Heat wave : ಕರಾವಳಿ ಕರ್ನಾಟಕದಲ್ಲಿ ಬೀಸಲಿದೆ ಬಿಸಿ ಗಾಳಿ: ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: (Heat wave ) ರಾಜ್ಯದಲ್ಲಿ ದಿನೇ ದಿನೇ ಹವಮಾನ ವೈಪರಿತ್ಯ ಹೆಚ್ಚಾಗುತ್ತಿದ್ದು, ಬೆಳಗ್ಗಿನ ಜಾವ ಚಳಿ ಹಾಗೂ ನಂತರ ಬಿಸಿಲಿನ ತಾಪಮಾನ ಕಂಡುಬರುತ್ತಿದೆ. ಈ ನಡುವೆ ಮುಂದಿನ 48 ಗಂಟೆಗಳಲ್ಲಿ ಕರಾವಳಿ ಕರ್ನಾಟಕದಾದ್ಯಂತ ಬಿಸಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.

ಕಳೆದ ಕೆಲವು ದಿನಗಳ ಹಿಂದೆ ಕರಾವಳಿಯಲ್ಲಿ ಬಿಸಿ ಗಾಳಿ ಬೀಸಿದ್ದು, ಹವಾಮಾನ ವೈಪರಿತ್ಯದಿಂದಾಗಿ ಸೋಂಕುಗಳು ಹೆಚ್ಚಳವಾಗುತ್ತಿದೆ. ಈ ಮಧ್ಯೆ ಮತ್ತೆ ಕರಾವಳಿಯಾದ್ಯಂತ ಬಿಸಿ ಗಾಳಿ ಬೀಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಯಲ್ಲಿ 5.1 ಡಿಗ್ರಿ ಸೆಲ್ಸಿಯಸ್‌ ಗಿಂತಲೂ ಹೆಚ್ಚು ಉಷ್ಣಾಂಶ ದಾಖಲಾಗಿದ್ದು, ಪಣಂಬೂರಿನಲ್ಲಿ 38.9 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇನ್ನೂ ಕರಾವಳಿಯಲ್ಲಿ ಬಿಸಿ ಗಾಳಿಯ ನಡುವೆ ಬೆಳಗ್ಗಿನ ಜಾವದಲ್ಲಿ ಚಳಿಯ ವಾತಾವರಣವೂ ಕೂಡ ಹೆಚ್ಚಿದೆ.

ಇನ್ನೂ ಬೆಂಗಳೂರಿನ ಎಚ್‌ ಎ ಎಲ್‌ ನಲ್ಲಿ 30.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಟ ಉಷ್ಣಾಂಶ, 17.8 ಡಿಗ್ರಿ ಸೆಲ್ಸಿಯಸ್‌ ಕನಿಷ್ಟ ಉಷ್ಣಾಂಶ, ನಗರದಲ್ಲಿ 30.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 18.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ. ಕೆಐಎಎಲ್​ನಲ್ಲಿ 30.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ. 17.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಇನ್ನೂ ಇಂದಿನಿಂದ ಮೂರು ದಿನಗಳ ಕಾಲ ದೇಶದ ಕೆಲವು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯದಲ್ಲಿ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆಗಳಿದ್ದು ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ : ಚುನಾವಣೆ ಹೊತ್ತಿನಲ್ಲಿ ಬಾಂಬೆ ಬುಕ್ ಬಾಂಬ್ : ಪುಸ್ತಕದಲ್ಲಿದೆ 17 ಶಾಸಕರು ರಂಗೀನ್ ಕಹಾನಿ !

ಇದನ್ನೂ ಓದಿ : ವೇತನ ಹೆಚ್ಚಳಕ್ಕೆ ಆಗ್ರಹ: ಮಾರ್ಚ್ 24 ರಾಜ್ಯ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಇದನ್ನೂ ಓದಿ : Adenovirus in children: ಮಕ್ಕಳಲ್ಲಿ ಹೆಚ್ಚುತ್ತಿದೆ ಆಡಿನೋ ವೈರಸ್: ರಾಜ್ಯದಲ್ಲಿ ಒಟ್ಟು 69 ಪ್ರಕರಣಗಳು ಪತ್ತೆ

Heat wave: Hot wind will blow in coastal Karnataka: Meteorological Department warns

Comments are closed.