praveen nettaru murder :ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ : 7 ಮಂದಿ ಎಸ್​ಡಿಪಿಐ ಕಾರ್ಯಕರ್ತರು ವಶಕ್ಕೆ

ಮಂಗಳೂರು : praveen nettaru murder : ಕರಾವಳಿ ಜಿಲ್ಲೆಯಲ್ಲಿ ಹರಿದ ನೆತ್ತರು ಇಡಿ ಕರ್ನಾಟಕವನ್ನೇ ದುಃಖದ ಸಾಗರದಲ್ಲಿ ಮುಳುಗಿಸಿದೆ. ಧರ್ಮದ ಹೆಸರಿನಲ್ಲಿ ಈ ರೀತಿಯ ದುಷ್ಕೃತ್ಯಗಳನ್ನು ಎಸೆಗಿದರೆ ಜನ ಸಾಮಾನ್ಯರು ಯಾವ ಧೈರ್ಯದಲ್ಲಿ ಬದುಕುವುದು ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿದೆ. ಕನಸಿನ ಮನೆ ನಿರ್ಮಿಸಬೇಕೆಂದುಕೊಂಡಿದ್ದ ಜಾಗದಲ್ಲೇ ಪ್ರವೀಣ್​ ಅಂತ್ಯಕ್ರಿಯೆ ನೆರವೇರಿದೆ. ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಹಿಂದೂ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

ಇಂದು ಜನೋತ್ಸವ ಆಚರಿಸಬೇಕಿದ್ದ ಬೊಮ್ಮಾಯಿ ನೇತೃತ್ವದ ಸರ್ಕಾರದ ಹಿಂದೂ ಕಾರ್ಯಕರ್ತ ಹಾಗೂ ಭಜರಂಗದಳ ನಾಯಕ ಪ್ರವೀಣ್​ ನೆಟ್ಟಾರು ಸಾವು ತೀವ್ರ ಮುಜುಗರವನ್ನುಂಟು ಮಾಡಿದೆ. ಈ ಪ್ರಕರಣದಲ್ಲಿ ರಾಜ್ಯ ಗೃಹ ಇಲಾಖೆ ಹೈ ಅಲರ್ಟ್ ಆಗಿದ್ದು ಪೊಲೀಸರ ಐದು ತಂಡಗಳನ್ನು ರಚಿಸಿ ತನಿಖೆಯನ್ನು ನಡೆಸಲಾಗುತ್ತಿದೆ. ಈ ಎಲ್ಲದರ ನಡುವೆ ಈ ಪ್ರಕರಣದಲ್ಲಿ ಸದ್ಯ ಏಳು ಮಂದಿ ಎಸ್​ಡಿಪಿಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ಪೊಲೀಸರು 10 ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಕರ್ನಾಟಕದ ಪೊಲೀಸ್​ ಇಲಾಖೆ ಪ್ರವೀಣ್​ ನೆಟ್ಟಾರು ಕೊಲೆ ತನಿಖೆಯನ್ನು ನಡೆಸಲು ಕೇರಳಕ್ಕೂ ತೆರಳಿದೆ. ಆರೋಪಿಗಳು ಕೊಲೆ ಮಾಡಿ ಕೇರಳಕ್ಕೆ ತೆರಳಿರುವ ಗುಮಾನಿ ಕೂಡ ಇರುವ ಹಿನ್ನೆಲೆಯಲ್ಲಿ ಪೊಲೀಸರು ನೆರೆ ರಾಜ್ಯದಲ್ಲಿಯೂ ತನಿಖೆ ಮುಂದುವರಿಸಿದ್ದಾರೆ.

ಹಿಂದೂ ಯುವಕನ ಕೊಲೆಯಲ್ಲಿ ಪಿಎಫ್​ಐ ಹಾಗೂ ಎಸ್​ಡಿಪಿಐ ಕಾರ್ಯಕರ್ತರ ಕೈವಾಡವಿದೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ತಡರಾತ್ರಿ ಎಸ್​ಡಿಪಿಐ ಕಾರ್ಯಕರ್ತರ ಮನೆಗೆ ನುಗ್ಗಿದ ಪೊಲೀಸರು ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಈ ಕ್ರಮವನ್ನು ವಿರೋಧಿಸಿರುವ ಎಸ್​ಡಿಪಿಐ ಕಾರ್ಯಕರ್ತರು ಪೊಲೀಸರು ಸುಖಾ ಸುಮ್ಮನೇ ಅಮಾಯಕರ ಮೇಲೆ ಅಸ್ತ್ರ ಪ್ರಯೋಗಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಇದನ್ನು ಓದಿ : Janotsava Progarame Canceled : ಪ್ರವೀಣ್‌ ಹತ್ಯೆ ಬೆನ್ನಲ್ಲೇ ಕಾರ್ಯಕರ್ತರ ಆಕ್ರೋಶ : ಬೆದರಿದ ಬಿಜೆಪಿ ಸರಕಾರ, ಜನೋತ್ಸವ ಕಾರ್ಯಕ್ರಮ ರದ್ದು

ಇದನ್ನೂ ಓದಿ : Praveen Nettaru murder : ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದಲ್ಲಿ 10 ಮಂದಿ ಶಂಕಿತರು ವಶಕ್ಕೆ

praveen nettaru murder 7 sdpi activists taken into police custody

Comments are closed.