ಬೆಂಗಳೂರು : namma metro new token : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ನಿಂದ ತಪ್ಪಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿರುತ್ತದೆ. ಹೀಗಾಗಿ ಅನೇಕರು ಬಿಎಂಟಿಸಿ ಹಾಗೂ ತಮ್ಮ ಸ್ವಂತ ವಾಹನಗಳಿಗೆ ಬೈಬೈ ಹೇಳಿ ಮೆಟ್ರೋವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮೆಟ್ರೋ ಸಂಚಾರದ ವೇಳೆ ಯಾವುದೇ ಟ್ರಾಫಿಕ್ ಕಿರಿಕಿರಿ ಇಲ್ಲದ ಕಾರಣ ಅಂದುಕೊಂಡ ಸ್ಥಳಕ್ಕೆ ಅತ್ಯಂತ ವೇಗವಾಗಿ ತಲುಪಬಹುದಾಗಿದೆ. ಮೆಟ್ರೋದಿಂದ ಇಳಿದ ತಕ್ಷಣ ಅನೇಕರು ಎಸ್ಕಲೇಟರ್ಗಳನ್ನು ಹತ್ತಿದರೆ ಇನ್ನೂ ಕೆಲವರು ಮೆಟ್ಟಿಲಿನ ಸಹಾಯ ಪಡೆದುಕೊಳ್ತಾರೆ. ಮೆಟ್ರೋದಲ್ಲಿ ಹಿರಿಯರು , ಅಂಗ ವಿಕಲರು, ಗರ್ಭಿಣಿಯರಿಗೆಂದೇ ಲಿಫ್ಟ್ ಸೌಕರ್ಯ ಇಡಲಾಗಿದೆ. ಆದರೆ ಮೆಟ್ಟಿಲು ಹತ್ತಿಳಿಯುವ ಕಷ್ಟ ತಪ್ಪಿಸಿಕೊಳ್ಳಲು ಸಾಮಾನ್ಯರೂ ಸಹ ಲಿಫ್ಟ್ಏರುತ್ತಾರೆ.
ಸಾಮಾನ್ಯರು ಲಿಫ್ಟ್ ಏರುತ್ತಿರೋದ್ರಿಂದ ಯಾರಿಗೆ ನಿಜವಾಗಿಯೂ ಲಿಫ್ಟ್ನ ಅವಶ್ಯಕತೆಯಿತ್ತೋ ಅವರು ಮೆಟ್ಟಿಲುಗಳಲ್ಲಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಿರಿಯರು, ಅಂಗವಿಕಲರು ಎಸ್ಕ್ಲೇಟರ್ ಬಳಸಲು ಸಾಧ್ಯವಾಗದೇ ಇರೋದ್ರಿಂದ ಬಹಳ ಸಮಯಗಳ ಕಾಲ ಸರದಿ ಸಾಲಿನಲ್ಲಿ ನಿಂತುಕೊಳ್ತಾರೆ. ಈ ಎಲ್ಲಾ ಸಮಸ್ಯೆಗಳು ಬಿಎಂಆರ್ಸಿಎಲ್ ಗಮನಕ್ಕೆ ಬಂದಿದ್ದು ಸೂಕ್ತ ಕ್ರಮವೊಂದನ್ನು ಕೈಗೊಳ್ಳಲಾಗಿದೆ. ಲಿಫ್ಟ್ ಅನಾನುಕೂಲವನ್ನು ತಪ್ಪಿಸುವ ಸಲುವಾಗಿ ಟೋಕನ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಲಿಫ್ಟ್ನ್ನು ಕೇವಲ ಗರ್ಭಿಣಿಯರು, ವೃದ್ಧರು, ಅಂಗವಿಕಲರು ಮಾತ್ರ ಬಳಸಬೇಕೆಂದು ಮೆಟ್ರೋ ನಿಲ್ದಾಣಗಳಲ್ಲಿ ಟೋಕನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪ್ರಾಯೋಗಿಕ ಹಂತದಲ್ಲಿ ಐದು ಮೆಟ್ರೋ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ. ಕಬ್ಬನ್‌ಪಾರ್ಕ್, ವಿಧಾನಸೌಧ, ಸರ್ ಎಂ. ವಿಶ್ವೇಶ್ವರಯ್ಯ, ಕೆಎಸ್ ಆರ್ ರೈಲು ನಿಲ್ದಾಣ ಮತ್ತು ಕೆಂಪೇಗೌಡ ಮೆಟ್ರೊ ನಿಲ್ದಾಣಗಳಲ್ಲಿ ಲಿಫ್ಟ್ ಹತ್ತಲು ಟೋಕನ್ ನೀಡಲಾಗ್ತಿದೆ. ಮೆಟ್ಟಿಲು ಹತ್ತಲು ಕಷ್ಟವೆನಿಸುವವರಿಗೆ ಮಾತ್ರ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಟೋಕನ್ಗಳನ್ನು ನೀಡುತ್ತದೆ. ವೃದ್ಧರು, ಗರ್ಭಿಣಿಯರು, ಅಂಗವಿಕಲರು ಟೋಕನ್ ಪಡೆಯಬೇಕು ಎಂದೇನಿಲ್ಲ. ಸಾಮಾನ್ಯ ನಾಗರಿಕರಿಗೂ ಲಿಫ್ಟ್ ಅನಿವಾರ್ಯ ಎಂಬ ಪರಿಸ್ಥಿತಿ ಇದ್ದಲ್ಲಿ ಮಾತ್ರ ಟೋಕನ್ಗಳನ್ನು ಪಡೆದು ಲಿಫ್ಟ್ ಸೌಕರ್ಯ ಪಡೆದುಕೊಳ್ಳಬಹುದಾಗಿದೆ.
ಇದನ್ನು ಓದಿ : PV Sindhu Commonwealth Games : ಭಾರತದ ಧ್ವಜಧಾರಿಯಾಗಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧೂ
bengaluru bmrcl namma metro new token for metro lift usage