Rashmika Mandanna : ಟ್ರೋಲ್‌ ಮಾಡುವವರ ವಿರುದ್ದ ಬಹಿರಂಗ ಪತ್ರ ಬರೆದ ರಶ್ಮಿಕಾ ಮಂದಣ್ಣ

(Rashmika Mandanna) ರಶ್ಮಿಕಾ ಮಂದಣ್ಣ ಪ್ರತಿಯೊಬ್ಬರಿಗೂ ಚಿರಪರಿಚಿತ. ಯಾವುದಾದರು ಕಾರಣಕ್ಕೆ ಟ್ರೋಲ್‌ ಆಗುವುದರ ಮೂಲಕವೇ ರಶ್ಮಿಕಾ ಮಂದಣ್ಣ ಫೇಮಸ್‌ ಅಗಿದ್ದಾರೆ. ರಶ್ಮಿಕಾ ಮಂದಣ್ಣ ಎಷ್ಟೇ ಒಳ್ಳೆ ಸಿನಿಮಾ ಮಾಡಿದರೂ, ಎಷ್ಟೇ ಎತ್ತರಕ್ಕೆ ಬೆಳೆದರು ಜನರು ಬೆನ್ನು ತಟ್ಟುವ ಬದಲು ಅವರನ್ನು ದ್ವೇಷಿಸುವ ಕಾರ್ಯವನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಅವರನ್ನು ಟ್ರೋಲ್‌ ಮಾಡಿ ದ್ವೇಷಿಸುವವರ ಕುರಿತು ರಶ್ಮಿಕಾ ಮಂದಣ್ಣ ಬಹಿರಂಗ ಪತ್ರವನ್ನು ಬರೆದಿದ್ದು, ಅವರಿಗೆ ತೊಂದರೆ ನೀಡಿದವರು ಮತ್ತು ಮನಸ್ಸಿಗೆ ನೋವು ಮಾಡಿದವರ ಕುರಿತು ವಿವರವಾಗಿ ತಿಳಿಸಿದ್ದಾರೆ.

ಈ ಕುರಿತು ಮೌನವಾಗಿದ್ದ ರಶ್ಮಿಕಾ ಮಂದಣ್ಣ(Rashmika Mandanna) ಈಗ ಎಲ್ಲವನ್ನೂ ಹೇಳಿಕೊಂಡು, ತಮ್ಮ ಇನ್ಸ್ಟಾಗ್ರಾಮ್‌ ಪೇಜ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನನಗೆ ಕೆಲವು ವಿಚಾರಗಳು ಸಾಕಷ್ಟು ತೊಂದರೆಗಳನ್ನು ನೀಡಿವೆ. ಈ ಬಗ್ಗೆ ನಾನು ಮೊದಲೇ ಮಾತನಾಡಬೇಕಿತ್ತು” ಎನ್ನುವ ಮೂಲಕ ಪತ್ರವನ್ನು ಬರೆಯಲಾರಂಭಿಸಿದ್ದು, ವೃತ್ತಿ ಜೀವನ ಆರಂಭವಾದಾಗಿನಿಂದಲೂ ನನ್ನನ್ನು ದ್ವೇ಼ಷಿಸುತ್ತಿದ್ದಾರೆ. ಟ್ರೋಲ್‌ ಮತ್ತು ನೆಗೆಟಿವಿಟಿಗೆ ನಾನು ಪಂಚಿಂಗ್‌ ಬ್ಯಾಗ್‌ ರೀತಿ ಆಗಿದ್ದೇನೆ.ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಹಾಗಿದೆ.ಪ್ರತಿಯೊಬ್ಬರು ನನ್ನನ್ನು ಪ್ರೀತಿಸಬೇಕು ಅಂತೇನಿಲ್ಲ. ನನ್ನ ಬಗ್ಗೆ ನಿಮಗೆ ಸಹಮತ ಇಲ್ಲ ಎಂದಮಾತ್ರಕ್ಕೆ ನೀವು ನೆಗೆಟಿವಿಟಿ ಹಬ್ಬಿಸಬಹುದು ಅಂತ ಅರ್ಥವಲ್ಲ “ಎಂದು ಬರೆದಿದ್ದಾರೆ.

ಇದನ್ನೂ ಓದಿ : Nick Jonas: ದೇಸಿಗರ್ಲ್ ಪ್ರಿಯಾಂಕಾ ಪತಿ ನಿಕ್ ಜೋನಸ್ ಹಳೆ ಲವ್ ಸ್ಟೋರಿಗೆ ಮರುಜೀವ; ಬ್ರೇಕಪ್ ಬಗ್ಗೆ ಮೌನಮುರಿದ ಮಾಡೆಲ್

ನಿಮ್ಮೆಲ್ಲರನ್ನು ರಂಜಿಸಲು ನಾನು ಸಾಕಷ್ಟು ಶ್ರಮ ಪಡುತ್ತಿದ್ದೇನೆ. ಆ ಕೆಲಸದ ಬಗ್ಗೆ ನಾನು ಹೆಚ್ಚು ಯೋಚಿಸುತ್ತೇನೆ . ನಾನು ಮತ್ತು ನೀವು ಇಬ್ಬರು ಹೆಮ್ಮೆ ಪಡುವಂತಹ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇನೆ. ನಾನು ಹೇಳಿಲ್ಲದೇ ಇರುವ ವಿಚಾರಕ್ಕೆ ನನ್ನನ್ನು ಟ್ರೋಲ್‌ ಮಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿ ” ಎಂದು ರಶ್ಮಿಕಾ ಮಂದಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Veteran Actor Lohitashwa Passed Away : ಹಿರಿಯ ನಟ ಲೋಹಿತಾಶ್ವ ವಿಧಿವಶ

ಸಂದರ್ಶನಗಳಲ್ಲಿ ನಾನು ಹೇಳಿದ್ದನ್ನು ನನ್ನ ವಿರುದ್ದವೇ ತಿರುಗಿಸಲಾಗುತ್ತಿದೆ . ನನಗೆ ಮತ್ತು ನನ್ನ ಸಂಬಂಧಗಳಿಗೆ ಹಾನಿ ಅಗುವಂತಹ ತಪ್ಪು ಕಥೆಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹಬ್ಬಿಸಲಾಗಿದೆ .ಒಳ್ಳೆಯ ಟೀಕೆಗಳನ್ನು ನಾನು ಸ್ವಾಗತಿಸುತ್ತೇನೆ . ಅದರಿಂದ ನನ್ನ ಬೆಳವಣಿಗೆ ಸಾಧ್ಯ . ಆದರೆ ನೆಗೆಟಿವಿಟಿ ಮತ್ತು ದ್ವೇಷದಿಂದ ಏನು ಸಾಧ್ಯ ” ಎಂದು ರಶ್ಮಿಕಾ ಮಂದಣ್ಣ ಪ್ರಶ್ನಿಸಿದ್ದಾರೆ .

ಇದನ್ನೂ ಓದಿ : Gajarama : ‘ಗಜರಾಮ’ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯ – ಸುನೀಲ್ ಕುಮಾರ್ ವಿ ಎ ನಿರ್ದೇಶನದ ಚೊಚ್ಚಲ ಸಿನಿಮಾ

ಈಗ ರಶ್ಮಿಕಾ ಮಂದಣ್ಣ ಬರೆದ ಈ ಪತ್ರ ವೈರಲ್‌ ಆಗುತ್ತಿದ್ದು , ದುಲ್ಕರ್‌ ಸಲ್ಮಾನ್‌ , ತಾನ್ಯಾ ಹೋಪ್‌ ಸೇರಿದಂತೆ ಮುಂತಾದ ಸೆಲೆಬ್ರಿಟಿಗಳು ರಶ್ಮಿಕಾ ಬರೆದ ಪತ್ರಕ್ಕೆ ಕಮೆಂಟ್‌ ಮಾಡುವುದರ ಮೂಲಕ ರಶ್ಮೀಕಾಗೆ ಬೆಂಬಲ ನೀಡಿದ್ದಾರೆ .

Rashmika Mandanna on Instagram: “Hi so.. A couple of things have been troubling me these last few days or weeks or months or maybe even years now and I think it’s time I…”

https://www.instagram.com/p/CktPLqGp_1m/?utm_source=ig_embed&ig_rid=292ef755-3f8e-4e81-84de-cd013fe1f9ff

(Rashmika Mandanna) Rashmika Mandanna is well known to everyone. Rashmika Mandanna is famous for being trolled for some reason. No matter how good movies Rashmika Mandanna has done, no matter how high she has grown, people continue to hate her instead of patting her on the back. Rashmika Mandanna has written an open letter about her trolls and haters and has given details about those who have troubled her and hurt her heart.

Comments are closed.