Bengaluru Power Cut : ಡಿ.21ರಂದು ಬೆಂಗಳೂರು ನಗರದ ಹಲವೆಡೆ ವಿದ್ಯುತ್‌ ವ್ಯತ್ಯಯ : ಬೆಸ್ಕಾಂ ಮಾಹಿತಿ

ಬೆಂಗಳೂರು : ಬೆಂಗಳೂರು ಮಹಾನಗರದ ಜನರು ಬುಧವಾರ (ಡಿ.21) ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವನ್ನು (Bengaluru Power Cut) ಎದುರಿಸಬೇಕಾಗುತ್ತದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಇನ್ನೂ ಸಿಲಿಕಾನ್‌ ಸಿಟಿಯಲ್ಲಿ ಎಲ್ಲೆಲ್ಲಿ ಮತ್ತು ಯಾವ ಸಮಯದಿಂದ ಯಾವ ಸಮಯದವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಟಿಪಿಸಿಎಲ್) ಹಲವಾರು ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂದ ಈ ವಾರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಬುಧವಾರ ವಿದ್ಯುತ್ ಕಡಿತವನ್ನು ಎದುರಿಸಬೇಕಾಗುತ್ತದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಈ ನಿರ್ವಹಣಾ ಕೆಲಸಗಳು ಮೂರನೇ ತ್ರೈಮಾಸಿಕ ಮತ್ತು ನಿಯಮಿತ ನಿರ್ವಹಣಾ ಕಾಮಗಾರಿಗಳ ಯೋಜನೆಗಳನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಹೆಚ್ಚಿನ ಕಾಮಗಾರಿಗಳು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ನಡೆಸಲಾಗುತ್ತದೆ. ಇದರ ಪರಿಣಾಮವಾಗಿ ಸುಮಾರು ಆರು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗುತ್ತದೆ. ಮತ್ತೆ ಕೆಲವು ಕೆಲಸಗಳು ಸಂಜೆ 5 ಅಥವಾ 6 ಗಂಟೆಯವರೆಗೂ ನಡೆಯಬಹುದು ಎಂದು ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಬೆಸ್ಕಾಂ ಆಗಾಗ್ಗೆ ನಿರ್ವಹಣೆ ಮತ್ತು ದುರಸ್ತಿ ಯೋಜನೆಗಳನ್ನು ಮಾಡುತ್ತಿರುತ್ತದೆ. ಇದರಲ್ಲಿ ಮರಗಳನ್ನು ಟ್ರಿಮ್ಮಿಂಗ್ ಮಾಡುವುದು, ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆ ಮಾಡುವುದು, ಪೈಪ್ ಹಾಕುವುದು ಮತ್ತು ಜಲಸಿರಿ ನೀರು ಸರಬರಾಜು ಕೆಲಸಗಳು ಕೂಡ ಇದರಲ್ಲಿ ಸೇರಿರುತ್ತದೆ.

ವಿದ್ಯುತ್ ಕಡಿತವನ್ನು ಎದುರಿಸಬಹುದಾದ ಪ್ರದೇಶಗಳ ಪಟ್ಟಿ ವಿವರ (ಡಿಸೆಂಬರ್ 21, ಬುಧವಾರ) :
ಕೆಟಿಪಿಸಿಎಲ್ ವೃತ್ತ – ಬೆಂಗಳೂರು ಮಹಾನಗರ ವಲಯ (BMAZ) ದಕ್ಷಿಣ, ಬೆಂಗಳೂರು ಮಹಾನಗರ ವಲಯ (BRAZ)
ಕೆಟಿಪಿಸಿಎಲ್ ವಿಭಾಗ- ದೊಡ್ಡಬಳ್ಳಾಪುರ, ಸೋಮನಹಳ್ಳಿ
ಬೆಸ್ಕಾಂ ವೃತ್ತ – ಬೆಸ್ಕಾಂ ಪೂರ್ವ, ಬಿಆರ್‌ಸಿ ಕೆಂಗೇರಿ, ಬೆಸ್ಕಾಂ ದಕ್ಷಿಣ
ಬೆಸ್ಕಾಂ ವಿಭಾಗ- ಇಂದಿರಾನಗರ, ಶಿವಾಜಿನಗರ, ನೆಲಮಂಗಲ, ಕೆಂಗೇರಿ

ಇದನ್ನೂ ಓದಿ : Karnataka Assembly Election : 2023ನೇ ಕರ್ನಾಟಕ ವಿಧಾನಸಭೆ ಚುನಾವಣೆಯ ಜೆಡಿಎಸ್‌ ಮೊದಲ ಪಟ್ಟಿ ಬಿಡುಗಡೆ : ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಇಲ್ಲಿದೆ

ಇದನ್ನೂ ಓದಿ : Auto Traffic Ban: ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಡಿ.29 ರಂದು ಆಟೋ ಚಾಲಕರಿಂದ ಮುಷ್ಕರ

ಇದನ್ನೂ ಓದಿ : Bangalore Suicide case: ಮಕ್ಕಳಿಗೆ ಮದುವೆ ಆಗಿಲ್ಲ ಎಂಬ ಚಿಂತೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಗುಂಡಮಗೆರೆ, ಹೊಸಹಳ್ಳಿ, ಸಾಸಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗೌರಿಬಿದನೂರು ಮತ್ತು ದೇವನಹಳ್ಳಿ ಎಚ್‌/ಡಬ್ಲ್ಯೂ ಪಾರ್ಕ್‌ನಿಂದ 220 ಕಿಲೋವೋಲ್ಟ್‌ಗಳ (ಕೆವಿ) ಕೆಐಎಡಿಬಿ ಆರ್‌/ಎಸ್‌ ಪೂರೈಕೆಯಾಗುವುದರಿಂದ ಬೇರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

Bengaluru Power Cut: On December 21, power cut in many parts of Bengaluru city: Bescom information

Comments are closed.