private vehicle : ಮುಂದುವರೆದ ಬೆಲೆ ಏರಿಕೆ : ಇನ್ಮುಂದೇ ಖಾಸಗಿ ವಾಹನ ಪ್ರಯಾಣವೂ ದುಬಾರಿ

ಬೆಂಗಳೂರು : ವಿದ್ಯುತ್ ಹಾಗೂ ಹೊಟೇಲ್ ಊಟ ತಿಂಡಿ ದರ ಏರಿಕೆಯಿಂದ ಕಂಗಾಲಾದ ಜನರಿಗೆ ಇಂದು ಮತ್ತೊಂದು ಶಾಕ್ ಎದುರಾಗಿದೆ. ಹೌದು, ಪೆಟ್ರೋಲ್ ಡಿಸೇಲ್, ಗ್ಯಾಸ್, ಕರೆಂಟ್ ಬಳಿಕ ಈಗ ಖಾಸಗಿ ಟ್ರಾನ್ಸ್ ಪೋರ್ಟ್ (private vehicle ) ದರ ಏರಿಕೆ ಸರದಿ. ಎಲ್ಲರೂ ದರ ಏರಿಸಿದ್ದಾರೆ ನಾವೇನು ಕಡಿಮೆ ಎಂದು ಕಣಕ್ಕಿಳಿದಿರೋ ಪ್ರವೈಟ್ ಟ್ರಾನ್ಸಪೋರ್ಟ್ ಮಂದಿ ಬೆಲೆ ಏರಿಕೆಗೆ ಸಜ್ಜಾಗಿದ್ದಾರೆ.

ಪೆಟ್ರೋಲ್ , ಡಿಸೇಲ್ ಸೇರಿದಂತೆ ಎಲ್ಲವೂ ಬೆಲೆ ಏರಿಕೆಯಾಗಿದೆ. ಹೀಗಾಗಿ ಬೆಲೆ ಏರಿಸದೇ ಇದ್ದಲ್ಲಿ ನಾವು ಬದುಕೋದು ಕಷ್ಟ. ಹೀಗಾಗಿ ಬೆಲೆ ಏರಿಕೆ ಅನಿವಾರ್ಯ ಅಂತಿದ್ದಾರೆ ಖಾಸಗಿ ಟ್ರಾನ್ಸಪೋರ್ಟ್ ಮಾಲೀಕ ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಖಾಸಗಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳ, ಉಕ್ರೇನ್ ರಷ್ಯಾದ ಯುದ್ದದ ಪರಿಣಾಮ ಪೆಟ್ರೋಲಿಯಂ ಬೆಲೆ ಏರಿಕೆಯಾಗಿದೆ. ಕಳೆದ 10 ದಿನಗಳಲ್ಲಿ ಡಿಸೇಲ್ ಬೆಲೆ 10 ರೂ ಜಾಸ್ತಿ ಆಗಿದೆ.ಜೊತೆಗೆ ಬೇರೆ ಬೇರೆ ವಲಯದಲ್ಲೂ ಬೆಲೆ ಏರಿಕೆಯಾಗ್ತಿದೆ, ಟೋಲ್ ದರವೂ ಸಹ ಹೆಚ್ಚಾಗಿದೆ ಹೀಗಾಗಿ ನಾವೂ ಸಹ ದರ ಏರಿಕೆ ಮಾಡಬೇಕಾಗಿದೆ, ಶೇ 10 ರಷ್ಟು ಏರಿಕೆ ಆಗಲೇಬೇಕಾಗಿದೆ ಎಂದಿದ್ದಾರೆ.

ಡಿಸೇಲ್ ಬೆಲೆ ಏರಿಕೆಯಾಗ್ತಿರೋದನ್ನ ನೋಡಿದ್ರೇ ಮುಂದಿನ ದಿನಗಳಲ್ಲಿ ಟ್ಯಾಕ್ಸಿ ಬಾಡಿಗೆ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ನಾವೂ ಬೆಲೆ ಏರಿಕೆ ಮಾಡದೇ ಹೋದ್ರೇ ನಮ್ಮ ಉದ್ಯಮ ನಷ್ಟ ಅನುಭವಿಸಬೇಕಾಗುತ್ತೆ. ಈಗಾಗಲೇ ಖಾಸಗಿ ವಾಹನಗಳಲ್ಲಿ ಸಂಚರಿಸುವವರ ಸಂಖ್ಯೆ ಕೂಡ ಕುಸಿದಿದೆ. ಕೊರೋನಾ ಬಳಿಕ ಜನರು ಹೆಚ್ಚು ಸ್ವಂತ ವಾಹನಗಳಿಗೇ ಆದ್ಯತೆ ನೀಡುತ್ತಿದ್ದಾರೆ.

ಇಂಥ ಹೊತ್ತಿನಲ್ಲಿ ಸಾಲ ಮಾಡಿ ವಾಹನ ಖರೀದಿಸಿ ಬಾಡಿಗೆ ಹೊಡೆಯೋ ವಾಹನ ಮಾಲೀಕರಿಗೆ ಸಾಲದ ಕಂತು ಕಟ್ಟೋದೇ ಕಷ್ಟ ಎಂಬಂತಾಗಿದೆ. ಈ ಮಧ್ಯೆ ತೈಲ ಬೆಲೆ ಏರಿಕೆ ಮತ್ತಷ್ಟು ಸಂಕಷ್ಟ ತಂದಿದೆ. ಹೀಗಾಗಿ ಅನಿವಾರ್ಯವಾಗಿಯೇ ನಾವು ಎಲ್ಲರಂತೆ ದರ ಏರಿಕೆ ಮಾಡೋದು ಅಗತ್ಯವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಲ್ಲದೇ ಯಾವ ಯಾವ ಆಧಾರದ ಮೇಲೆ ಯಾವ ವಾಹನಕ್ಕೆ ಎಷ್ಟು ದರ ಏರಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದ್ದು, ಶೀಘ್ರವೇ ಈ ಬಗ್ಗೆ ಚರ್ಚೆ ಮಾಡಿ ಅಧಿಕೃತ ನಿರ್ಧಾರ ಪ್ರಕಟಿಸಲಾಗುವುದು ಎಂದು‌ಮಾಹಿತಿ ನೀಡಿದ್ದಾರೆ. ಹೀಗಾಗಿ ಸದ್ಯದಲ್ಲೇ ಖಾಸಗಿ ಬಸ್, ಕಾರು, ಕ್ಯಾಬ್ ಗಳು ದುಬಾರಿಯಾಗೋ ಫಿಕ್ಸ್ ಎಂಬಂತಾಗಿದೆ.

ಇದನ್ನೂ ಓದಿ : ನೌಕರರ ಸಂಬಳಕ್ಕೆ, ಪಿಎಫ್ ಗೆ ದುಡ್ಡಿಲ್ಲ: ಹೊಸ ಬಸ್ ಖರೀದಿಸೋಕೆ ಮುಂದಾದ ಸಾರಿಗೆ ಸಂಸ್ಥೆ

ಇದನ್ನೂ ಓದಿ : ಬಾಯ್ಕಾಟ್ ಹಲಾಲ್ ಎಫೆಕ್ಟ್ : ಒಂದೇ ದಿನ 7 ಕೋಟಿ ಮೊತ್ತದ ಜಟ್ಕಾ ಮಾಂಸ ಮಾರಾಟ

private vehicle travel are also expensive in Karnataka

Comments are closed.