಲಿ ಒಂದೇ ವರ್ಷದಲ್ಲಿ ಶೇ.40ರಷ್ಟು ವಾಯುಮಾಲಿನ್ಯ ಹೆಚ್ಚಳವಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. 2022ರ ನವೆಂಬರ್ ತಿಂಗಳ 30 ದಿನಗಳ ಅಧ್ಯಯನ ಪ್ರಕಾರ ವಾಯುಗುಣಮಟ್ಟ ಸೂಚ್ಯಂಕ (AQI) 93 ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ವಾಯುಗುಣಮಟ್ಟ ಸೂಚ್ಯಂಕ 66 ಇತ್ತು. ಅಂತೆಯೇ ಒಂದೇ ವರ್ಷದಲ್ಲಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಶೇ.40ರಷ್ಟು ಏರಿಕೆ ಕಂಡಿದೆ.

ಇದನ್ನೂ ಓದಿ: Kodi Habba 2022 : ಕೊಡಿ‌ಹಬ್ಬದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಬೇಡ : ವಿಶ್ವ ಹಿಂದೂ ಪರಿಷತ್ ಆಗ್ರಹ

ದೀಪಾವಳಿ ಹಬ್ಬದ ಬಳಿಕ ವಾಯುಮಾಲಿನ್ಯ ಹೆಚ್ಚಳ ಕಂಡಿದೆ. ಬೆಂಗಳೂರು ಸಿಟಿ ಜಂಕ್ಷನ್, ಹೆಬ್ಬಾಳ, ಮೈಸೂರು ರಸ್ತೆ, ಸಾಣೆಗುರುವನಹಳ್ಳಿ, ನಿಮ್ಹಾನ್ಸ್, ಜಯನಗರ, ಹಾಗೂ ಸಿಲ್ಕ್ ಬೋರ್ಡ್ ನಲ್ಲಿರುವ 7 ನಿರ್ವಹಣಾ ನಿಲ್ದಾಣಗಳ ಸಹಾಯದಿಂದ ಎಕ್ಯೂಐ ಅಳೆಯಲಾಗಿದೆ. ಈ ವೇಳೆ ಕಳಪೆ ಗಾಳಿಯ ಗುಣಮಟ್ಟ ಕಂಡುಬಂದಿದೆ.

ಬೆಂಗಳೂರು ನಗರದ ವಾತಾವರಣ ತಣ್ಣಗಿದ್ದಷ್ಟೂ ಗಾಳಿಯ ಗುಣಮಟ್ಟ ಕುಸಿಯುತ್ತಿದೆ. ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ವಾತಾವರಣದಲ್ಲಿ ಚಳಿಗಾಲದ ಲಕ್ಷಣಗಳು ಆರಂಭವಾಗುತ್ತಿದ್ದಂತೆ ವಾಯುಮಾಲಿನ್ಯ ಪ್ರಮಾಣದಲ್ಲಿ ಏರಿಕೆ ಕಾಣಲಾರಂಭಿಸಿದೆ. ವಾಯುಗುಣಮಟ್ಟ ಸೂಚ್ಯಂಕದ ಮೇಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗಾ ವಹಿಸುತ್ತದೆ. ಅಧ್ಯಯನದಲ್ಲಿ ಹೊರಬಿದ್ದ ಸ್ಫೋಟಕ ಸತ್ಯದಿಂದ ಬೆಂಗಳೂರಿನಲ್ಲಿ ವಾಸಿಸುವ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಎಚ್ಚರಿಸಿದೆ.

ಇದನ್ನೂ ಓದಿ: Nepotism: ಡಾಲಿ ಧನಂಜಯ್ ವಿರುದ್ಧ ನೆಪೋಟಿಸಂ ಆರೋಪ: ಪ್ರೇಮ್ ಪುತ್ರಿಗೆ ಅವಕಾಶ ನೀಡಿದ್ದಕ್ಕೆ ನೆಟ್ಟಿಗರು ಗರಂ

Bangalore Air Pollution: Shocking information: Air pollution in Bangalore has increased by 40 percentage in a single year

Comments are closed.