Omicron third wave : ‘ಫೆಬ್ರವರಿಯಿಂದ ದೇಶದಲ್ಲಿ ಕೊರೊನಾ ಮೂರನೇ ಅಲೆ’ : ಕೋವಿಡ್​ ಸೂಪರ್​ಮಾಡೆಲ್​ ಸಮಿತಿ

ಕೊರೊನಾ ಓಮಿಕ್ರಾನ್​ ರೂಪಾಂತರಿ(Omicron third wave) ವಿಶ್ವಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಲು ಈಗಾಗಲೇ ಆರಂಭಿಸಿದ್ದು ಆತಂಕ ಮನೆ ಮಾಡಿದೆ. ದೇಶದಲ್ಲಿ ಓಮಿಕ್ರಾನ್​ ಅಪಾಯದ ಬಗ್ಗೆ ಮುನ್ಸೂಚನೆ ನೀಡಿದ ಕೋವಿಡ್​ 19 ಸೂಪರ್ ಮಾಡೆಲ್​ ಸಮಿತಿ ಸದಸ್ಯರು ಕೊರೊನಾ ಡೆಲ್ಟಾ ರೂಪಾಂತರಿಯ ಜಾಗಕ್ಕೆ ಸಂಪೂರ್ಣವಾಗಿ ಓಮಿಕ್ರಾನ್​ ಬಂದ ಬಳಿಕ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಎಂದು ಹೇಳಿದ್ದಾರೆ. ಅಲ್ಲದೆ ಮುಂದಿನ ವರ್ಷದ ಆರಂಭದಲ್ಲಿಯೇ ಕೋವಿಡ್​ ಮೂರನೇ ಅಲೆ ಬರುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.


ರಾಷ್ಟ್ರೀಯ ಕೋವಿಡ್​ 19 ಸೂಪರ್​ ಮಾಡೆಲ್​ ಸಮಿತಿ ಮುಖ್ಯಸ್ಥರಾಗಿರುವ ವಿದ್ಯಾಸಾಗರ್​ , ದೇಶದಲ್ಲಿ ಮೂರನೇ ಅಲೆಯು ಕೋವಿಡ್​ ಒಮಿಕ್ರಾನ್​ ರೂಪಾಂತರಿಯನ್ನು ಹೊಂದಿರುತ್ತದೆ. ಆದರೆ ಇದು ಎರಡನೇ ಅಲೆಗಿಂತ ಸೌಮ್ಯವಾಗಿ ಇರಲಿದೆ ಎಂದು ಹೇಳಿದ್ದಾರೆ.


ದೇಶದಲ್ಲಿ ಕೊರೊನಾ ಮೂರನೇ ಅಲೆಯು ಮುಂದಿನ ವರ್ಷದ ಆರಂಭದಲ್ಲಿಯೇ ಅಪ್ಪಳಿಸುವ ನಿರೀಕ್ಷೆ ಇದೆ. ಆದರೆ ಇದು ಎರಡನೇ ಅಲೆಗಿಂತ ಸೌಮ್ಯವಾಗಿ ಇರಲಿದೆ. ದೇಶದ ಜನತೆಯಲ್ಲಿ ಇದೀಗ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಇರುವುದರಿಂದ ಕೋವಿಡ್​ ಮೂರನೇ ಅಲೆಯು ಅಷ್ಟೊಂದು ಸಮಸ್ಯೆಯನ್ನು ತಾರಲಾರದು. ಖಂಡಿತವಾಗಿಯೂ ದೇಶಕ್ಕೆ ಮೂರನೆ ಅಲೆ ಬಂದೇ ಬರುತ್ತದೆ. ಪ್ರಸ್ತುತ ದೇಶದಲ್ಲಿ ಪ್ರತಿ ದಿನಕ್ಕೆ ಸರಿ ಸುಮಾರು 7500 ಕೇಸುಗಳು ವರದಿಯಾಗುತ್ತಿದೆ. ಆದರೆ ಯಾವಾಗ ಡೆಲ್ಟಾ ರೂಪಾಂತರಿಯ ಬದಲು ಸಂಪೂರ್ಣ ಓಮಿಕ್ರಾನ್​ ರೂಪಾಂತರಿಯು ಬರುತ್ತದೆಯೋ ಆದ ದೈನಂದಿನ ಕೊರೊನಾ ಕೇಸ್​ಗಳಲ್ಲಿ ಏರಿಕೆ ಕಂಡು ಬರಲಿದೆ ಎಂದು ವಿದ್ಯಾಸಾಗರ್​ ಹೇಳಿದ್ದಾರೆ.


ಹೈದರಾಬಾದ್​​ ಐಐಟಿಯಲ್ಲಿ ಉಪನ್ಯಾಸಕ ಕೂಡ ಆಗಿರುವ ವಿದ್ಯಾಸಾಗರ್​ ಎರಡನೆ ಅಲೆಯಲ್ಲಿ ವರದಿಯಾದ ಕೋವಿಡ್​ ಕೇಸ್​ಗಳಿಗಿಂತ ಹೆಚ್ಚು ಕೇಸ್​ಗಳನ್ನ ನಾವು ಮೂರನೇ ಅಲೆಯಲ್ಲಿ ಕಾಣಲಿದ್ದೇವೆ ಎಂದು ಹೇಳಿದ್ದಾರೆ.


ನಾವು ಎರಡನೆ ಅಲೆಯಲ್ಲಿ ವರದಿ ಮಾಡಿದ ಕೋವಿಡ್​ ಕೇಸ್​ಗಳಿಗಿಂತ ಹೆಚ್ಚು ಸೋಂಕಿತರನ್ನು ಮೂರನೇ ಅಲೆಯ ಸಂದರ್ಭದಲ್ಲಿ ವರದಿ ಮಾಡಲಿದ್ದೇವೆ. ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರನ್ನು ಹೊರತುಪಡಿಸಿ ಮತ್ಯಾರಿಗೂ ಲಸಿಕೆ ಕೂಡ ಆಗಿರಲಿಲ್ಲ. ಹೀಗಾಗಿ ದೇಶದ ಬಹುತೇಕ ಜನತೆಯು ಕೊರೊನಾ ಎರಡನೆ ಅಲೆಯ ಅಪಾಯಕ್ಕೆ ಸಿಲುಕಿಕೊಂಡಿದೆ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ದೇಶದ ಬಹುತೇಕ ಜನತೆ ಕೊರೊನಾ ಲಸಿಕೆಯನ್ನು ಪಡೆದಿದ್ದಾರೆ. ಅಲ್ಲದೇ ಬಹುತೇಕರಿಗೆ ಡೆಲ್ಟಾ ರೂಪಾಂತರಿ ಸೋಂಕು ತಗುಲಿ ಗುಣಮುಖರಾದ ಹಿನ್ನೆಲೆಯಲ್ಲಿ ಅವರಲ್ಲಿ ಆ್ಯಂಟಿಬಾಡಿ ಅಭಿವೃದ್ಧಿಗೊಂಡಿದೆ. ಹೀಗಾಗಿ ದೇಶದಲ್ಲಿ ಕೊರೊನಾ ಮೂರನೇ ಅಲೆಯು ಅಷ್ಟೊಂದು ಗಂಭೀರ ಪ್ರಮಾಣದ ಅಪಾಯ ಉಂಟು ಮಾಡೋದಿಲ್ಲ ಎಂದು ಹೇಳಿದ್ದಾರೆ.

Omicron driven third wave likely to hit India in Feb: Covid Supermodel panel

ಇದನ್ನು ಓದಿ: Google search Engine : ಗೂಗಲ್ ಇಲ್ಲದಿರುವ ದೇಶಗಳೂ ಇವೆ !

ಇದನ್ನೂ ಓದಿ : Omicron Mangalore : ದಕ್ಷಿಣ ಕನ್ನಡದಲ್ಲಿ ಓಮಿಕ್ರಾನ್‌ ಸ್ಪೋಟ : ಒಂದೇ ದಿನ 5 ಕಾಲೇಜು ವಿದ್ಯಾರ್ಥಿಗಳಿಗೆ ಓಮಿಕ್ರಾನ್‌ ದೃಢ

Comments are closed.