ಮುಷ್ಕರ ಬೆಂಬಲಿಸಿ ಕೆಲಸಕ್ಕೆ ಗೈರು : 96‌ ಸಾರಿಗೆ ತರಬೇತಿ‌ ನೌಕರರು ಸಸ್ಪೆಂಡ್

ಬೆಂಗಳೂರು : ಕಳೆದೆರಡು‌ ದಿನಗಳಿಂದಲೂ ಸಾರಿಗೆ ನೌಕರರು ಹಲವು‌ ಬೇಡಿಕೆಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾರೆ. ಕೆಲಸಕ್ಕೆ ಗೈರು ಹಾಜರಾ ಗಿರುವ ತರಬೇತಿ ನೌಕರರ ಮೇಲೆ ಸರಕಾರ ಸಸ್ಪೆಂಡ್ ಅಸ್ತ್ರ ಪ್ರಯೋಗಿಸಿದೆ.

ಸಾರಿಗೆ ನೌಕರರ ನುಷ್ಕರ ಬೆಂಬಲಿಸಿ ಬಿಎಂಟಿಸಿಯ 96 ತರಬೇತಿ ನೌಕರರು ಕೆಲಸಕ್ಕೆ ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿ ಗಳು ನೋಟಿಸ್ ಜಾರಿ ಮಾಡಿದ್ದರು. ಆದರೂ ಕೂಡ ತರಬೇತಿ ನೌಕರರು ಕೆಲಸಕ್ಕೆ ಹಾಜರಾಗಿಲ್ಲ.

ಇದೀಗ ಬಿಎಂಟಿಸಿ ಕೆಲಸಕ್ಕೆ ಗೈರು ಹಾಜರಾಗಿರುವ ನೌಕರರನ್ನು ಸಸ್ಪೆಂಡ್ ಮಾಡುವ ಮೂಲಕ ಸಾರಿಗೆ ನೌಕರರಿಗೆ ಬಿಸಿ ಮುಟ್ಟಿಸಿದೆ. ನಿನ್ನೆಯಷ್ಟೇ ಸಾರಿಗೆ ನೌಕರರ ಮನೆಗಳನ್ನು ಖಾಲಿ ಮಾಡುವಂತೆ ಮನೆಗಳಿಗೆ ನೊಟೀಸ್ ಅಂಟಿಸಲಾಗಿತ್ತು. ಇದೀಗ ಸರಕಾರ ಸಸ್ಪೆಂಡ್ ಅಸ್ತ್ರ ಪ್ರಯೋಗಿಸಿದೆ.

Comments are closed.