KGF 2 Yash : ಸಲ್ಮಾನ್, ಶಾರೂಖ್ ಜೊತೆ ಹೋಲಿಸಬೇಡಿ : ಫ್ಯಾನ್ಸ್ ಗೆ ಯಶ್ ಮನವಿ

ಸದ್ಯ ಸಿನಿಮಾ ರಂಗದಲ್ಲಿ ಸದ್ದು ಮಾಡ್ತಿರೋದು ಕೆಜಿಎಫ್-2 (KGF 2 ) ಸಿನಿಮಾ. ಸಿನಿಮಾ ಬಿಡುಗಡೆಗೆ ದಿನಗಣನೆ ನಡೆದಿರೋ ಬೆನ್ನಲ್ಲೇ ಸಿನಿಮಾದ ಪ್ರಮೋಶನ್ ಕಾರ್ಯ ಕೂಡ ಚುರುಕುಗೊಂಡಿದೆ. ಈ ಮಧ್ಯೆ ರಿಲೀಸ್ ಆಗಿರೋ ಟ್ರೇಲರ್, ಸಾಂಗ್ ಕೂಡ ಹೊಸ ದಾಖಲೆ ಬರೆಯುತ್ತಿದೆ. ಈ ಮಧ್ಯೆ ಪ್ರಮೋಶನ್ ಗಾಗಿ ಮುಂಬೈ ಸೇರಿದಂತೆ ಮಹಾ ನಗರಗಳಿಗೆ ಭೇಟಿ ನೀಡ್ತಿರೋ ಯಶ್ (Yash) ರನ್ನು ಸಲ್ಮಾನ್ ಹಾಗೂ ಶಾರುಕ್ ಖಾನ್ ಹೆ ಹೋಲಿಸಲಾಗುತ್ತಿದ್ದು,ಇದಕ್ಕೆ ಯಶ್ ಸಖತ್ ರಿಯಾಕ್ಷನ್ ನೀಡಿದ್ದಾರೆ.

Don't Compare Salman, Shah Rukh, Yash Appeals To Fans
ಕೆಜಿಎಫ್‌ ಸಿನಿಮಾದಲ್ಲಿ ಯಶ್‌

ಸದ್ಯ ಭಾರತ ಸಿನಿಮಾ ರಂಗದ ಸ್ಟಾರ್ ನಟರಾಗಿ ಮಿನುಗುತ್ತಿರೋದು ಸೌತ್ ಸ್ಟಾರ್ ಯಶ್. ಎಲ್ಲೆಡೆಯೂ ಯಶ್ ಬಗ್ಗೆನೇ ಸುದ್ದಿಗಳು ಸದ್ದು ಮಾಡುತ್ತಿವೆ. ಅಲ್ಲದೇ ಬಾಲಿವುಡ್ ಕಿಂಗ್ ಖಾನ್ ಗಳಾದ ಸಲ್ಮಾನ್ ಖಾನ್ ಹಾಗೂ ಶಾರೂಕ್ ಖಾನ್ ಗೆ ಯಶ್ ರನ್ನು ಹೋಲಿಸಲಾಗುತ್ತಿದೆ‌. ಕೆಜಿಎಫ್ ಸಿನಿಮಾ ರಿಲೀಸ್ ದಿನವೇ ಶಾರೂಕ್ ಖಾನ್ ನಟನೆಯ ಝೀರೋ ಸಿನಿಮಾ ತೆರೆಗೆ ಬಂದಿತ್ತು. ಆದರೆ ಆ ಸಿನಿಮಾ ಮೋಡಿ ಮಾಡುವಲ್ಲಿ ವಿಫಲವಾಗಿತ್ತು. ಹೀಗಾಗಿ ಆಗಲೂ ಶಾರೂಖ್ ಖಾನ್ ಗಿಂತ ಯಶ್ ಉತ್ತಮ ನಟ ಅನ್ನೋ ಟಾಕ್ ಹರಿದಾಡಿತ್ತು.

Don't Compare Salman, Shah Rukh, Yash Appeals To Fans

ಆದರೆ ತಮ್ಮನ್ನು ಸಲ್ಮಾನ್ ಖಾನ್ ಹಾಗೂ ಶಾರೂಖ್ ಖಾನ್ ಗೆ ಹೋಲಿಸಿದ ವಿಚಾರಕ್ಕೆ ಯಶ್ ಗರಂ ಆಗಿದ್ದಾರೆ ಮಾತ್ರವಲ್ಲ ನಾನು ಸಿನಿಮಾ ಮಗು. ಅವರ ಸಿನಿಮಾ ನೋಡುತ್ತಾ ಬೆಳೆದವನು ನಾನು. ಇಲ್ಲಿ ಯಾವುದೂ ಶಾಶ್ವತವಲ್ಲ. ಅವರು ಸೂಪರ್‌ಸ್ಟಾರ್‌ಗಳು. ಅವರನ್ನು ಅಗೌರವಿಸುವುದು ಮತ್ತು ಅವರಿಗೆ ನನ್ನನ್ನು ಹೋಲಿಕೆ ಮಾಡುವುದು ತಪ್ಪು. ನಾನು ನಟನಾಗಲು ಇವರಿಬ್ಬರೇ ಸ್ಫೂರ್ತಿ. ಇವರಿಬ್ಬರೂ ಇಂಡಸ್ಟ್ರಿಯ ಆಧಾರ ಸ್ತಂಭ’ ಎಂದು ಹೊಗಳಿದ್ದಾರೆ.

Don't Compare Salman, Shah Rukh, Yash Appeals To Fans

ಅಲ್ಲದೇ ಯಾವ ಕಾರಣಕ್ಕೂ ಈ ಸ್ಟಾರ್​ ನಟರಿಗೆ ತಮ್ಮನ್ನು ಹೋಲಿಕೆ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಯಶ್ ವಿನಮ್ರವಾಗಿ ಮನವಿ ಮಾಡಿದ್ದಾರೆ. ಸದ್ಯ ಸಿನಿಮಾ ಇಂಡಸ್ಟ್ರಿ ಯಲ್ಲಿ ಕೆಜಿಎಫ್​ 2’ ಚಿತ್ರದ ಹವಾ ಜೋರಾಗಿದ್ದು, ಏಪ್ರಿಲ್​ 14ರಂದು ಸಿನಿಮಾ ಹಲವು ಭಾಷೆಗಳಲ್ಲಿ ರಿಲೀಸ್ ಆಗ್ತಿದೆ. ಈ ಸಿನಿಮಾದಲ್ಲಿ ಯಶ್​ಗೆ ಜತೆಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿ ಕೊಂಡಿದ್ದಾರೆ. ಸಂಜಯ್ ದತ್​, ರವೀನಾ ಟಂಡನ್ ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಪರಭಾಷೆಯಲ್ಲಿ ಚಿತ್ರದ ಬುಕ್ಕಿಂಗ್ ಶುರುವಾಗಿದ್ದು, ಸಿನಿಮಾ ಹೊಸ ದಾಖಲೆ ಬರೆಯೋ ಸಾಧ್ಯತೆ ಇದೆ.

ಇದನ್ನೂ ಓದಿ : ನುಡಿದಂತೆ ನಡೆದ ನೀಲಿತಾರೆ : ಕ್ಯಾಮರಾ ಎದುರೇ ಟೀ ಶರ್ಟ್ ಬಿಚ್ಚಿದ ಪೂನಂ : viral Video

ಇದನ್ನೂ ಓದಿ : KGF chapter 2 :ಕೆಜಿಎಫ್​ 2 ಸಿನಿಮಾ ವೀಕ್ಷಿಸಲಿರುವ ಪ್ರಭಾಸ್​ ಅಭಿಮಾನಿಗಳಿಗೆ ಇಲ್ಲಿದೆ ಗುಡ್​ನ್ಯೂಸ್​

Don’t Compare Salman, Shah Rukh, Yash Appeals To Fans

Comments are closed.