Nepotism: ಡಾಲಿ ಧನಂಜಯ್ ವಿರುದ್ಧ ನೆಪೋಟಿಸಂ ಆರೋಪ: ಪ್ರೇಮ್ ಪುತ್ರಿಗೆ ಅವಕಾಶ ನೀಡಿದ್ದಕ್ಕೆ ನೆಟ್ಟಿಗರು ಗರಂ

ಬೆಂಗಳೂರು: ಭಾರತೀಯ ಸಿನಿರಂಗದಲ್ಲಿ ನೆಪೋಟಿಸಂ(Nepotism) ವಿಚಾರ ಸುದ್ದಿಯಲ್ಲಿರುತ್ತದೆ. ಸ್ಟಾರ್ ಕಲಾವಿದರ ಮಕ್ಕಳಿಗೆ ಸಿನಿಮಾದಲ್ಲಿ ಸುಲಭವಾಗಿ ಅವಕಾಶ ಸಿಗುತ್ತದೆ. ಆದರೆ ಬಡ ಮಕ್ಕಳಿಗೆ ಪ್ರತಿಭೆ ಇದ್ದರೂ ಅವಕಾಶ ಸಿಗಲ್ಲ ಎಂಬ ಬಗ್ಗೆ ದೂರುಗಳು ಕೇಳಿಬರುತ್ತಲೇ ಇರುತ್ತವೆ. ಅಂತದ್ದೇ ಆರೋಪಕ್ಕೆ ಇದೀಗ ಡಾಲಿ ಧನಂಜಯ್ ಗುರಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪವು ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ವಿರುದ್ಧ ಕೇಳಿಬಂದಿತ್ತು. ಅದೇ ವೇಳೆ ಡಾಲಿ ಧನಂಜಯ್ ಪರ ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ ಎಂಬ ಕ್ಯಾಂಪೇನ್ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿತ್ತು. ಹಲವು ಅಭಿಮಾನಿಗಳು ಡಾಲಿಗೆ ಸಪೋರ್ಟ್ ಮಾಡಿದ್ದರು. ಅದೇ ನಟನ ವಿರುದ್ಧ ಇದೀಗ ನೆಪೋಟಿಸಂ ಆರೋಪ ಕೇಳಿಬಂದಿದೆ. ಕನ್ನಡದ ನಟ ಪ್ರೇಮ್ ಮಗಳಿಗೆ ತನ್ನ ಮುಂದಿನ ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕೆ ಟೀಕೆಗಳು ಕೇಳಿಬಂದಿವೆ.

ಇದನ್ನೂ ಓದಿ: Kantara Hindi OTT : “ಕಾಂತಾರ” ಹಿಂದಿ ಓಟಿಟಿ ರಿಲೀಸ್‌ ಡೇಟ್ಸ್‌ ಫಿಕ್ಸ್‌ : ನೆಟ್‌ಫ್ಲಿಕ್ಸ್‌ಗೆ ಲಗ್ಗೆ ಇಟ್ಟ ಕನ್ನಡದ ಮೊದಲ ಸಿನಿಮಾ

ಡಾಲಿ ಧನಂಜಯ್ ಅವರು ಚಿತ್ರರಂಗದ ಹಿನ್ನೆಲೆ ಹೊಂದದೇ ತಮ್ಮ ಸ್ವಂತ ಪರಿಶ್ರಮದಿಂದ ಮೇಲೆ ಬಂದವರು. ಹೀಗಾಗಿ ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದವರು. ಆದರೆ ಇಂದು ಅವರೇ ನೆಪೋಟಿಸಂ ಮಾಡುತ್ತಿದ್ದಾರೆ ಎಂದು ಕೆಲವು ನೆಟ್ಟಿಗರು ಆರೋಪ ಹೊರಿಸಿದ್ದಾರೆ. ತಮ್ಮ ನಿರ್ಮಾಣದ ಟಗರು ಪಲ್ಯ ಸಿನಿಮಾದಲ್ಲಿ ನೆನಪಿರಲಿ ಖ್ಯಾತಿಯ ಪ್ರೇಮ್ ಪುತ್ರಿ ಅಮೃತಾಗೆ ಅವಕಾಶ ನೀಡಿದ್ದಕ್ಕೆ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.

ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಬ್ಯಾನರ್ ಮೂಲಕ ಟಗರು ಪಲ್ಯ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ನಾಯಕಿಯಾಗಿ ನಟ ಪ್ರೇಮ್ ಪುತ್ರಿ ಅಮೃತಾ ಆಯ್ಕೆ ಆಗಿದ್ದಾರೆ. ಅಮೃತಾಗೆ ಮೊದಲ ಸಿನಿಮಾದಲ್ಲೇ 10 ಲಕ್ಷ ರೂ. ಸಂಭಾವನೆ ನೀಡಲಾಗಿದೆ ಎಂಬ ವದಂತಿಯೂ ಕೇಳಿಬಂದಿದೆ. ಈ ಬೆನ್ನಲ್ಲೇ ಸಿನಿಮಾದ ಕುರಿತು ಮಾಹಿತಿ ಹಂಚಿಕೊಳ್ಳಲು ಪೋಸ್ಟರ್ ರಿಲೀಸ್ ಮಾಡಲಾಗಿದೆ. ಇದಕ್ಕೆ ಕಾಮೆಂಟ್ ಮಾಡಿರುವ ಅನೇಕರು ನೆಪೋಟಿಸಂ ವಿಚಾರ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: Anushka Sharma Qala Look : ರೆಟ್ರೊ ಸ್ಟೈಲ್‌ನಲ್ಲಿ ಅನುಷ್ಕಾ ಶರ್ಮಾ : ಸಖತ್‌ ವೈರಲ್‌ ಆದ ಖಾಲಾ ಲುಕ್

‘ಬಡವರ ಮಕ್ಕಳು ಬೆಳೆಯಬೇಕು ಎಂದು ಹೇಳಿದ್ದ ನೀವೇ ಏಕೆ ನಟನೊಬ್ಬನ ಪುತ್ರಿಗೆ ಅವಕಾಶ ನೀಡಿದ್ರಿ..? ಬಡವರ ಮಕ್ಕಳನ್ನು ಏಕೆ ಆಯ್ಕೆ ಮಾಡಿಲ್ಲ..? ನೀವು ಕೂಡಾ ನೆಪೋಟಿಸಂ ಬೆಂಬಲಿಸುತ್ತಿದ್ದೀರಿ’ ಎಂದು ನೆಟ್ಟಿಗರು ಧನಂಜಯ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ನೆಟ್ಟಿಗರ ಈ ಪ್ರಶ್ನೆಗೆ ಡಾಲಿ ಧನಂಜಯ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಟಗರು ಪಲ್ಯ ಸಿನಿಮಾದ ನಿರ್ದೇಶಕ ಉಮೇಶ್ ಕೃಷ್ಣ ಈ ಹಿಂದೆ ಸೆಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದವರು. ಹಂತ ಹಂತವಾಗಿ ಈ ಮಟ್ಟಕ್ಕೆ ಬಂದಿದ್ದಾರೆ. ಇದು ಅವರ ಮೊದಲ ಸಿನಿಮಾ, ನೀವು ನೋಡುವ ದೃಷ್ಟಿಕೋನ ಬದಲಿಸಿಕೊಳ್ಳಿ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.

ಸದ್ಯ ಈ ಸಿನಿಮಾ ಸೆಟ್ಟೇರಿದ್ದು, ನಾಗಭೂಷಣ್ ನಾಯಕನಾಗಿ, ಅಮೃತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕನ ಅಮ್ಮನ ಪಾತ್ರದಲ್ಲಿ ತಾರಾ ಮಿಂಚಲಿದ್ದು, ಕೆಲ ದಿನಗಳ ಹಿಂದಷ್ಟೆ ಸಿನಿಮಾ ಮುಹೂರ್ತ ನಡೆದಿದ್ದು, ಶೂಟಿಂಗ್ ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

Nepotism: Allegation of nepotism against actor Dolly Dhananjay Netizens are furious for giving a chance to daughter of actor Prem

Comments are closed.