BMTC ಬಸ್‌ನಲ್ಲಿ ಅಗ್ನಿ ದುರಂತ, ಕಂಡಕ್ಟರ್‌ ಸಜೀವ ದಹನ

ಬೆಂಗಳೂರು : ಬಿಎಂಟಿಸಿ ಬಸ್ಸಿನಲ್ಲಿ ಅಗ್ನಿ ಅವಘಡ (BMTC Bus fire) ಸಂಭವಿಸಿದ್ದು, ಕಂಡಕ್ಟರ್‌ ಬಸ್ಸಿನಲ್ಲಿಯೇ ಸಜೀವವಾಗಿ ದಹನವಾದ ಘಟನೆ ಬೆಂಗಳೂರಿನ ಲಿಂಗಧೀರನಹಳ್ಳಿಯ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಗದಗ ಜಿಲ್ಲೆಯ ಹಾಲೂರಿನ ಮುತ್ತಯ್ಯಸ್ವಾಮಿ ( 45 ವರ್ಷ) ಎಂಬವರೇ ಮೃತ ಕಂಡಕ್ಟರ್.‌ ಆದರೆ ಚಾಲಕ ಪ್ರಕಾಶ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಕುರಿತು ತನಿಖೆ ಮುಂದುವರಿದಿದೆ.

ಸುಮ್ಮನಹಳ್ಳಿ ಡಿಪೋ-31ಗೆ ಸೇರಿದ ಮಾರ್ಗ ಸಂಖ್ಯೆ- 243/1, ಬಸ್‌ ರಾತ್ರಿ ರೂಟ್​ ಮುಗಿಸಿ ಲಿಂಗದೀರನಹಳ್ಳಿ ಬಸ್​ ನಿಲ್ದಾಣದಲ್ಲಿ ನಿಂತಿದೆ. ಚಾಲಕ ಪ್ರಕಾಶ್‌ ಹಾಗೂ ಕಂಡಕ್ಟರ್‌ ಮುತ್ತಯ್ಯಸ್ವಾಮಿ ಬಸ್ಸಿನಲ್ಲಿಯೇ ಮಲಗಿದ್ದರು. ಬೆಳಗ್ಗೆ ಚಾಲಕ ಪ್ರಕಾಶ್‌ ಶೌಚಕ್ಕೆ ತೆರಳಿದ್ದರು. ಈ ವೇಳೆಯಲ್ಲಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಲಗಿದ್ದ ಮುತ್ತಯ್ಯಸ್ವಾಮಿ ಬಸ್ಸಿನಲ್ಲಿ ಸುಟ್ಟಿ ಕರಕಲಾಗಿದ್ದಾರೆ. ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಆದರೆ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಗುಜರಿ ಗೋಡೌನ್‌ಗಳಿಗೆ ಬೆಂಕಿ : ತಪ್ಪಿದ ಬಾರೀ ದುರಂತ
ಬೆಂಗಳೂರಿನ ನಾಯಂಡಹಳ್ಳಿಯ ಪ್ರಮೋದ್‌ ಲೇಔಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ತಡರಾತ್ರಿ ಐದಾರು ಗುಜರಿ ಗೋಡೌನ್‌ಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿ ಸುಮಾರು ಮೂರ ರಿಂದ ನಾಲ್ಕು ಎಕರೆ ಜಾಗದ ವರೆಗೂ ಕೂಡ ಬೆಂಕಿ ವ್ಯಾಪಿಸಿತ್ತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಘಟನಾ ಸ್ಥಳದ ಪಕ್ಕದಲ್ಲಿಯೇ ಇದ್ದ ಮಾರ್ಷಲ್‌ಗಳು ಸ್ಥಳಕ್ಕೆ ಆಗಮಿಸಿ, ಗೋಡೌನ್‌ಗಳಲ್ಲಿ ಮಲಗಿದ್ದವರನ್ನು ಎಬ್ಬಿಸಿದ್ದಾರೆ. ಇದರಿಂದಾಗಿ ಬಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಇದನ್ನೂ ಓದಿ : Unnavo crime : ಅಕ್ರಮ ಸಂಬಂಧಕ್ಕೆ ವಿರೋಧಿಸಿದ ತಾಯಿಯನ್ನೇ ಹತ್ಯೆಗೈದು ಪರಾರಿಯಾದ ಮಕ್ಕಳು

ಇದನ್ನೂ ಓದಿ : ಪಿಎಂ ಕಿಸಾನ್‌ ಯೋಜನೆಯ 13ನೇ ಕಂತು ಜಮೆ ಆಗದಿದ್ರೆ ಆನ್‌ಲೈನ್‌ನಲ್ಲಿ ಹೀಗೆ ದೂರು ಸಲ್ಲಿಸಿ

ಇದನ್ನೂ ಓದಿ : Horoscope Today : ದಿನಭವಿಷ್ಯ – ಮಾರ್ಚ್ 10 ಶುಕ್ರವಾರ

BMTC Bus Catches fire bus conductor Brunt Lingadheeranahalli Bengaluru

Comments are closed.