Bangalore Karaga 2022 : ಬೆಂಗಳೂರು ಕರಗಕ್ಕೆ ಕ್ಷಣಗಣನೆ: ಲಕ್ಷಾಂತರ ಜನರು ಭಾಗಿಯಾಗೋ ನೀರಿಕ್ಷೆ

ಬೆಂಗಳೂರು : ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಕರಗ ಮಹೋತ್ಸವ ಕ್ಕೆ ಕ್ಷಣಗಣನೆ ನಡೆದಿದೆ. ನಾಳೆ ರಾತ್ರಿ ಐತಿಹಾಸಿಕ ಕರಗ‌ ಮಹೋತ್ಸವ (Bangalore Karaga 2022) ನಡೆಯಲಿದ್ದು, ಲಕ್ಷಾಂತರ ಜನರು ನಾಳೆ ರಾತ್ರಿ 12.30ಕ್ಕೆ ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವ ಹಾಗೂ ದ್ರೌಪದಿ ದೇವಿಯ ಕರಗೋತ್ಸವ ನೋಡಿ ಧನ್ಯರಾಗಲಿದ್ದಾರೆ. ಈಗಾಗಲೇ ಸಾಂಪ್ರದಾಯಿಕ ವಿಧಿವಿಧಾನಗಳು‌ ನಡೆದಿದ್ದು, ಹಸಿಕರಗ (Karaga) ಸಂಪನ್ನಗೊಂಡಿದೆ. ಕರಗ ಮಹೋತ್ಸವಕ್ಕಾಗಿ ಧರ್ಮರಾಯಸ್ವಾಮಿ ದೇವಸ್ಥಾನವನ್ನ ಮಲ್ಲಿಗೆ ಹೂವಿನಿಂದ ಶೃಂಗಾರ ಮಾಡಲಾಗಿದ್ದು, ಕರಗ ಸಾಗುವ ದಾರಿಯುದ್ದಕ್ಕೂ ರಸ್ತೆ ಕಾಮಗಾರಿ ಹಾಗೂ ಸ್ವಚ್ಚತಾ ಕಾರ್ಯ ನಡೆಸಲಾಗಿದೆ. ಅಲ್ಲದೇ ವಿದ್ಯುತ್ ದೀಪಗಳಿಂದ ಅಲಂಕಾರ‌ ಕೂಡ ಮಾಡಲಾಗಿದೆ.

ಈ ಭಾರಿಯೂ ಕೂಡ ಜ್ಞಾನೇಂದ್ರ ಕರಗ (Karaga) ಹೊರಲಿದ್ದಾರೆ. ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಕರಗ ಆಚರಣೆಗೆ ಅಡ್ಡಿ ಉಂಟಾಗಿತ್ತು. ಈ ಭಾರಿ ಪಾಲಿಕೆಯಿಂದ ಕರಗ ಉತ್ಸವಕ್ಕೆ 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನೂ ಕರಗಕ್ಕಾಗಿ ಲಕ್ಷಾಂತರ ಜನರು ಭಕ್ತರು ಸೇರೋದರಿಂದ ಯಾವದೇ ಅಹಿತಕರ ಘಟನೆ ನಡೆಯದಂತೆ ದೇವಸ್ಥಾನದ ಸುತ್ತ ಮುತ್ತ ಹಾಗೂ ಕರಗ ಸಾಗುವ ಹಾದಿ ಉದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸ್ಥಳೀಯ ಪೊಲೀಸರು ಹಾಗೂ 3 KSRP ತುಕಡಿ ನಿಯೋಜನೆ ಮಾಡಲಾಗಿದೆ.

ಕೇಂದ್ರಿಯ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ಈಗಾಗಲೆ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ದೇವರ ದರ್ಶನ ಪಡೆದುಕೊಳ್ಳುತ್ತಿ ದ್ದಾರೆ. ನಾಳೆಯ ನಡೆಯುವ ಅಂತಿಮ ಕರಗ ಉತ್ಸವದಲ್ಲಿ 1‌ಲಕ್ಷಕ್ಕೂ ಹೆಚ್ಚಿನ ಭಕ್ತರು ಭಾಗಿಯಾಗೋ ನೀರಿಕ್ಷೆಯಿದೆ. ಕರಗ ಸಮಿತಿ (Bangalore Karaga 2022) ವ್ಯಾಪಾರ ವಹಿವಾಟಿಗೆ ಎಲ್ಲಾ ಧರ್ಮದವರಿಗೂ ಅವಕಾಶ ಮಾಡಿಕೊಟ್ಟಿದ್ದು, ಸಂಪ್ರದಾಯದಂತೆ ಕರಗ ದರ್ಗಾ ಕ್ಕೂ ಭೇಟಿ ನೀಡಲಿದೆ.

ಕರಗ ಉತ್ಸವವೂ ಪ್ರತಿ ವರ್ಷದಂತೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಅವೆನ್ಯೂ ರಸ್ತೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಮಸ್ತಾನ್ ಸಾಬ್ ದರ್ಗಾ, ಅಣ್ಣಮ್ಮ ದೇವಸ್ಥಾನ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್ ಕೊನೆಗೆ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ತಲುಪಲಿದ್ದು, ಬೆಂಗಳೂರಿನ ಧಾರ್ಮಿಕ ಶೃದ್ಧೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯ ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಸಿಲಿಕಾನ ಸಿಟಿಯ ಜನರು ಕಾತುರರಾಗಿದ್ದಾರೆ.

ಇದನ್ನೂ ಓದಿ :  ಪ್ರಯಾಣಿಕರಿಗೆ ಬರೆ ಎಳೆದ ನಮ್ಮ ಮೆಟ್ರೋ : ಹೆಚ್ಚಳವಾಯ್ತು ಪಾಸ್ ದರ

ಇದನ್ನೂ ಓದಿ :  ಬೆಂಗಳೂರಿನಲ್ಲಿ ಸಾವಿನ ಸರಣಿ : ಬೆಸ್ಕಾಂ ನಿರ್ಲಕ್ಷ್ಯಕ್ಕೆ ಯುವಕ ಬಲಿ

Bangalore Karaga 2022 festival, procession in Bengaluru

Comments are closed.