BBMP Election : ಕೊನೆಗೂ ಚುನಾವಣೆಗೆ ಸಿದ್ಧವಾದ ಬಿಬಿಎಂಪಿ: ಸರ್ಕಾರಕ್ಕೆ ಡಿ ಲಿಮಿಟೇಶನ್ ಪಟ್ಟಿ ಸಲ್ಲಿಕೆ

ಬೆಂಗಳೂರು : ಕೊನೆಗೂ ಬೆಂಗಳೂರಿ‌ನ ಆಡಳಿತ ಚುಕ್ಕಾಣಿ ಹಿಡಿಯುವ ಬಿಬಿಎಂಪಿಗೆ ಚುನಾವಣೆ (BBMP Election) ಕಾಲ‌ ಸನ್ನಿಹಿತವಾಗಿದೆ. ಕೆಲದಿನಗಳ ಹಿಂದೆಯಷ್ಟೇ ಬಿಬಿಎಂಪಿ ಚುನಾವಣೆ (BBMP Election) ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬಿಬಿಎಂಪಿ ಕೊನೆಗೂ ಬಹುನಿರೀಕ್ಷಿತ ಡಿ ಲಿಮಿಟೇಷನ್ ಪಟ್ಟಿ ಸಿದ್ಧ ಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಬಿಬಿಎಂಪಿ ಸರ್ಕಾರಕ್ಕೆ ಡಿ ಲಿಮಿಟೇಷನ್ ವರದಿ ಸಿದ್ಧಪಡಿಸಿ ಸಲ್ಲಿಸಿದ್ದು, ವಾರ್ಡ್ ಮರುವಿಂಗಡಣೆ ಪಟ್ಟಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ಎಂಟು ವಾರದ ಒಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಹೇಳಿತ್ತು. ಈ ಹಿನ್ನೆಲೆ ವಾರ್ಡ್ ವಿಂಗಡಣೆ ಕೆಲಸ ಚುರಕುಗೊಳಿಸಿದ ಬಿಬಿಎಂಪಿ (BBMP Election) ಪಟ್ಟಿ ತಯಾರಿಸಿದೆ. ಸದ್ಯ 198 ಇದ್ದ ವಾರ್ಡ್ ಪಟ್ಟಿಯನ್ನು 243 ವಾರ್ಡ್ ಗೆ ಏರಿಕೆ ಮಾಡಿದ ಬಿಬಿಎಂಪಿ ಡಿ ಲಿಮಿಟೇಷನ್ ಪಟ್ಟಿ ಸಲ್ಲಿಸಿದೆ. ಒಂದು ವಾರ್ಡ್ ಗೆ ಸರಾಸರಿ 35 ಸಾವಿರ ಜನ ಸಂಖ್ಯೆ ಆಧಾರದ ಮೇರೆಗೆ ವಾರ್ಡ್ ವಿಂಗಡಣೆ ಮಾಡಲಾಗಿದ್ದು, 2011ರ ಜನಗಣತಿ ಪ್ರಕಾರ ಡಿ ಲಿಮಿಟೇಷನ್ ಮಾಡಿ ವರದಿ ಸಲ್ಲಿಸಲಾಗಿದೆ. ಸದ್ಯ ಬಿಬಿಎಂಪಿ ಹಳೆಯ ಜನಸಂಖ್ಯೆಯನ್ನು ಆಧರಿಸಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 85 ಲಕ್ಷ ಮತದಾರರನ್ನು ಪಾಲಿಕೆ ಲೆಕ್ಕ ಹಾಕಿದೆ.

ಸದ್ಯ ಪಟ್ಟಿಯನ್ನು ಬಿಬಿಎಂಪಿ ಸರ್ಕಾರಕ್ಕೆ ಸಲ್ಲಿಸಿದೆ. ಒಂದೊಮ್ಮೆ ಈ ಪಟ್ಟಿಗೆ ಸರ್ಕಾರದ ಅನುಮೋದನೆ ಸಿಕ್ಕಲ್ಲಿ ಇದು ಬಿಬಿಎಂಪಿ ಇದನ್ನು ಸಾರ್ವಜನಿಕ ಆಕ್ಷೇಪಣೆ ಸಲ್ಲಿಕೆಗೆ ವಾರ್ಡ್ ವಿಂಗಡಣೆ ಪಟ್ಟಿಯನ್ನು ಇರಿಸಲಿದೆ. ಸಾರ್ವಜನಿಕ ಆಕ್ಷೇಪಣೆಗೆ ಏಳು ದಿನಗಳ ಗಡುವು ನೀಡಲಿರುವ ಬಿಬಿಎಂಪಿ ಅದಾದ ಬಳಿಕ ಪಟ್ಟಿಯನ್ನು ಅಂಗೀಕರಿಸಲಿದೆ. ಈ‌ ಮಧ್ಯೆ ಎರಡೂ ಪಕ್ಷಗಳು ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗಿದ್ದು, ನಾವು ಚುನಾವಣೆಗೆ ಈ ಕ್ಷಣವೇ ಸಿದ್ಧರಿದ್ದೇವೆ ಎಂದು ಆರ್.ಅಶೋಕ್ ಸುಪ್ರೀಂ ಕೋರ್ಟ್ ಆದೇಶ ಬಂದ ದಿನವೇ ಘೋಷಿಸಿದ್ದರು‌.

ಕೇವಲ ಘೋಷಣೆ ಮಾತ್ರವಲ್ಲ ರಾಜ್ಯ ಸರ್ಕಾರ ಈಗಾಗಲೇ ಬಿಬಿಎಂಪಿ ಚುನಾವಣೆಗೆ ಸಿದ್ಧವಾಗಿದ್ದು, ಮೊನ್ನೆ ಸುರಿದ ಭಾರಿ ಮಳೆಗೆ ಹಾನಿಗೊಳಗಾದ ಪ್ರದೇಶಗಳಿಗೆ ಸ್ವತಃ ಸಿಎಂ ಭೇಟಿ ನೀಡಿ ಪರಿಹಾರ ಘೋಷಿಸಿದ್ದರು. ಮಾತ್ರವಲ್ಲ ಹೈಕೋರ್ಟ್ ಛೀಮಾರಿ ಬಳಿಕ ಎಚ್ಚೆತ್ತುಕೊಂಡಿರೋ ಪಾಲಿಕೆ ನಗರದ ರಸ್ತೆ‌ಗುಂಡಿಗಳನ್ನು ತ್ವರಿತವಾಗಿ ಮುಚ್ಚಿ ಬಿಬಿಎಂಪಿ ಚುನಾವಣೆಗೆ ಜನರು ವಿಮುಖರಾಗದಂತೆ ಕಾಳಜಿ ವಹಿಸಲು ಮುಂದಾಗಿದೆ.

ಇದನ್ನೂ ಓದಿ : ಕಾರ್ಮಿಕರಿಗೆ ಬಿಎಂಟಿಸಿ ಶಾಕ್ : ಇಂದಿನಿಂದಲೇ ಉಚಿತ ಪಾಸ್ ಸ್ಥಗಿತ

ಇದನ್ನೂ ಓದಿ : Namma Metro Train : ಮೆಟ್ರೋ ಪ್ರಯಾಣಿಕರಿಗೆ ಶಾಕ್ : ನಾಳೆ ಸ್ಥಗಿತಗೊಳ್ಳಲಿದೆ ಮೆಟ್ರೋ ರೈಲು ಸಂಚಾರ

BBMP Election, Submission of de-limitation list to government

Comments are closed.