BMTC bus driver heart attack : ಬೆಂಗಳೂರು : ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಸರ್ವೇ ಸಾಮಾನ್ಯವಾಗುತ್ತಿದೆ. ಇದೀಗ ಚಲಿಸುತ್ತಿದ್ದ ಬಸ್ಸಿನಲ್ಲಿಯೇ ಚಾಲಕನಿಗೆ ಹೃದಯಾಘಾತ ಉಂಟಾಗಿದೆ. ಆದರೆ ಸಂಚಾರಿ ಪೊಲೀಸರ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 45 ಮಂದಿ ಪ್ರಯಾಣಿಕರ ಜೀವ ಉಳಿದಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ? ಈ ಸ್ಟೋರಿ ಓದಿ.

ಬೆಂಗಳೂರಿನ ಶಾಂತಿನಗರದ ಡಬಲ್ ರೋಡ್‌ಬಳಿಯಲ್ಲಿ ಬಿಎಂಟಿಸಿ ಬಸ್ ಸಂಚರಿಸುತ್ತಿತ್ತು.ಆದರೆ ಬಸ್ ಚಲಿಸುತ್ತಿದ್ದ ಚಾಲಕ ದಿನೇಶ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ನಂತರ ಹೃದಯಾಘಾತ ಸಂಭವಿಸಿದೆ. ಹೃದಯಾಘಾತ ಉಂಟಾಗಿದ್ದರೂ ಕೂಡ ಚಾಲಕ ದಿನೇಶ್ ಪ್ರಯಾಣಿಕರ ಜೀವ ಉಳಿಸಲು ಮುಂದಾಗಿದ್ದ. ಚಾಲಕ ಬಸ್ಸನ್ನು ನಿಧಾನಕ್ಕೆ ಚಲಿಸಿದ್ದಾನೆ.
ಹಲಸೂರು ಸಂಚಾರಿ ಠಾಣೆಯ ಪಿಎಸ್‌ಐ ರಘು ಅವರು ಬಸ್ ನಿಧಾನಕ್ಕೆ ಸಂಚರಿಸುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಬಸ್ ಅನ್ನು ನಿಲ್ಲಿಸೋದಕ್ಕೆ ಮುಂದಾದ್ರು. ಪೊಲೀಸರ ಸಮಯಪ್ರಜ್ಞೆಯಿಂದಾಗಿ ಸಂಭವಿಸುತ್ತಿದ್ದ ಬಾರೀ ದುರಂತವೊಂದು ತಪ್ಪಿದಂತಾಗಿದೆ.

ಹೃದಯಾಘಾತದ ಲಕ್ಷಣಗಳೇನು ?
ಯಾವುದೇ ವ್ಯಕ್ತಿಗೆ ಹೃದಯಾಘಾತ ಸಂಭವಿಸುವ ಮೊದಲೇ ಸೂಚನೆ ಸಿಗುತ್ತದೆ. ಹೃದಯಾಘಾತವನ್ನು ಪರಿಧಮನಿಯ ಥ್ರಂಬೋಸಿಸ್ ಎಂದು ಕರೆಯುತ್ತಾರೆ. ಹೃದಯದ ರಕ್ತನಾಳಗಳನ್ನು ಹೆಪ್ಪುಗಟ್ಟುವಿಕೆಯಿಂದ ರಕ್ತದ ಹರಿವುದು ತಡೆಯುತ್ತದೆ. ಇದರಿಂದ ಹೃದಯದ ಸ್ನಾಯುಗಳಿಗೆ ಆಮ್ಲಜನಕದ ಸಂಚಾರವಾಗುವುದಿಲ್ಲ. ಇದರಿಂದಾಗಿ ಹೃದಯಘಾತ ಉಂಟಾಗುತ್ತದೆ.
ಇದನ್ನೂ ಓದಿ : Buttermilk Side Effects : ಅತಿಯಾದ ಮಜ್ಜಿಗೆ ಆರೋಗ್ಯಕ್ಕೆ ಉತ್ತಮವೇ ? ಮಜ್ಜಿಗೆ ಕುಡಿಯೋ ಅಭ್ಯಾಸವಿದ್ರೆ ಈ ಸ್ಟೋರಿ ಓದಿ
ಹೃದಯಾಘಾತ ಸಂಭವಿಸುವ ಮೊದಲೇ ಕೆಲವೊಂದು ಲಕ್ಷಣಗಳು ಗೋಚರಿಸುತ್ತದೆ. ವಾಕರಿಕೆ, ಬೆವರುವುದು, ತಣ್ಣನೆಯ ಬೆವರು, ಉಸಿರಾಟದ ತೊಂದರೆ, ಹಠಾತ್ ಎದೆನೋವು, ಎಡಗೈ ಭಾಗದಲ್ಲಿ ನೋವು, ಎದೆಯ ಬಿಗಿ ಹಿಡಿತದಂತಹ ಲಕ್ಷಣಗಳು ಕಂಡು ಬರುತ್ತದೆ. ಆದರೆ ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳಲ್ಲಿ ಕೆಲವೊಂದು ಬದಲಾವಣೆಗಳಿರುತ್ತದೆ.
ಇದನ್ನೂ ಓದಿ : ಕಣ್ಣಿನ ಆರೋಗ್ಯದ ದೃಷ್ಟಿಯಿಂದ ನಿಮ್ಮ ಮೊಬೈಲ್ ಸ್ಕ್ರೀನ್ ಯಾವ ರೀತಿ ಇರಬೇಕು..?
ಮಹಿಳೆಯರು ಹೃದಯಾಘಾತಕ್ಕೆ ಒಳಗಾಗುವ ಮೊದಲು ಆತಂಕ, ಎದೆನೋವು, ಲಘು ತಲೆ ತಿರುಗುವಿಕೆ, ಎದೆಯಿಂದ ದವಡೆ, ತೋಳಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೇ ಎದೆಯಿಂದ ಹುಟ್ಟುವ ಹೊಟ್ಟೆ ನೋವಿ, ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣಗಳು ನಿಮಗೆ ಕಾಣಿಸಿಕೊಂಡ್ರೆ ಕೂಡಲೇ ವೈದ್ಯರನ್ನು ಸಂಪರ್ಕ ಮಾಡುವುದು ತೀರಾ ಒಳಿತು. ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡ ನಂತರವೂ ನಿರ್ಲಕ್ಷ್ಯ ವಹಿಸುವುದರಿಂದ ಸಾವು ಸಂಭವಿಸುವ ಸಾಧ್ಯತೆಯಿರುತ್ತದೆ.
ಇದನ್ನೂ ಓದಿ : ಸ್ನಾನ ಮಾಡಿದ ತಕ್ಷಣವೇ ಟವೆಲ್ ಸುತ್ತಿಕೊಳ್ಳಬೇಡಿ ! ಈ ಅಭ್ಯಾಸ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ
Bengaluru News BMTC bus driver heart attack. 45 passengers in the bus are safe