BMTC Double-Decker Buses : ಬೆಂಗಳೂರಿನ ಈ 3 ಮಾರ್ಗದಲ್ಲಿ ಮಾತ್ರವೇ ಸಂಚರಿಸಲಿವೆ ಡಬಲ್‌ ಡೆಕ್ಕರ್‌ ಬಸ್ಸುಗಳು

BMTC Double-Decker Buses : ಸಿಲಿಕಾನ್‌ ಸಿಟಿ ಬೆಂಗಳೂರು ನಗರದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬೆಂಗಳೂರು ನಿವಾಸಿಗಳಿಗೆ ಗುಡ್‌ನ್ಯೂಸ್‌ ಕೊಟ್ಟಿದೆ.

BMTC Double-Decker Buses : ಸಿಲಿಕಾನ್‌ ಸಿಟಿ ಬೆಂಗಳೂರು ನಗರದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬೆಂಗಳೂರು ನಿವಾಸಿಗಳಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಶೀಘ್ರದಲ್ಲಿಯೇ ಡಬಲ್‌ ಡೆಕ್ಕರ್‌ ಬಸ್ಸುಗಳನ್ನು ರಸ್ತೆ ಇಳಿಸಲು ಸಜ್ಜಾಗಿದ್ದು, ಸಿಲಿಕಾನ್‌ ಸಿಟಿ ಬೆಂಗಳೂರಿನ ಈ 3 ಮಾರ್ಗಗಳಲ್ಲಿ ಮಾತ್ರವೇ ಬಸ್‌ ಸಂಚರಿಸಲಿದೆ. ಯಾವೆಲ್ಲಾ ಮಾರ್ಗದಲ್ಲಿ ಡಬಲ್‌ ಡೆಕ್ಕರ್‌ ಬಸ್‌ ಸಂಚಾರ ನಡೆಸಲಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

BMTC Double-Decker Buses To Run Only On 3 routes in Bangalore City
Image Credit to Original Source

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಬಿಎಂಟಿಸಿ ಹೊಸ ಹೊಸ ಫ್ಲ್ಯಾನ್‌ ರೂಪಿಸುತ್ತಿದೆ. ಅದ್ರಲ್ಲೂ ದೇಶದ ಮಹಾನಗರಗಳಲ್ಲಿ ಸಾರಿಗೆ ಬಸ್ಸುಗಳ ವಿಚಾರದಲ್ಲಿ ಹೊಸ ಯೋಜನೆ ಜಾರಿಗೆ ಬಂದಿದೆ. ಇದೀಗ ಬಿಎಂಟಿಸಿ ರಾಜಧಾನಿಯಲ್ಲಿ ಡಬಲ್‌ ಡೆಕ್ಕರ್‌ ಬಸ್ಸುಗಳನ್ನು ರಸ್ತೆಗೆ ಇಳಿಸಲಿದೆ.

ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳ ಎಫೆಕ್ಟ್: ಪೌರ ಕಾರ್ಮಿಕರ 15 ಕೋಟಿ ಅನುದಾನ ಹಿಂಪಡೆದ ಸರ್ಕಾರ

ವಾಹನ ದಟ್ಟಣೆಯನ್ನು ನಿಯಂತ್ರಣ ಮಾಡುವ ಸಲುವಾಗಿಯೇ ರಾಜ್ಯ ಸರಕಾರ ಬೆಂಗಳೂರಲ್ಲಿ ನಮ್ಮ ಮೆಟ್ರೋ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿವೆ. ಸದ್ಯದಲ್ಲಿಯೇ ಹಳದಿ ಮಾರ್ಗದ ಮೆಟ್ರೋ ಸಂಚಾರ ಆರಂಭವಾಗಲಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ನಮ್ಮ ಮೆಟ್ರೋ ರೈಲುಗಳು ಬೆಂಗಳೂರಿನಾದ್ಯಂತ ಸಂಚಾರ ನಡೆಸಲಿವೆ. ನಮ್ಮ ಮೆಟ್ರೋ ಯೋಜನೆಯಿಂದ ಪ್ರಯಾಣಿಕರ ಓಡಾಟಕ್ಕೆ ನೆರವಾಗಿತ್ತು. ಆದ್ರೀಗ ಡಬಲ್‌ ಡೆಕ್ಕರ್‌ ಯೋಜನೆ ಕೂಡ ಸಹಕಾರಿಯಾಗಲಿದೆ.

ಬಿಎಂಟಿಸಿ ಅಧಿಕಾರಿಗಳು ಈಗಾಗಲೇ ಡಬಲ್‌ ಡೆಕ್ಕರ್‌ ಬಸ್ಸುಗಳ ಸಂಚಾರಕ್ಕೆ ಸಂಬಂಧಸಿದಂತೆ ಸಮೀಕ್ಷೆಗಳನ್ನು ನಡೆಸಿದೆ. ಬೆಂಗಳೂರು ನಗರದ ಎಲ್ಲಾ ಭಾಗದಲ್ಲಿಯೂ ಡಬಲ್‌ ಡೆಕ್ಕರ್‌ ಬಸ್ಸುಗಳು ಸಂಚಾರ ನಡೆಸೋದಕ್ಕೆ ಸಾಧ್ಯವಿಲ್ಲ. ನಗರದ ಕೆಲವು ಮಾರ್ಗಗಳಲ್ಲಿ ಅಂಡರ್‌ ಪಾಸ್‌ ನಿರ್ಮಾಣ ಮಾಡಲಾಗಿದೆ. ಇಂತಹ ರಸ್ತೆಗಳಲ್ಲಿ ಡಬಲ್‌ ಡೆಕ್ಕರ್‌ ಬಸ್ಸುಗಳು ಸಂಚಾರ ನಡೆಸೋದಕ್ಕೆ ಸಾಧ್ಯವಿಲ್ಲ.‌

ಇದನ್ನೂ ಓದಿ : ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯು 300 ಯೂನಿಟ್ ವಿದ್ಯುತ್‌ ಉಚಿತ : ಕೇಂದ್ರ ಸರಕಾರದಿಂದ ಹೊಸ ಯೋಜನೆ

ಬೆಂಗಳೂರಿನ ಮೆಜಿಸ್ಟಿಕ್‌ನಿಂದ ಶಿವಾಜಿನಗರ, ಎಲೆಕ್ಟ್ರೋನಿಕ್‌ ಸಿಟಿ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಮೈಸೂರು ರಸ್ತೆ, ಇಂದಿರಾನಗರ, ವಿಧಾನಸೌಧ, ಕಬ್ಬನ್‌ ಪಾರ್ಕ್‌, ಜಯನಗರ, ಜೆಪಿ ನಗರ, ಅತ್ತಿಬೆಲೆಯ ವರೆಗೂ ಸಂಚಾರ ನಡೆಸಬಹುದಾಗಿದೆ. ಸದ್ಯ ಬೆಂಗಳೂರಲ್ಲಿ ಒಟ್ಟು 10 ಎಲೆಕ್ಟ್ರಾನಿಕ್‌ ಬಸ್ಸುಗಳನ್ನು ಪ್ರಾಯೋಗಿಕವಾಗಿ ರಸ್ತೆಗೆ ಇಳಿಸಲಾಗುತ್ತದೆ. ಪ್ರಾಯೋಗಿಕ ಸಂಚಾರ ಯಶಸ್ವಿ ಆದ್ರೆ ಮುಂದಿನ ದಿನಗಳಲ್ಲಿ ಬೆಂಗಳೂರಲ್ಲಿ ಇನ್ನಷ್ಟು ಬಸ್ಸುಗಳು ಸಂಚಾರ ನಡೆಸಲಿವೆ.

BMTC Double-Decker Buses To Run Only On 3 routes in Bangalore City
Image Credit to Original Source

ಡಬಲ್‌ ಡೆಕ್ಕರ್‌ ಬಸ್ಸುಗಳಲ್ಲಿ ಏಕಕಾಲದಲ್ಲಿ 90 ಮಂದಿ ಪ್ರಯಾಣಿಸಬಹುದಾಗಿದೆ. ಡಬಲ್‌ ಡೆಕ್ಕರ್‌ ಬಸ್ಸುಗಳ ಸಂಚಾರ ಯಶಸ್ವಿ ಆದ್ರೆ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆ ಆಗಲಿದೆ. ಅದಲ್ಲೂ ಐಟಿ ಮಂದಿಗೆ ಮಾತ್ರ ವರದಾನವಾಗಲಿದೆ. ಈ ಹಿಂದೆ ಡಬಲ್‌ ಡೆಕ್ಕರ್‌ ಬಸ್ಸುಗಳು ಮೇಲ್ಚಾವಣಿ ಓಪನ್‌ ಆಗಿರುವ ಬದಲು ಆರಂಭಿಕ ಹಂತದಲ್ಲಿ ಮೇಲ್ಚಾವಣೆ ಮುಚ್ಚಿರುವ ಬಸ್ಸುಗಳನ್ನು ಖರೀದಿಸಲು ಯೋಜನೆ ರೂಪಿಸಿದೆ.

ಇದನ್ನೂ ಓದಿ : ಬ್ಯಾಂಕ್‌ ಗ್ರಾಹರಿಕೆ ಎಚ್ಚರಿಕೆಕೊಟ್ಟ RBI : ಬ್ಯಾಂಕ್‌ ಖಾತೆ ಹೊಂದಿರುವ ಪ್ರತಿಯೊಬ್ಬರೂ ಈ ಸ್ಟೋರಿಯನ್ನು ತಪ್ಪದೇ ಓದಿ

ಡಬಲ್‌ ಡೆಕ್ಕರ್‌ ಬಸ್ಸುಗಳ ಸಂಚಾರದಿಂದ ಬೆಂಗಳೂರು ನಗರಕ್ಕೆ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಅನುಕೂಲವಾಗಲಿದೆ. ಡಬಲ್‌ ಡೆಕ್ಕರ್‌ ಬಸ್ಸುಗಳನ್ನು ದಿನದ ಪ್ಯಾಕೇಜ್‌ ಲೆಕ್ಕಾಚಾರದಲ್ಲಿ ನೀಡುವ ನಿಟ್ಟಿನಲ್ಲಿಯೂ ಬಿಬಿಎಂಪಿ ಅಧಿಕಾರಿಗಳು ಯೋಚನೆಯಲ್ಲಿದ್ದಾರೆ. ಆದರೆ ಈ ಎಲ್ಲಾ ಯೋಜನೆಗಳು ಡಬಲ್‌ ಡೆಕ್ಕರ್‌ ಬಸ್ಸುಗಳು ರಸ್ತೆಗೆ ಇಳಿದ ನಂತರವಷ್ಟೇ ನಿರ್ಧಾರವಾಗಲಿದೆ.

BMTC Double-Decker Buses To Run Only On 3 routes in Bangalore City

Comments are closed.