ಬೆಂಗಳೂರು : ಸಿಲಿಕಾನ್ ಸಿಟಿ ಜನರ ನಿದ್ದೆಗೆಡಿಸಿದ್ದ ಏಳು ಮಕ್ಕಳ ನಾಪತ್ತೆ ಪ್ರಕರಣದಲ್ಲೀಗ ಒಂದು ಪ್ರಕರಣ ಸುಖಾಂತ್ಯ ಕಂಡಿದೆ. ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆ ಯಾಗಿದ್ದ ಮೂವರು ಮಕ್ಕಳು ಪತ್ತೆಯಾಗಿದ್ದಾರೆ. ಆದರೆ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಓರ್ವ ಯುವತಿ ಸೇರಿದಂತೆ ಮೂವರು ಮಕ್ಕಳ ನಾಪತ್ತೆ ಪ್ರಕರಣ ಇನ್ನೂ ಕಗ್ಗಂಟಾಗಿಯೇ ಉಳಿದಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ವಾಕಿಂಗ್‌ಗೆ ತೆರಳುವುದಾಗಿ ಹೇಳಿ ಬಾಗಲಗುಂಟೆಯ ನಿವಾಸಿಗಳಾದ ನಂದನ್, ಕಿರಣ್, ಪರೀಕ್ಷಿತ್ ಎಂಬ 12 ವರ್ಷದ ಬಾಲಕರು ನಿನ್ನೆ ಬೆಳಗ್ಗೆ ಮನೆಯಿಂದ ನಾಪತ್ತೆಯಾಗಿದ್ದರು. ಸಂಜೆಯ ವರೆಗೂ ಮಕ್ಕಳಿಗಾಗು ಹುಡುಕಾಟ ನಡೆಸಿದ್ದ ಪೋಷಕರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದರು. ನಾಪತ್ತೆಯಾಗಿರುವ ಮೂವರು ಮಕ್ಕಳಿಗಾಗಿ ಪೊಲೀಸರು ಹುಡುಕಾಟವನ್ನು ನಡೆಸಿದ್ದಾರೆ. ಆದರೆ ಮಕ್ಕಳು ಇದೀಗ ಬೆಂಗಳೂರಲ್ಲಿ ಪತ್ತೆಯಾಗಿದ್ದಾರೆ.
ಮೈಸೂರು ದಸರಾ ವೀಕ್ಷಿಸಿದ್ದ ಮಕ್ಕಳು !
ಬಾಗಲಗುಂಟೆಯಿಂದ ನಾಪತ್ತೆಯಾಗಿದ್ದ ಮೂವರು ಮಕ್ಕಳು ಬೆಂಗಳೂರಿನ ಕೆಂಗೇರಿಗೆ ಬಂದಿದ್ದಾರೆ. ಅಲ್ಲಿಂದ ಸೀದಾ ಬಸ್ಸನ್ನೇರಿ ಮೈಸೂರಿಗೆ ತೆರಳಿದ್ದಾರೆ. ಮೈಸೂರಿನಲ್ಲಿ ದಸರಾ ಕ್ರೀಡಾಕೂಟವನ್ನು ವೀಕ್ಷಿಸಿದ್ದ ಬಾಲಕರಿಗೆ ಬೆಂಗಳೂರಿನ ಕಂಟೀರವ ಕ್ರೀಡಾಂಗಣದಲ್ಲಿ ಕಬಡ್ಡಿ ಆಯ್ಕೆ ನಡೆಯುತ್ತಿದೆ ಅನ್ನೋ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಮೈಸೂರಿನಿಂದ ಬಸ್ಸಿನಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಹೀಗೆ ಬಂದಿದ್ದ ಮೂವರು ಮಕ್ಕಳು ಆನಂದರಾವ್ ಸರ್ಕಲ್ ಬಳಿಯಲ್ಲಿದ್ದ ಸುತ್ತಾಡುತ್ತಿದ್ದ ಬಾಲಕರನ್ನು ವಿಚಾರಿಸಿದ್ದಾರೆ. ಈ ವೇಳೆಯಲ್ಲಿ ಮಕ್ಕಳು ತಾವು ವಾಕಿಂಗ್ ಬಂದಿರುವುದಾಗಿ ತಿಳಿಸಿದ್ದಾರೆ.
ಪೊಲೀಸರಿಗೆ ಮಾಹಿತಿ ಕೊಟ್ಟ ಪೇಪರ್ ಆಯುವ ವ್ಯಕ್ತಿ !
ಅನುಮಾನ ಗೊಂಡ ಪೇಪರ್ ಆಯುವ ವ್ಯಕ್ತಿ ಮೂವರು ಮಕ್ಕಳ ಕುರಿತು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಉಪ್ಪಾರಪೇಟೆ ಠಾಣೆಯ ಪೊಲೀಸರು ಮೂವರು ಮಕ್ಕಳನ್ನೂ ವಶಕ್ಕೆ ಪಡೆದಿದ್ದು, ವಿಚಾರನೇಯನ್ನು ನಡೆಸಿದ್ದಾರೆ. ಈ ವೇಳೆಯಲ್ಲಿ ಬಾಗಲಗುಂಟೆ ಠಾಣೆಯಲ್ಲಿ ನಾಪತ್ತೆಯಾಗಿದ್ದ ಮಕ್ಕಳು ಇವರೇ ಅನ್ನೋದು ಖಚಿತ ವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪೋಷಕರನ್ನು ಠಾಣೆಗೆ ಕರೆಯಿಸಿದ್ದಾರೆ.
ಇದನ್ನೂ ಓದಿ : ಪೋಷಕರೇ ಹುಷಾರ್ ! ವಾಕಿಂಗ್‌ಗೆ ತೆರಳಿದ್ದ 7 ಮಕ್ಕಳು ನಾಪತ್ತೆ
ಇನ್ನೂ ನಿಗೂಢವಾಗಿಯೇ ಇದೆ ಸೋಲದೇವನಹಳ್ಳಿ ನಾಪತ್ತೆ ಪ್ರಕರಣ
ಬಾಗಲಗುಂಟೆ ಹಾಗೂ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿ ಸೇರಿದಂತೆ ಒಟ್ಟು ಏಳು ಮಕ್ಕಳು ನಾಪತ್ತೆಯಾಗಿದ್ದರು. ಈ ಪೈಕಿ ಬಾಗಲಗುಂಟೆ ಪ್ರಕರಣ ಸುಖಾಂತ್ಯ ಕಂಡಿದೆ. ಆದರೆ ಸೋಲದೇವನಹಳ್ಳಿ ಠಾಣೆಯ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಸೋಲದೇವನಹಳ್ಳಿಯ ಎಜಿಬಿ ಲೇಔಟ್‌ನಲ್ಲಿರುವ ಕ್ರಿಸ್ಟಲ್ ಅಪಾರ್ಟ್ ಮೆಂಟ್‌ನಲ್ಲಿ ವಾಸವಾಗಿದ್ದ ಅಮೃತವರ್ಷಿಣಿ ಎಂಬ ಯುವತಿಯ ಜೊತೆಯಲ್ಲಿ ರಾಯನ್ ಸಿದ್ದಾರ್ಥ್, ಭೂಮಿ, ಚಿಂತನ್ ಎಂಬ ಮಕ್ಕಳು ನಾಪತ್ತೆಯಾಗಿದ್ದರು.
ಮಕ್ಕಳು ನಾಪತ್ತೆಯಾದ ಬೆನ್ನಲ್ಲೇ ಪತ್ರವೊಂದು ಪತ್ತೆಯಾಗಿತ್ತು. ಅದರಲ್ಲಿ ಸ್ಪೋರ್ಟ್ ಐಟಂ, ಸ್ಲಿಪ್ಪರ್, ಬ್ರಶ್, ಟೂಥ್ ಪೇಸ್ಟ್, ವಾಟರ್ ಬಾಟಲ್ ಹಾಗೂ ಹಣವನ್ನು ತರಬೇಕೆಂದು ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಪೋಷಕರು ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರರಕಣ ದಾಖಲು ಮಾಡಿದ್ದರು. ಇದೀಗ ಪೊಲೀಸರು ಮಕ್ಕಳ ಹುಡುಕಾಟಕ್ಕಾಗಿ ವಿಶೇಷ ತಂಡ ವನ್ನು ಸಿದ್ದ ಮಾಡಿದೆ.
ಇದನ್ನೂ ಓದಿ : ಎಸ್‌ಎಸ್ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ : ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : ಅಪ್ರಾಪ್ತ ಶಾಲಾ ಬಾಲಕಿಯ ಕಿಡ್ನಾಪ್ : ಅತ್ಯಾಚಾರವೆಸಗಿದ ಕ್ಯಾಬ್ ಚಾಲಕ
( Three children found missing in Bagalagunte, The children of Soladevanahalli are yet to be found )