Namma Metro ಕಾಮಗಾರಿ ವೇಳೆ ಅನಾಹುತ : ಮುಚ್ಚಿದ ಬಾವಿಯಿಂದ 30 ಅಡಿ ಮಣ್ಣು ಕುಸಿತ

ಬೆಂಗಳೂರು : ನಮ್ಮ ಮೆಟ್ರೋ ಕಾಮಗಾರಿಯ ವೇಳೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮುಚ್ಚಿದ ಬಾವಿಯಿಂದ ಸುಮಾರು ಮೂವತ್ತು ಅಡಿಯಷ್ಟು ಮಣ್ಣು ಕುಸಿದಿರುವ ಘಟನೆ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿ ನಡೆದಿದೆ. ಆದರೆ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಗೊಟ್ಟಿಗೆರೆಯಿಂದ ನಾಗವಾರದ ವರೆಗೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಟಿವಿಎಂ ಮೆಶಿನ್‌ ಊರ್ಜಾ ಸುರಂಗ ಕೊರೆದು ಹೊರಬಂದಿತ್ತು. ಆದ್ರೆ ಇದೀಗ ಮೆಟ್ರೋ ಕಾಮಗಾರಿಯಿಂದಾಗಿ ಟ್ಯಾನರಿ ರಸ್ತೆಯಲ್ಲಿ ಮುಚ್ಚಿದ ಬಾವಿಯಿಂದ ಸುಮಾರು ಮೂವತ್ತು ಅಡಿಯಷ್ಟು ಮಣ್ಣು ಕುಸಿದಿದೆ. ಆದರೆ ಅದೃಷ್ಟವಶಾತ್‌ ಸ್ಥಳದಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಭಾರಿ ಅನಾಹುತ ತಪ್ಪಿದೆ. ಆದ್ರೆ ಮೆಟ್ರೋ ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಟ್ಯಾನರಿ ರಸ್ತೆಯಲ್ಲಿರುವ ಬಾವಿಯ ಜಾಗದ ಮಾಲೀಕ ಝುಬಿ ಎಂಬವರು ಕಳೆದ ಕೆಲವು ವರ್ಷದ ಹಿಂದೆ ಮಣ್ಣು ಹಾಕಿ ಬಾವಿಯನ್ನು ಮುಚ್ಚಿದ್ದರು. ಆದರೆ ಬಿಎಂಆರ್‌ಸಿಎಲ್‌ ಕಾಮಗಾರಿಯಿಂದಾಗಿ ಬಾವಿಗೆ ಮುಚ್ಚಿದ್ದ ಮಣ್ಣು ಕುಸಿತವಾಗಿದೆ. ಅಲ್ಲದೇ ಸುತ್ತಮುತ್ತಲ ಜಾಗದಲ್ಲಿರುವ ಕಟ್ಟಡಗಳು ಕುಸಿತದ ಭೀತಿ ಎದುರಾಗಿದೆ. ಹೀಗಾಗಿ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಈ ಜಾಗವನ್ನು ತಮ್ಮ ವಶಕ್ಕೆ ಪಡೆದು ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.

ಮೆಟ್ರೋ ಕಾಮಗಾರಿಯಿಂದ ಯಾವೆಲ್ಲ ರೀತಿಯಲ್ಲಿ ಸಮಸ್ಯೆ ಆಗಲಿದೆ ಅನ್ನೋ ಕುರಿತು ಅಧಿಕಾರಿಗಳು ಮೊದಲೇ ಪರಿಶೀಲನೆಯನ್ನು ನಡೆಸಬೇಕಾಗಿತ್ತು. ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದೀಗ ಸ್ಥಳಕ್ಕೆ ಮೆಟ್ರೋ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ಲಕ್ಕಸಂದ್ರದಲ್ಲಿ ದುರಂತ : 3 ಅಂತಸ್ತಿನ ಕಟ್ಟಡ ಕುಸಿತ

ಇದನ್ನೂ ಓದಿ : ಯುವತಿಯನ್ನು ನಗ್ನಗೊಳಿಸಿ ವಿಡಿಯೋ : ಹಣಕ್ಕೆ ಡಿಮ್ಯಾಂಡ್‌ ಇಟ್ಟ ಆರೋಪಿಗಳ ಬಂಧನ

( If the Namma Metro works, a 30 foot soil collapse from a closed well )

Comments are closed.