Bangalore police : ಪೊಲೀಸರ ಮೇಲೆ ಹಲ್ಲೆಗೆ ಯತ್ನ : ಉಡುಪಿ ಮೂಲದ ರೌಡಿಶೀಟರ್ ಗಳ ಮೇಲೆ ಫೈರಿಂಗ್

ಬೆಂಗಳೂರು : ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರೌಡಿಶೀಟರ್​ಗಳ ಮೇಲೆ ಪೊಲೀಸರು (Bangalore police) ಫೈರಿಂಗ್​​ ನಡೆಸಿದ್ದಾರೆ. ಇಬ್ಬರೂ ಕೂಡ ಉಡುಪಿ ಮೂಲದವರು ಎಂದು ತಿಳಿದು ಬಂದಿದೆ. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಶಿಕ್ ಮತ್ತು ಇಸಾಕ್​​ ಎಂಬವರೇ ಪೊಲೀಸರಿಂದ ಗುಂಡೇಟು ತಿಂದವರು. ಇಬ್ಬರೂ ಕೂಡ ಉಡುಪಿ ಮೂಲದವರು ಎಂದು ತಿಳಿದು ಬಂದಿದೆ. ಇಬ್ಬರು ರೌಡಿಶೀಟರ್‌ಗಳ ವಿರುದ್ದ ಉಡುಪಿ, ಮಣಿಪಾಲ, ಮಂಗಳೂರಿನಲ್ಲಿ ಕೇಸ್ ದಾಖಲಾಗಿತ್ತು.

ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ಕಾರನ್ನ ಅಡ್ಡಗಟ್ಟಿ ಮಾರ್ಚ್ 26 ರಂದು ವ್ಯಕ್ತಿ ಸುಲಿಗೆ ಮಾಡಲಾಗಿತ್ತು. ಸುಲಿಗೆ ಬಳಿಕ ದೂರುದಾರರನ್ನ ಲೈಂಗಿಕವಾಗಿ ಬಳಸಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಕೊತ್ತನೂರು ಇನ್ಸ್ ಪೆಕ್ಟರ್ ಮತ್ತು ತಂಡ ಬಂಧಿಸಲು ತೆರಳಿದ್ದಾಗ ಈ ಘಟನೆ ನಡೆದಿದೆ. ಸಂಪಿಗೆಹಳ್ಳಿ ಉಪವಿಭಾಗ ಎಸಿಪಿ ರಂಗಪ್ಪ ನೇತೃತ್ವದಲ್ಲಿ ದಾಳಿ ನಡೆದಿತ್ತು. ಇದೀಗ ಕೊತ್ತನೂರು ಠಾಣೆ ಇನ್‌ಸ್ಪೆಕ್ಟರ್‌ ​ ಚೆನ್ನೇಶ್​ ಆರೊಪಿಗಳ ಮೇಲೆ ಗುಂಡು ಹಾರಿಸಿ, ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಹಿಂದೆ ಆರೋಪಿಗಳು ಪೊಲೀಸ್​ ಸಬ್​ಇನ್ಸ್​ಪೆಕ್ಟರ್​​ ಉಮೇಶ್​ ಎದೆಗೆ ಚಾಕು ಇರಿದಿದ್ದರು. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಈ ಪ್ರಕರಣ ನಡೆದಿದೆ. ಪೊಲೀಸರು ಬಂಧಿತ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಪೋಸ್ಟ್‌ ವೆಡ್ಡಿಂಗ್‌ ಪೋಟೋ ಶೂಟ್‌ ವೇಳೆ ದುರಂತ : ಮದುಮಗ ಸಾವು

ಇದನ್ನೂ ಓದಿ : ಕೋಟ ಮಣೂರು ಬಳಿ ಭೀಕರ ಅಪಘಾತ : ಓರ್ವ ಸಾವು, ಇಬ್ಬರು ಗಂಭೀರ

Bangalore police firing 2 rowdy sheeters base Udupi

Comments are closed.