Skincare Tips : ಹುಷಾರ್‌! ಅಡುಗೆ ಮನೆಯ ಈ ಪದಾರ್ಥಗಳು ನಿಮ್ಮ ಕೋಮಲ ತ್ವಚೆಗೆ ಹಾನಿಮಾಡಬಹುದು! ಅವುಗಳಿಂದ ದೂರವಿರಿ

ತ್ವಚೆಯ ಬಗ್ಗೆ ಕಾಳಜಿವಹಿಸುವವರು(Skincare Tips) ಕೆಮಿಕಲ್‌ ಫ್ರೀ ವಸ್ತುಗಳಿಗೆ ಮೊರೆಹೋಗಿರುವುದು ಬಹಳ ಸಂತೋಷ. ನಮ್ಮ ಆತ್ಮಸಾಕ್ಷಿಗಿಂತ ಹೆಚ್ಚಾಗಿ, ನೈಸರ್ಗಿಕ ವಸ್ತುಗಳನ್ನು ಉಪಯೋಗಿಸುವು ಟ್ರೆಂಡ್‌ ನಮ್ಮನ್ನು ಹಾಗೆ ಮಾಡಲು ಒತ್ತಾಯಿಸಿದೆ. ಡೈ ಫೇಸ್‌ ಮಾಸ್ಕ್‌ನ ಟ್ರೆಂಡ್‌ ಇತ್ತೀಚಿಗೆ ಬಹಳವಾಗಿ ಕಾಣಿಸುತ್ತಿದೆ. ಬಹಳಷ್ಟು ಜನರು ಇದನ್ನು ಫಾನ್ಸಿ ಬ್ರಾಂಡ್‌ಗಳಾಗಿ ಮಾಡಿಕೊಂಡಿದ್ದಾರೆ. ಅದೂ ಸರಿ, ಏಕೆಂದರೆ ಅದನ್ನು ತಯಾರಿಸುವುದು ಅತ್ಯಂತ ಸರಳ ಮತ್ತು ಅಗಾಧ ಆರೋಗ್ಯದ ಪ್ರಯೋಜನಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದಿರುವುದರಿಂದ ಬಳಸಬಹುದಾಗಿದೆ. ಆದರೆ ಅದು ಯಾವಾಗಲೂ ಸತ್ಯವಲ್ಲ.

ನೀವು ಮನೆಯಲ್ಲಿಯ ಡೈ ಫೇಸ್‌ ಮಾಸ್ಕ್‌ಗೇ ಆದ್ಯತೆ ನೀಡುತ್ತಿದ್ದರೆ, ಅದನ್ನು ತಯಾರಿಸಲು ಸಂಪೂರ್ಣವಾಗಿ ಮನೆಯಲ್ಲಿಯ ಪದಾರ್ಥಗಳನ್ನೇ ಬಳಸಿರಬೇಕೆಂಬುದನ್ನು ತಿಳಿದಿರಬೇಕು. ಈಗಂತೂ ಸೋಷಿಯಲ್ ಮೀಡಿಯಾದಲ್ಲಿ ತ್ವಚೆಯ ರಕ್ಷಣೆಗಾಗಿ ಅಡುಗೆಮನೆಯ ಪದಾರ್ಥಗಳನ್ನು ಉಪಯೋಗಿಸುವುದೂ ದೊಡ್ಡ ಟ್ರೆಂಡ್‌ ಆಗಿದೆ. ಆದರೆ, ಅವರ ತ್ವಚೆಯ ಮೇಲೆ ಪರಿಣಾಮ ಮಾಡಿದ್ದು ನಿಮ್ಮ ತ್ವಚೆಯ ಮೇಲೂ ಪರಿಣಾಮ ಮಾಡಬೇಕೆಂದೇನೂ ಇಲ್ಲ. ಅಷ್ಟೇ ಅಲ್ಲ ಅಡುಗೆ ಮೆನೆಯ ಕೆಲವು ಪಾದಾರ್ಥಗಳು ಅವರ ತ್ವಚೆಯ ಮೇಲೆ ಪವಾಡವೇ ಮಾಡಿದೆ ಎಂದು ಹೇಳಿಕೊಂಡಿರುವುದು ನಿಮ್ಮ ತ್ವಚೆಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಬಹುದು.

ಇದನ್ನೂ ಓದಿ : Ice cubes For Glowing Skin : ತ್ವಚೆಯ ಸಮಸ್ಯೆಗಳಿಗೆ ಐಸ್‌ ಕ್ಯೂಬ್‌ ಉಪಯೋಗಿಸಿದ್ದೀರಾ ? ಐಸ್‌ ಕ್ಯೂಬ್‌ ಉಪಯೋಗಿಸಿ ಬೇಸಿಗೆಯಲ್ಲಿ ನಿಮ್ಮ ತ್ವಚೆ ಕಾಪಾಡಿಕೊಳ್ಳಿ

ಅಂತಹ ಕೆಲವು ಅಡುಗೆ ಮನೆಯ ಪದಾರ್ಥಗಳನ್ನು ನಾವು ನಿಮಗೆ ಹೇಳುತ್ತಿದ್ದೇವೆ. ಅವುಗಳು ನಿಮ್ಮ ತ್ವಚೆಯ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಬಹುದು. ಅಂತಹವುಗಳಿಂದ ದೂರವಿರುವುದೇ ಉತ್ತಮ.

  • ವೆಜಿಟೇಬಲ್‌ ಆಯಿಲ್‌:
    ಕೆಲವರು ವೆಜಿಟೇಬಲ್‌ ಆಯಿಲ್‌ಗಳನ್ನು ನಿಮ್ಮ ತ್ವಚೆಗೆ ಲೇಪಿಸುವುದರಿಂದ ಅವು ಮಾಯ್ಚರೈಸರ್‌ಗಳ ರೀತಿಯಲ್ಲಿ ಕೆಲಸಮಾಡುವುದು ಮತ್ತು ಅದರಿಂದ ಉತ್ತಮ ಪರಿಣಾಮ ಪಡೆದುಕೊಳ್ಳಬಹುದು ಎಂದು ಹೇಳುತ್ತಾರೆ. ಆದರೆ ಈ ವೆಜಿಟೇಬಲ್‌ ಆಯಿಲ್‌ ಗಳು ನಿಮ್ಮ ತ್ವಚೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತವೆ. ಇದು ತ್ವಚೆಯ ಮೇಲುಗಡೆ ಮಾಯ್‌ಶ್ಚರೈಸ್‌ ಮಾಡಿದರೆ ಕೆಳಗಡೆಯ ರಂಧ್ರಗಳನ್ನು ಮುಚ್ಚಿಬಿಡುತ್ತವೆ. ಇದರ ಪರಿಣಾಮವಾಗಿ ಎಕ್ನಿ ಮತ್ತು ಕಲೆಗಳು ಉಂಟಾಗುತ್ತವೆ.
  • ಆಪಲ್‌ ಸೀಡರ್‌ ವಿನೇಗಾರ್‌:
    ಸೋಷಿಯಲ್‌ ಮೀಡಿಯಾದಲ್ಲಿ ಓಡಾಡುವ ಲೆಕ್ಕವಿಲ್ಲದಷ್ಟು ವೀಡಿಯೊಗಳು ಆಪಲ್‌ ಸೀಡರ್‌ ವಿನೇಗಾರ್‌ ಬ್ಲಾಕ್‌ಹಡ್ಸ್‌ ಗಳ ನಿರ್ಮೂಲನೆಗೆ ಸಹಾಯ ಮಾಡುತ್ತದೆ ಎಂದು ಶಿಫಾರಸ್ಸು ಮಾಡುತ್ತಾರೆ. ಇದು ಸಂಪೂರ್ಣವಾಗಿ ತಪ್ಪು. ಏಕೆಂದರೆ ಆಪಲ್‌ ಸೀಡರ್‌ ವಿನೇಗಾರ್ ಪ್ರಾಕೃತಿಕವಾಗಿ ಹೆಚ್ಚಿನ ಆಸಿಡ್‌ ಗುಣಹೊಂದಿದೆ. ಅದು ನಿಮ್ಮ ತ್ವಚೆಯ ಮೇಲೆ ಅತ್ಯಂತ ಕಟ್ಟ ಪರಿಣಾಮ ಬೀರಬಹುದು. ಅದನ್ನು ಬಿಡದೇ ಮತ್ತೂ ಉಪಯೋಗಿಸುತ್ತಿದ್ದರೆ ಅದು ರಾಸಾಯನಿಕ ರೀತಿಯಲ್ಲಿ ನಿಮ್ಮ ತ್ವಚೆಯನ್ನು ಸುಟ್ಟು ಹಾಕುತ್ತದೆ.
  • ಗರಮ್‌ ಮಸಾಲಾ:
    ಗರಮ್‌ ಮಸಾಲೆಯನ್ನು ವಿವಿಧ ಪದಾರ್ಥಗಳನ್ನು ಸೇರಿಸಿ ಮಾಡಿರುತ್ತಾರೆ. ಈ ಪದಾರ್ಥಗಳು ಊಟದ ಜೊತೆಗೆ ಒಳ್ಳೆಯ ಪರಿಣಾಮ ಬೀರುವುದು. ಆದರೆ ಈ ಸಂಯುಕ್ತಗಳು ಮುಖದ ತ್ವಚೆಯ ಮೇಲೆ ಅತ್ಯಂತ ಹಾನಿಕಾರಕವಾಗಿದೆ. ಈ ಮಸಾಲೆಯ ಸಂಯುಕ್ತಗಳು ಸ್ವಾಭಾವಿಕವಾಗಿ ಉರಿಯ ಗುಣಧರ್ಮಗಳಿಂದ ಕೂಡಿದೆ. ಅದಕ್ಕಾಗಿ ಇವುಗಳು ತ್ವಚೆಗೆ ಉರಿ, ಬೊಬ್ಬೆಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚು.


ಇದನ್ನೂ ಓದಿ : Best fruit face packs : ಬೇಸಗೆಯಲ್ಲಿ ಈ ಹಣ್ಣಿನ ಫೇಸ್ ಪ್ಯಾಕ್ ಬಳಸಿ; ಚರ್ಮದ ಸಮಸ್ಯೆಗಳಿಗೆ ಗುಡ್ ಬೈ ಹೇಳಿ

(Skincare Tips avoid these harmful kitchen ingredients)

Comments are closed.