Hindu Temples : ಹಿಂದೂ ದೇವಾಲಯಗಳಿಗೆ ವಾರ್ನಿಂಗ್ : ಬೆಂಗಳೂರು ಪೊಲೀಸರ ಕ್ರಮಕ್ಕೆ ಆಕ್ರೋಶ

ಬೆಂಗಳೂರು : ಒಂದೆಡೆ ಹಿಂದೂ ಪರ ಸಂಘಟನೆಗಳು ಮಸೀದಿಗಳ ಆಜಾನ್ ವಿರುದ್ಧ ಸಮರ ಸಾರಿದ್ದರೇ, ಇತ್ತ ಬೆಂಗಳೂರಿನ ಖಾಕಿ ಪಡೆ ಮಾತ್ರ ಹಿಂದೂ ದೇವಾಲಯ (Hindu Temples) ಗಳ ಬೆನ್ನು ಬಿದ್ದಂತಿದೆ. ನಿನ್ನೆಯಷ್ಟೇ ಬೆಂಗಳೂರು ಪೊಲೀಸರು (Bangalore Police Commissioner) ಮಲ್ಲೇಶ್ವರಂ ನ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ನೊಟೀಸ್ ನೀಡಿದ ಬೆನ್ನಲ್ಲೇ ಈಗ ಅದೇ ಏರಿಯಾದ ಗಂಗಮ್ಮ ದೇವಾಲಯ ಕ್ಕೂ ಸೂಚನೆ ರವಾನಿಸಿ ಬಿಸಿ ಮುಟ್ಟಿಸಿದ್ದಾರಂತೆ.

ಮಲ್ಲೇಶ್ವರಂದಲ್ಲಿಯೇ ಇರೋ ಗಂಗಮ್ಮ ದೇವಸ್ಥಾನಕ್ಕೆ ಪೊಲೀಸರು ವಾರ್ನ್ ಮಾಡಿದ್ದು, ನಿನ್ನೆ ಪೊಲೀಸ್ ಸಿಬ್ಬಂದಿಗಳು ಮೌಕಿಕವಾಗಿ ಎಚ್ಚರಿಕೆ ನೀಡಿ ಹೆಚ್ಚು ಧ್ವನಿವರ್ಧಕ ಬಳಸದಂತೆ ಸೂಚಿಸಿದ್ದಾರಂತೆ. ಹೈಕೋರ್ಟ್ ಆದೇಶದಂತೆ ನಿಯಮ ಪಾಲಿಸಿ. ಹೆಚ್ಚು ಧ್ವನಿವರ್ಧಕಗಳನ್ನ ಬಳಸಬೇಡಿ ಎಂದು ಎಚ್ಚರಿಸಿದ್ದಾರೆ ಎಂದು ಮಾಧ್ಯಮಗಳಿಗೆ ದೇವಾಲಯದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅಲ್ಲದೇ ನಮ್ಮ‌ ದೇವಸ್ಥಾನದಲ್ಲಿ ಇಲ್ಲಿಯವರೆಗೆ ಮೈಕ್ ಬಳಸಿಲ್ಲ.ಹಬ್ಬದಂದು ವಿಶೇಷ ಪೂಜೆ ವೇಳೆ ಅನುಮತಿ ಪಡೆದು ಬಳಸುತ್ತೇವೆ.ಪೊಲೀಸರ ಅನುಮತಿ ಪಡೆದೇ ಧ್ವನಿವರ್ಧಕ ಬಳಸುತ್ತೇವೆ. ಇದೇ ಕಾರಣಕ್ಕೆ ನಿಮಗೆ ನೋಟಿಸ್ ಕೊಟ್ಟಿಲ್ಲ, ಮೌಕಿಕವಾಗಿ ಎಚ್ಚರಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾಗಿ, ಮಲ್ಲೇಶ್ವರಂನ ಗಂಗಮ್ಮ ದೇವಸ್ಥಾನದ ಅಧ್ಯಕ್ಷ ಸುಧಾಕರ್ ಹೇಳಿದ್ದಾರೆ.

ನಿನ್ನೆ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ನೊಟೀಸ್ ನೀಡಿದ್ದು, ಇದಕ್ಕೆ ಅಲ್ಲಿನ ಸಿಬ್ಬಂದಿ ಹಾಗೂ ಅರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿನಿತ್ಯ ಸಾವಿರಾರು ಜನ ಭಕ್ತರು ಭೇಟಿ ಕೊಡುವ ದೇವಾಲಯಕ್ಕೆ ಹೀಗೆ ನೊಟೀಸ್ ನೀಡಲಾಗಿದೆ. ಆದರೆ ನಾವು ಎಂದೂ ಮೈಕ್ ಬಳಸಿಯೇ ಇಲ್ಲ ಎಂದು ಅರ್ಚಕರು ಮಾಹಿತಿ ನೀಡಿದ್ದರು. ಕೇವಲ ಈ ಎರಡು ದೇವಾಲಯ ಮಾತ್ರವಲ್ಲದೇ, ಬೆಂಗಳೂರಿನ ಕೆಲ ಹಿಂದು ದೇವಾಲಯಗಳಿಗೆ ಮೌಕಿಕ ಸೂಚನೆಯನ್ನು ಪೊಲೀಸ್ ಇಲಾಖೆ ನೀಡಿದ್ದು ನ್ಯಾಯಾಲಯ ಆದೇಶವನ್ನು ಪಾಲಿಸುವಂತೆ ಸೂಚಿಸಲಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ಸ್ಥಳೀಯ ಪೊಲೀಸ್ ಠಾಣೆಗಳಿಂದ ದೇವಾಲಯಗಳ ಆಡಳಿತ ಮಂಡಳಿಯವರಿಗೆ ಸೂಚನೆಯನ್ನು ನೀಡಿ ಡೆಸಿಬಲ್ ಸೌಂಡ್ ನಿಯಮದ ಬಗ್ಗೆ ಪೊಲೀಸರಿಂದ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ಹೆಚ್ಚು ಧ್ವನಿವರ್ಧಕ ಬಳಸದಂತೆ ಸೂಚಿಸಿರುವ ಪೊಲೀಸರು ಶಬ್ಧ ಮಾಲಿನ್ಯ ಮಾಡದಂತೆ ಹೇಳಿದ್ದಾರಂತೆ.

ಕೆಲ ದಿನಗಳ ಹಿಂದೆಯಷ್ಟೇ ನಗರದ ಪ್ರಸಿದ್ಧ ಬಸವನಗುಡಿ ಗಣೇಶ ದೇವಾಲಯಕ್ಕೆ ನೊಟೀಸ್ ನೀಡಿದ್ದ ಪೊಲೀಸರ ಕ್ರಮಕ್ಕೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈಗ ಮತ್ತೆ ಹಿಂದೂಪರ ಸಂಘಟನೆಗಳು ಪೊಲೀಸರ ಈ ಆದೇಶದಿಂದ ಕೆರಳಿದ್ದು, ಮಸೀದಿಗಳಿಗೆ ಅನ್ವಯವಾಗದ ಆದೇಶ ನಮಗೇಕೆ ಎಂದು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ : ಪಿಎಸ್​ಐ ನೇಮಕಾತಿ ಅಕ್ರಮ : ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷನ ಬಂಧನ

ಇದನ್ನೂ ಓದಿ : ದಿನದ 24 ಗಂಟೆಯೂ ಬಾಗಿಲು ತೆರೆಯುತ್ತಾ ಬೆಂಗಳೂರು : ಹೊಟೇಲ್ ಸಂಘದ ಮನವಿಗೆ ಆಯುಕ್ತರು ಹೇಳಿದ್ದೇನು ?

Bangalore police Warning to Hindu Temples for Loud Speaker

Comments are closed.