Bangalore Rajakaluve BBMP statistic : ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ದುಡಿದ ಪುಡಿಗಾಸಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದ ಜನರ ನಿದ್ದೆಗೆಡಿಸಿದ್ದು ರಾಜಕಾಲುವೆ (Rajakaluve) ಒತ್ತುವರಿ ಎಂಬ ಭೂತ. ಆದರೆ ಸರ್ಕಾರ ಬದಲಾಗುತ್ತಿದ್ದಂತೆ ಬಡವರ ಮನೆಯ ಎದುರು ಘರ್ಜಿಸಿದ ಬುಲ್ಡೋಜರ್ ಗಳು ಮೌನವಾದವು. ಆದರೆ ಈಗ ಮತ್ತೆ ಒತ್ತುವರಿ ಸದ್ದು ಮಾಡಿದ್ದು ಕಳೆದ ಒಂದು ವರ್ಷದ ಅವಧಿಯಲ್ಲೇ ಸಾವಿರಾರು ರಾಜಕಾಲುವೆಗಳು ಒತ್ತುವರಿಯಾಗಿರೋದು ಬಿಬಿಎಂಪಿ ವರದಿಯಲ್ಲಿ ಸಾಬೀತಾಗಿದೆ.

ಬೆಂಗಳೂರಿನಲ್ಲಿ ನೀರು, ಕಸದ ಜೊತೆಗೆ ಇರೋ ಸಮಸ್ಯೆ ರಾಜಕಾಲುವೆ ಒತ್ತುವರಿ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕಿತ್ತಾಟ ಹಚ್ಚಿದ್ದ ರಾಜಕಾಲುವೆ ಒತ್ತುವರಿ ಇದೀಗ ಕಾಂಗ್ರೆಸ್ ಅವಧಿಯಲ್ಲೂ ಮುಂದುವರೆದಿದೆ. ಕಳೆದ ಎಂಟು ತಿಂಗಳ ಅವಧಿಯಲ್ಲಿ ಬೆಂಗಳೂರಲ್ಲಿ 1 ಸಾವಿರಕ್ಕೂ ಅಧಿಕ ರಾಜಕಾಲುವೆ ಒತ್ತುವರಿ ಪ್ರಕರಣ ಬೆಳಕಿಗೆ ಬಂದಿದ್ದು, ಬಿಬಿಎಂಪಿ ಕೈಸೇರಿರೋ ದಾಖಲೆಗಳು ಈ ಅಕ್ರಮವನ್ನು ಬಿಚ್ಚಿಡುತ್ತಿವೆ.
ನಗರದಲ್ಲಿ ಸದ್ಯ ಬಿಬಿಎಂಪಿ ರಾಜಕಾಲುವೆ ಒತ್ತುವರಿಯನ್ನು ತಾತ್ಕಲಿಕವಾಗಿ ಕೈ ಬಿಟ್ಟಿದೆ.ಇದರ ಬೆನ್ನಲ್ಲೇ ಹೊಸ ರಾಜಕಾಲುವೆ ಒತ್ತುವರಿ ಜೋರಾಗಿದೆ. ಅದರಲ್ಲೂ ಬೆಂಗಳೂರಿನ ವಿವಿಧ ಭಾಗಗಳಲ್ಲಿ ರಾಜಕಾಲುವೆಯ ಮೇಲೆ ಮನೆ,ಅಂಗಡಿ,ಬಿಲ್ಡಿಂಗ್, ಅಪಾರ್ಟಮೆಂಟ್ ಗಳು ನಿರ್ಮಾಣವಾಗಿವೆ.
ಇದನ್ನೂ ಓದಿ : BMTC Double-Decker Buses : ಬೆಂಗಳೂರಿನ ಈ 3 ಮಾರ್ಗದಲ್ಲಿ ಮಾತ್ರವೇ ಸಂಚರಿಸಲಿವೆ ಡಬಲ್ ಡೆಕ್ಕರ್ ಬಸ್ಸುಗಳು
ನಗರದ ರಾಜಕಾಲುವೆ ಹಾಗೂ ಬಫರ್ ಝೋನ್ ಗಳನ್ನು ಭೂಗಳ್ಳರು ಒತ್ತುವರಿ ಮಾಡಿಕೊಳ್ಳುತ್ತಲೇ ಇದ್ದಾರೆ. ಬಿಬಿಎಂಪಿ ದಾಖಲೆಗಳ ಪ್ರಕಾರ ನಗರದಲ್ಲಿ 1134 ಹೊಸ ಒತ್ತುವರಿ ಪ್ರಕರಣಗಳು ವರದಿಯಾಗಿದೆ. ಇದನ್ನು ಹೈ ಕೋರ್ಟ್ ಸೂಚನೆ ಮೇರೆಗೆ ತೆರವು ನಡೆಸಲು ಬಿಬಿಎಂಪಿ ನಿರ್ಧರಿಸಿದೆ.
ಎಂಟು ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 1134 ಹೊಸ ಒತ್ತುವರಿ ಪ್ರಕರಣಗಳು ದಾಖಲಾಗಿದೆ. ಈ ಮಳೆಗಾಲಕ್ಕೂ ಮೊದಲು ವಲಯವಾರು ಒತ್ತುವರಿ ವರದಿ ನೀಡುವಂತೆ ವಲಯ ಆಯುಕ್ತರುಗಳಿಗೆ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಸೂಚಿಸಿದ್ದರು. ಅದರಂತೆ ವರದಿ ಈಗ ಸಿದ್ಧವಾಗಿದ್ದು, ನಗರದ ಯಲಹಂಕ ವಲಯದಲ್ಲಿ ಅತಿ ಹೆಚ್ಚು ಒತ್ತುವರಿಯಾಗಿರೋದು ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಪಾರಿವಾಳಕ್ಕೆ ಕಾಳು ಹಾಕೋಕೇ ಮುನ್ನ ಎಚ್ಚರ: ನಿಮಗೆ ಬೀಳುತ್ತೆ ಭಾರಿ ದಂಡ
ನಗರದಲ್ಲಿ ಪೂರ್ವ ವಲಯ : 24 ,ಪಶ್ಚಿಮ ವಲಯ : 74 ದಕ್ಷಿಣ ವಲಯ : 51 ಕೋರಮಂಗಲ ಕಣಿವೆ : 110ಯಲಹಂಕ ವಲಯ : 308 ಮಹಾದೇವಪುರ ವಲಯ : 75 ,ಬೊಮ್ಮನಹಳ್ಳಿ ವಲಯ : 175 ,ಆರ್ ಆರ್ ನಗರ ವಲಯ : 71 ,ದಾಸರಹಳ್ಳಿ ವಲಯ : 246 ಸೇರಿದಂತೆ ಒಟ್ಟು ಒತ್ತುವರಿ 1134 ಪ್ರಕರಣ ದಾಖಲಾಗಿದೆ.

ಈಗಾಗಲೇ ನಗರದಲ್ಲಿರುವ 1964 ಹಳೆ ಒತ್ತುವರಿ ಪ್ರಕರಣಗಳಿದ್ದು, ಬಿಬಿಎಂಪಿ 1134 ಹೊಸ ಒತ್ತುವರಿಗಳನ್ನು ಪತ್ತೆ ಮಾಡಿದೆ. ಯಾವುದೇ ಕಟ್ಟಡ ನಿರ್ಮಾಣಕ್ಕೆ ಟೌನ್ ಪ್ಲಾನಿಂಗ್ ಅನುಮತಿಸುತ್ತದೆ. ಹೀಗೆ ಅನುಮತಿಸುವಾಗ ಸ್ಥಳಕ್ಕೆ ವಿಸಿಟ್ ಮಾಡಿ ಅನುಮತಿ ನೀಡಬೇಕು. ಆದರೆ ಹಣ ಪಡೆದು ಸ್ಥಳನೋಡದೇ ಅನುಮತಿ ನೀಡಿ ಈಗ ಒತ್ತುವರಿ ಎಂಬ ನಾಟಕವಾಡುತ್ತಿದೆ ಎಂದು ಜನರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ : ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ : ಮತ್ತೊಂದು ಗುಡ್‌ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ
ಒಟ್ಟಾರೆ ಬಿಬಿಎಂಪಿಯೇ ಮನೆ ಅಥವಾ ಕಟ್ಟಡ ನಿರ್ಮಿಸಲು ಅನುಮತಿ ನೀಡಿ ಕೊನೆಗೆ ಒತ್ತುವರಿ ಎನ್ನುತ್ತದೆ. ಇದರಿಂದ ಗೊತ್ತೋ ಗೊತ್ತಿಲ್ಲದೆಯೋ ಜನರು ಸಂಕಷ್ಟಕ್ಕಿಡಾಗುತ್ತಿದ್ದಾರೆ. ಆದರೆ ಈ ಬಾರಿ ಒತ್ತುವರಿ ಸರ್ವೇ ಮಾತ್ರ ತೆರವಿಲ್ಲ ಎನ್ನುವುದನ್ನು ಬಿಬಿಎಂಪಿ ಸ್ಪಷ್ಟ ಪಡಿಸಿದ್ದರೂ ಒತ್ತುವರಿ ಮಾಡಲು ಅವಕಾಶ ಕೊಟ್ಟಿರೋದ್ಯಾಕೆ ಅನ್ನೋದು ಪ್ರಜ್ಞಾವಂತರ ಪ್ರಶ್ನೆ.
Bangalore News House building shopping complex on Rajakaluve, BBMP statistic, where in eight zone in Kannada News