ಕಣ್ಣಿನ ಆರೋಗ್ಯದ ದೃಷ್ಟಿಯಿಂದ ನಿಮ್ಮ ಮೊಬೈಲ್​ ಸ್ಕ್ರೀನ್​ ಯಾವ ರೀತಿ ಇರಬೇಕು..?

Smartphone tips : ಮೊಬೈಲ್​ ಒಂದು ಮನರಂಜನೆಯ ವಸ್ತುವಾಗಿ ಕಾರ್ಯನಿರ್ವಹಿಸುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಇದೇ ಸ್ಮಾರ್ಟ್​ಫೋನ್​ ನಿಮ್ಮ ಕಣ್ಣಿಗೆ ಉಂಟು ಮಾಡುವ ಅಪಾಯ ಕೂಡ ಅಷ್ಟಿಷ್ಟಲ್ಲ.

Smartphone tips : ಈಗಿನ ಟೆಕ್ನಾಲಜಿ ಜಮಾನದಲ್ಲಿ ಸ್ಮಾರ್ಟ್ ಫೋನ್​ ಬಳಕೆ ಮಾಡದೇ ಇರುವವರು ಯಾರೂ ಇಲ್ಲ. ಕೈಯಲ್ಲಿ ಕಾಸಿಲ್ಲದಿದ್ದರೂ ಮೊಬೈಲ್​ ಮಾತ್ರ ಇದ್ದೇ ಇರುತ್ತದೆ. ಅದರಲ್ಲೂ ಈಗಿನ ಕಾಲಘಟ್ಟದಲ್ಲಂತೂ ಸ್ಮಾರ್ಟ್​ಫೋನ್​ಗಳು ಇಲ್ಲದೇ ಬದುಕೋದು ಕೂಡ ಕಷ್ಟವೇ. ಆದರೆ ಈಗಿನ ಯಂಗ್​ ಜನರೇಷನ್​ ಅವರು ಅದರಲ್ಲೂ ಮುಖ್ಯವಾಗಿ ಪುಟಾಣಿ ಮಕ್ಕಳು ಮೊಬೈಲ್​ ಬಳಕೆ ಜಾಸ್ತಿ ಮಾಡುತ್ತಿದ್ದಾರೆ,

ಮೊಬೈಲ್​ ಒಂದು ಮನರಂಜನೆಯ ವಸ್ತುವಾಗಿ ಕಾರ್ಯನಿರ್ವಹಿಸುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಇದೇ ಸ್ಮಾರ್ಟ್​ಫೋನ್​ ನಿಮ್ಮ ಕಣ್ಣಿಗೆ ಉಂಟು ಮಾಡುವ ಅಪಾಯ ಕೂಡ ಅಷ್ಟಿಷ್ಟಲ್ಲ. ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಸ್ಮಾರ್ಟ್​ಫೋನ್​ ಬಳಕೆ ಕಡಿಮೆ ಮಾಡುವುದು ನಿಜಕ್ಕೂ ಒಂದು ಒಳ್ಳೆಯ ನಿರ್ಧಾರ ಅಂತಾ ಹೇಳಿದ್ರೆ ತಪ್ಪಾಗೋದಿಲ್ಲ.

Smartphone tips Here is the benefits of useing dark Mode on Smartphone
Image Credit to Original Source

ಆದರೆ ಅನೇಕರಿಗೆ ಮೊಬೈಲ್​ ಬಳಸದೇ ಬೇರೆ ವಿಧಿ ಇರೋದಿಲ್ಲ. ಇಂಥಹ ಸಂದರ್ಭಗಳಲ್ಲಿ ನೀವು ಸ್ಮಾರ್ಟ್ ಫೋನ್​ಗಳಲ್ಲಿ ನೀಡಲಾಗಿರುವ ಡಾರ್ಕ್​ ಮೋಡ್​ ಆಯ್ಕೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಕಣ್ಣುಗಳ ಸುರಕ್ಷತೆಯ ದೃಷ್ಟಿಯಿಂದಲೆ ಮೊಬೈಲ್​ ಕಂಪನಿಗಳು ಈ ಆಯ್ಕೆಯನ್ನು ಇಟ್ಟಿರುತ್ತವೆ . ಆದರೆ ಎಷ್ಟೋ ಜನರಿಗೆ ಈ ಆಯ್ಕೆ ಬಗ್ಗೆ ಮಾಹಿತಿಯೇ ಇರೋದಿಲ್ಲ.

ಇದನ್ನೂ ಓದಿ : ಕೇವಲ 35,000 ರೂ.ಗೆ ನಿಮ್ಮದಾಗಬಹುದು ಐಫೋನ್​ : ಈ ಚಾನ್ಸ್​ ಮಿಸ್​ ಮಾಡಿಕೊಳ್ಳಬೇಡಿ..!

ಸ್ಮಾರ್ಟ್​ಫೋನ್​ಗಳ ಸೆಟ್ಟಿಂಗ್​ ವಿಭಾಗದಲ್ಲಿ ನಿಮಗೆ ಲೈಟ್​ ಮೋಡ್​ ಹಾಗೂ ಡಾರ್ಕ್​ ಮೋಡ್ ಎಂಬ ಆಯ್ಕೆ ಇರುತ್ತದೆ. ಸಾಮಾನ್ಯವಾಗಿ ಮೊಬೈಲ್​ ಲೈಟ್​ ಮೋಡ್​ನ್ನು ಡಿಫಾಲ್ಟ್​ ಆಗಿ ಸೆಟ್ಟಿಂಗ್ಸ್​ ಮಾಡಿಕೊಂಡಿರುತ್ತದೆ. ಇಲ್ಲಿ ನೀವು ಡಾರ್ಕ್ ಮೋಡ್​ ಆಯ್ಕೆ ಮಾಡಿಕೊಂಡರೆ ಮೊಬೈಲ್​ ಡಿಸ್​ಪ್ಲೇ ಕಪ್ಪು ಬಣ್ಣವಾಗಿ ಬದಲಾಗುತ್ತದೆ. ಕಪ್ಪು ಬಣ್ಣವು ಕಣ್ಣಿಗೆ ಹೆಚ್ಚಿನ ಒತ್ತಡ ಕೊಡುವುದಿಲ್ಲ.

ಕೇವಲ ಇದೊಂದು ಲಾಭ ಮಾತ್ರವಲ್ಲ. ನೀವು ಡಾರ್ಕ್​ ಮೋಡ್​ ಬಳಕೆ ಮಾಡುವ ಮೂಲಕ ನಿಮ್ಮ ಬ್ಯಾಟರಿ ಸಾಮರ್ಥ್ಯವನ್ನೂ ಸಹ ಹೆಚ್ಚಿಸಿಕೊಳ್ಳ ಬಹುದಾಗಿದೆ. ಡಾರ್ಕ್​ ಮೋಡ್​ ಕಡಿಮೆ ಪ್ರಮಾಣದಲ್ಲಿ ಬ್ಯಾಟರಿಯನ್ನು ಬಳಕೆ ಮಾಡಿಕೊಳ್ಳುತ್ತದೆ. ಹೀಗಾಗಿ ನಿಮ್ಮ ಸ್ಮಾರ್ಟ್ಫೋನ್​ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರಲಿದೆ .

ಇದನ್ನೂ ಓದಿ : WhatsApp Alert : ತಪ್ಪಿಯೂ ಈ ಲಿಂಕ್‌ ಕ್ಲಿಕ್‌ ಮಾಡಬೇಡಿ ! 82% ಭಾರತೀಯರಿಗೆ ನಿತ್ಯವೂ ಬರ್ತಿದೆ 12 ನಕಲಿ ಸಂದೇಶ

ಅನೇಕರಿಗೆ ಸ್ಮಾರ್ಟ್​ ಫೋನ್​​ನಲ್ಲಿ ಹೆಚ್ಚು ಕಾಲ ಕಳೆದಂತೆಲ್ಲ ನಿದ್ರಾಹೀನತೆಯ ಸಮಸ್ಯೆ ಕಂಡು ಬರುತ್ತೆ. ಇಂಥಹ ಸಂದರ್ಭದಲ್ಲಿ ಡಾರ್ಕ್ ಮೋಡ್​ ಡಿಸ್​ಪ್ಲೇ ಬಳಕೆ ಮಾಡುವುದು ಉತ್ತಮ. ಇದು ನಿಮ್ಮ ಕಣ್ಣಿಗೆ ಹೆಚ್ಚಿನ ಒತ್ತಡ ನೀಡದ ಕಾರಣ ನಿದ್ರಾ ಹೀನತೆಯಂತಹ ಸಮಸ್ಯೆಗಳನ್ನು ಉಂಟು ಮಾಡೋದಿಲ್ಲ.

Smartphone tips Here is the benefits of useing dark Mode on Smartphone
Image Credit to Original Source

ಅಲ್ಲದೇ ಡಾರ್ಕ್ ಮೋಡ್​ನಲ್ಲಿಯೇ ನಿಮಗೆ ಡಿಸ್​ಪ್ಲೇ ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುವ ಕಾರಣ ನಿಮಗೆ ಕಣ್ಣಿನ ಮೇಲೆ ಹೆಚ್ಚಿನ ಬಲ ಹಾಕಬೇಕು ಎಂದೂ ಇರುವುದಿಲ್ಲ. ಹೀಗಾಗಿ ಎಲ್ಲಾ ರೀತಿಯಿಂದಲೂ ಸ್ಮಾರ್ಟ್​ ಫೋನ್​ ಬಳಕೆ ಮಾಡುವವರು ತಮ್ಮ ಮೊಬೈಲ್​ ಡಿಸ್​ಪ್ಲೇಯನ್ನು ಡಾರ್ಕ್ ಮೊಡ್​ಗೆ ಸ್ವಿಚ್​ ಮಾಡಿಕೊಳ್ಳುವುದು ನಿಜಕ್ಕೂ ಒಂದು ಉತ್ತಮ ಆಯ್ಕೆಯೇ ಆಗಿದೆ.

ಇದನ್ನೂ ಓದಿ : ದೀಪಾವಳಿ ಪ್ರಯುಕ್ತ ಜಿಯೋ ಕಂಪನಿಯಿಂದ ಆಕರ್ಷಕ ಪ್ರಿಪೇಯ್ಡ್​ ಆಫರ್​ : ಈ ಪ್ರಿಪೇಯ್ಡ್​ ಪ್ಯಾಕ್​ ಮಿಸ್​ ಮಾಡ್ಕೊಳ್ಳಬೇಡಿ

ಇದರಿಂದ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುತ್ತೆ ಎಂದಲ್ಲ. ಕನಿಷ್ಟ ಇಷ್ಟಾದರೂ ಲಾಭವಿದೆ ಎಂಬ ಕಾರಣಕ್ಕಾದರೂ ನೀವು ಲೈಟ್​ ಮೋಡ್​ ನಿಂದ ಡಾರ್ಕ್​ ಮೋಡ್​ಗೆ ಶಿಫ್ಟ್​ ಆಗುವುದು ಉತ್ತಮವಾಗಿದೆ.

Smartphone tips Here is the benefits of useing dark Mode on Smartphone

Comments are closed.