Bengaluru Airport : ಮನಸೆಳೆಯುವ ಟರ್ಮಿನಲ್-2 ಗೆ ಮೋದಿ ಚಾಲನೆ: ಗಮನ ಸೆಳೆಯುತ್ತಿದೆ ಕೆಂಪೇಗೌಡ ಏರ್ಪೋರ್ಟ್

(Bengaluru Airport ) ಐಟಿ ಬಿಟಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯ ಹಾದಿಯಲ್ಲಿರೋ ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒಂದು ವರವಾಗಿದೆ. ಈಗ ಈ ಏರ್ಪೋರ್ಟ್ ಮತ್ತಷ್ಟು ಆಕರ್ಷಕವಾಗಿದ್ದು, ನವೆಂಬರ್ 11 ರಂದು ಪ್ರಧಾನಿಯವರಿಂದ ಉದ್ಘಾಟನೆಗೊಳ್ಳಲಿರುವ ಕೆಂಪೇಗೌಡ ಏರ್ಪೋರ್ಟ್ ಟರ್ಮಿನಲ್ 2 ವಿಶ್ವದ ಎಲ್ಲ ಐಷಾರಾಮಿ ಏರ್ಪೋರ್ಟ್ ಗಳಿಗೆ ಸೆಡ್ಡು ಹೊಡೆಯುವಂತಿದೆ. ಅಂದಾಜು 5 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಟರ್ಮಿನಲ್ 2(Bengaluru Airport) ಸಿದ್ಧಪಡಿಸಲಾಗಿದ್ದು, ಶುಕ್ರವಾರ ಇದನ್ನು ಪ್ರಯಾಣಿಕರಿಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

bengaluru-airport-modi-drives-to-impressive-terminal-2-kempegowda-airport-draws-attention

10 ಸಾವಿರ ಚದರ ಮೀಟರನಷ್ಟು ಪ್ರದೇಶವನ್ನು ಅಲಂಕೃತಗೊಳಿಸಲಾಗಿದೆ‌ ಹಸಿರು ಗೋಡೆಗಳು, ಉದ್ಯಾನ ಮಾದರಿಯ ರಚನೆಗಳು,ಪಾರ್ಕ್ ಥೀಮ್ ಜೊತೆಗೆ ಸುಂದರ ಹ್ಯಾಗಿಂಗ್ ಮಾದರಿಯ ರಚನೆಗಳು, ವಿದ್ಯುತ್ ದೀಪಗಳು ಸೇರಿದಂತೆ ನಾನಾ ಬಗೆಯಲ್ಲಿ ಏರ್ಪೋರ್ಟ್ ಶೃಂಗರಿಸಲಾಗಿದ್ದು ಎಲ್ಲವನ್ನು ಸ್ಥಳೀಯ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾಗಿದೆ ಅನ್ನೋದು ನಮ್ಮ ಹಿರಿಮೆ.

bengaluru-airport-modi-drives-to-impressive-terminal-2-kempegowda-airport-draws-attention

ಈ ಏರ್ಪೋರ್ಟ್ ನ ಇನ್ನೊಂದು ವಿಶೇಷವೆಂದರೇ, ಈ ಕ್ಯಾಂಪಸ್ ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನಗಳನ್ನು ಬಳಸಿಕೊಂಡು ಸುಸ್ಥಿರತೆಯನ್ನು ಸಾಧಿಸಿದೆ. ಟರ್ಮಿನಲ್ 2 ವಿದೇಶದ ವಿಮಾನ ನಿಲ್ದಾಣಗಳಿಗೆ ಸೆಡ್ಡು ಹೊಡೆಯುವಂತೆ ನಿರ್ಮಾಣಗೊಂಡಿದ್ದು, ಇದರೊಂದಿಗೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ‌

ಇದನ್ನೂ ಓದಿ : Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ ; ಇಂದೂ ಕೂಡ ಯೆಲ್ಲೋ ಅಲರ್ಟ್‌

ಏರ್ಪೋರ್ಟ್ ಪೋಟೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ ಎಂದು ಬಣ್ಣಿಸಿದ್ದಾರೆ.
ಶೋ ರೂಂ, ಇಮಿಗ್ರೇಶನ್ ಚೆಕ್ ಇನ್ ಸೇರಿದಂತೆ ಎಲ್ಲ ಕಡೆಗಳಲ್ಲೂ ವಿದೇಶಿ ವಿಮಾನ ನಿಲ್ದಾಣದಷ್ಟು ಸುಂದರವಾಗಿ ಟರ್ಮಿನಲ್ ಸಿದ್ಧಗೊಂಡಿದ್ದು, ಅಲ್ಲಲ್ಲಿ ಬೋರ್ಡ್ ಗಳಲ್ಲಿ ಕನ್ನಡಕ್ಕೂ ಅವಕಾಶ ನೀಡಲಾಗಿದೆ.

bengaluru-airport-modi-drives-to-impressive-terminal-2-kempegowda-airport-draws-attention

ಇದನ್ನೂ ಓದಿ : Student suicide : ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕೆ ಹೊರಹಾಕಿದ್ದ ಶಿಕ್ಷಕರು : 13 ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

2001 ರಲ್ಲಿ ಮೊದಲ ಟರ್ಮಿನಲ್ ನಿರ್ಮಾಣದ ವೇಳೆಯೇ ಈ ಟರ್ಮಿನಲ್ ನಿರ್ಮಾಣಕ್ಕೂ ಪ್ಲ್ಯಾನ್ ಸಿದ್ಧಪಡಿಸಲಾಗಿತ್ತು. ಟರ್ಮಿನಲ್ 2 ಅಮೆರಿಕಾ ಮೂಲದ ಸಂಸ್ಥೆ ಸಿದ್ಧಪಡಿಸಿದ್ದು, ಇದರೊಳಗೆ ಕೃತಕ ಉದ್ಯಾನವನ, ಹಕ್ಕಿಗಳ ಕಲರವ ಕೇಳುವಂತೆಯೂ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಟರ್ಮಿನಲ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪಾಸಿಟಿವ್ ಜೊತೆ ನೆಗೆಟಿವ್ ಕಮೆಂಟ್ ಕೂಡ ಇದೆ.

bengaluru-airport-modi-drives-to-impressive-terminal-2-kempegowda-airport-draws-attention

ಆದರೆ ಇನ್ನು ಕೆಲವರು ಕೇವಲ ಟರ್ಮಿನಲ್ ಇಷ್ಟು ಸುಂದರವಾಗಿ ಬಳಸಿದರೇ ಏನು ಪ್ರಯೋಜನ ಟರ್ಮಿನಲ್ ತಲುಪುವ ರಸ್ತೆಗಳ ಬಗ್ಗೆಯೂ ಗಮನ ಹರಿಸಿ ಎಂದು ಕುಟುಕಿದ್ದಾರೆ.

bengaluru-airport-modi-drives-to-impressive-terminal-2-kempegowda-airport-draws-attention

ಸದಾ ಮೋದಿ ಸರ್ಕಾರವನ್ನು, ಬಿಜೆಪಿಯನ್ನು ಟೀಕಿಸುವ ರಮ್ಯ ಕೂಡ ಟರ್ಮಿನಲ್ ಪೋಟೋಗಳನ್ನು ಶೇರ್ ಮಾಡಿದ್ದು, ಏರ್ಪೋರ್ಟ್ ನ ಟರ್ಮಿನಲ್ 2 ಅತ್ಯಂತ ಆಕರ್ಷಕವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

bengaluru-airport-modi-drives-to-impressive-terminal-2-kempegowda-airport-draws-attention

ಈ ಟರ್ಮಿನಲ್ ಜೊತೆಗೆ ಏರ್ಪೋರ್ಟ್ ನ ಹೊರಭಾಗದಲ್ಲಿ ನಿರ್ಮಿಸಲಾದ 108 ಅಡಿ ಎತ್ತರದ ಕೆಂಪೇಗೌಡ ಪುತ್ಥಳಿಯನ್ನು ಮೋದಿಯವರು ಅನಾವರಣಗೊಳಿಸಲಿದ್ದಾರೆ.

(Bengaluru Airport) International airport is a boon for Bengaluru which is on the path of development in all fields including IT BT. Now this airport is more attractive, the Kempegowda Airport Terminal 2, which will be inaugurated by the Prime Minister on November 11, will rival all the luxury airports in the world.

Comments are closed.