ಬೆಂಗಳೂರು : ಸಿಲಿಕಾನ್ ಸಿಟಿ ಮಂದಿಗೆ ಮೆಟ್ರೋ ಸೇವೆ(Bengaluru Metro) ಅನ್ನೋದು ಒಂದು ರೀತಿ ಲೈಫ್ ಸೇವರ್ ಇದ್ದಂತೆ. ಟ್ರಾಫಿಕ್ ಜಂಜಾಟಗಳಿಂದ ಮುಕ್ತಿ ಸಿಗಬೇಕು ಅಂದರೆ ರಾಜಧಾನಿ ಮಂದಿ ಮೆಟ್ರೋ ಸರ್ವೀಸ್ಗೆ ಜೈ ಅಂತಾರೆ. ಬಿಎಂಆರ್ಸಿಎಲ್ ಕೂಡ ನಗರದಾದ್ಯಂತ ತನ್ನ ಸೇವೆಯನ್ನು ವಿಸ್ತರಿಸುವ ಸಲುವಾಗಿ ಕಾಮಗಾರಿಗಳನ್ನು ನಡೆಸುತ್ತಲೇ ಇದೆ. ಪ್ರಯಾಣಿಕರ ಅನುಕೂಲಕ್ಕೆ ಒಂದಿಲ್ಲೊಂದು ಸೌಲಭ್ಯಗಳನ್ನು ನೀಡುತ್ತಲೇ ಬಂದಿರುವ ಮೆಟ್ರೋ ಇದೀಗ ತನ್ನ ಸೇವಾ ಅವಧಿಯನ್ನು ಇನ್ನೂ ಹೆಚ್ಚಿಸಲು ನಿರ್ಧರಿಸಿದೆ.
ಈ ಸಂಬಂಧ ಶನಿವಾರ ಮಾಹಿತಿ ನೀಡಿರುವ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ಬೆಳಗ್ಗೆ ಮೆಟ್ರೋ ಸೇವೆಯು ಒಂದು ಗಂಟೆ ಮುಂಚಿತವಾಗಿ ಪ್ರಯಾಣಿಕರಿಗೆ ಸಿಗಲಿದೆ ಎಂದು ಹೇಳಿದೆ.
ಸೋಮವಾರದಿಂದ ಬೆಂಗಳೂರು ನಮ್ಮ ಮೆಟ್ರೋ ಸೇವೆಯು ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಲಭ್ಯವಿರಲಿದೆ ಎಂದು ಬಿಎಂಆರ್ಸಿಎಲ್ ಹೇಳಿಕೆ ನೀಡಿದೆ. ಇಲ್ಲಿಯವರೆಗೆ ಮೆಟ್ರೋ ಸೇವೆಯು ಬೆಳಗ್ಗೆ ಆರು ಗಂಟೆಯಿಂದ ಆರಂಭವಾಗುತ್ತಿತ್ತು.
ಕೋವಿಡ್ಗೂ ಮುಂಚೆ ಬಿಎಂಆರ್ಸಿಎಲ್ ನಮ್ಮ ಮೆಟ್ರೋ ಬೆಳಗ್ಗೆ 5 ಗಂಟೆಯಿಂದಲೇ ಪ್ರಯಾಣಿಕರಿಗೆ ಸೇವೆ ನೀಡುತ್ತಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದ ಬಳಿಕ ವಿವಿಧ ಬದಲಾವಣೆಗಳನ್ನು ತರಲಾಗಿದ್ದು ಮೆಟ್ರೋ ಸೇವೆಯು ಪ್ರಸ್ತುತ 6 ಗಂಟೆಯಿಂದ ಆರಂಭವಾಗುತ್ತಿತ್ತು. ಆದರೆ ಸೋಮವಾರದಿಂದ ಪುನಃ 5 ಗಂಟೆಯಿಂದಲೇ ಮೆಟ್ರೋ ಸರ್ವೀಸ್ ಆರಂಭವಾಗಲಿದೆ ಎಂದು ಬಿಎಂಆರ್ಸಿಎಲ್ ಅಧಿಕೃತ ಹೇಳಿಕೆ ನೀಡಿದೆ. ಅಂದರೆ ನಾಳೆ ಬೆಳಗ್ಗೆ ಐದು ಗಂಟೆಯಿಂದ ಟರ್ಮಿನಲ್ ನಿಲ್ದಾಣಗಳಾದ ಕೆಂಗೇರಿ, ಸಿಲ್ಕ್ ಇನ್ಸ್ಟಿಟ್ಯೂಸ್, ನಾಗಸಂದ್ರ ಹಾಗೂ ಬೈಯಪ್ಪನಹಳ್ಳಿಗಳಲ್ಲಿ ಮೆಟ್ರೋವನ್ನು ನೀವು ಮುಂಜಾನೆ ಐದು ಗಂಟೆಗೇ ಏರಬಹುದು. ಈ ನಿಲ್ದಾಣಗಳಲ್ಲಿ ಕೊನೆಯ ರೈಲು ರಾತ್ರಿ 11 ಗಂಟೆಗೆ ಹೊರಡಲಿದೆ.
ರವಿವಾರ ಮೆಟ್ರೋ ಸೇವೆಯು ಬೆಳಗ್ಗೆ 7 ಗಂಟೆಯಿಂದ ಲಭ್ಯವಿರಲಿದೆ. ಅಲ್ಲದೇ ನಾಡಪ್ರಭು ಕೆಂಪೇಗೌಡ ನಿಲ್ದಾಣ ಹಾಗೂ ಮೆಜೆಸ್ಟಿಕ್ನಲ್ಲಿ ಕೊನೆಯ ರೈಲು ರಾತ್ರಿ 11:30ಕ್ಕೆ ಹೊರಡಲಿದೆ ಎಂದೂ ಬಿಎಂಆರ್ಸಿಎಲ್ ಇದೇ ವೇಳೆ ಮಾಹಿತಿ ನೀಡಿದೆ.
Bengaluru Metro services to begin at 5 am from December 20
ಇದನ್ನು ಓದಿ :Omicron Mangalore : ದಕ್ಷಿಣ ಕನ್ನಡದಲ್ಲಿ ಓಮಿಕ್ರಾನ್ ಸ್ಪೋಟ : ಒಂದೇ ದಿನ 5 ಕಾಲೇಜು ವಿದ್ಯಾರ್ಥಿಗಳಿಗೆ ಓಮಿಕ್ರಾನ್ ದೃಢ
ಇದನ್ನೂ ಓದಿ: 100 Cantonment Zone: 15 ದಿನ 100 ಕಂಟೋನ್ಮೆಂಟ್ ಝೋನ್ : ಸದ್ದಿಲ್ಲದೇ ಹೆಚ್ಚುತ್ತಿದೆ ಕೊರೋನಾ