Byadarahalli Suicide Case : ಬ್ಯಾಡರಹಳ್ಳಿ ಐವರ ಸಾವಿನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : FSL ವರದಿಯಿಂದ ಸ್ಪೋಟಕ ಮಾಹಿತಿ

ಬೆಂಗಳೂರು : ಪತ್ರಿಕೆಯ ಸಂಪಾದಕ ಶಂಕರ್ ಕುಟುಂಬದ ಐವರ ಸಾವಿನ ಪ್ರಕರಣಕ್ಕೆ ( Byadarahalli Suicide Case) ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿರುವ ಶಂಕರ್‌ ಮನೆಯಲ್ಲಿ ಪತ್ನಿ, ಮೂವರು ಮಕ್ಕಳು ಹಾಗೂ ಮೊಮ್ಮಗಳ ಶವ ಪತ್ತೆಯಾಗಿತ್ತು. ಮಗು ಹಸಿವಿನಿಂದ ಬಳಲಿ ಸಾವನ್ನಪ್ಪಿರ ಬಹುದು ಎಂದು ಶಂಕಿಸಲಾಗಿತ್ತು. ಆದ್ರೆ ಮಗು ಹಸಿವಿನಿಂದ ಸಾವನ್ನಪ್ಪಿಲ್ಲ, ಬದಲಾಗಿ ಮಗುವನ್ನು ಕೊಲೆ ಮಾಡಲಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ವರದಿ (FSL ) ನೀಡಿದೆ.

ಸೆಪ್ಟೆಂಬರ್ 17, 2021ರಂದು ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ರಾಜ್ಯವೇ ಬೆಚ್ಚಿ ಬೀಳುವ ಘಟನೆಯೊಂದು ನಡೆದು ಹೋಗಿತ್ತು. ಶಂಕರ್‌ ಅವರ ಪತ್ನಿ ಭಾರತಿ, ಹಿರಿಯ ಪುತ್ರಿ ಸಿಂಚನಾ, ಕಿರಿಯ ಮಗಳು ಸಿಂಧೂ ರಾಣಿ ಹಾಗೂ ಮಗ ಮಧು ಸಾಗರ್‌ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು. ಈ ವೇಳೆಯಲ್ಲಿ ಸಿಂಧೂ ರಾಣಿಯ ಮಗು ಕೂಡ ಸಾವನ್ನಪ್ಪಿತ್ತು. ಮಗುವಿನ ಸಾವಿಗೆ ಹಸಿವು ಕಾರಣ ಎಂದು ಹೇಳಲಾಗಿತ್ತು. ಆದ್ರೀಗ ಪೊಲೀಸರ ತನಿಖೆಯ ವೇಳೆಯಲ್ಲಿ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ.

ಮಗುವನ್ನು ಕೊಲೆ ಮಾಡಿ ನಂತರ ಉಳಿದವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಸುಮಾರು ನ್ಯಾಯಾಲಯಕ್ಕೆ ಸುಮಾರು 400 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕರ್‌ ಹಾಗೂ ಇಬ್ಬರು ಅಳಿಯಂದಿರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಮನೆಯಲ್ಲಿ ಸ್ಥಳ ಮಹಜರು ವೇಳೆಯಲ್ಲಿ ಲಕ್ಷಾಂತರ ರೂಪಾಯಿ ಹಣ, ಚಿನ್ನಾಭರಣ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿಯೂ ತನಿಖೆ ನಡೆಯುತ್ತಿದೆ.

ನನ್ನಪ್ಪ ಕಾಮುಕ, ಕುಡುಕ, ಸಹೋದರಿಯರ ಬಾಳು ಹಾಳು ಮಾಡಿದ ಎಂದು ಆರೋಪಿಸಿದ್ದ ಮಧುಸಾಗರ್‌

ಬೆಂಗಳೂರು : ಬ್ಯಾಡರಹಳ್ಳಿ ಸಾಮೂಹಿಕ ಆತ್ಮಹತ್ಯೆ ಪ್ರಕರಣದಲ್ಲಿ ( Byadarahalli Suicide Case ) ಮಧುಸಾಗರ್‌ ಡೆತ್‌ ನೋಟ್‌ನಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ತನ್ನ ಅಪ್ಪನಿಗೆ ಕಾಲ್‌ಗರ್ಲ್ಸ್‌, ವೇಶ್ಯೆಯರ ಸಹವಾಸವಿತ್ತು. ಆತ ಹೊರ ಜಗತ್ತಿಗೆ ಮುಖವಾಡ ಹಾಕಿ ಬದುಕುತ್ತಿದ್ದ ಎಂದೆಲ್ಲಾ ಗಂಭೀರ ಆರೋಪ ಮಾಡಿದ್ದ. ಬ್ಯಾಡರಹಳ್ಳಿಯಲ್ಲಿರುವ ಶಾಸಕ ಪತ್ರಿಕೆಯ ಸಂಪಾದಕ ಶಂಕರ್‌ ಮನೆಯಲ್ಲಿ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೇ ಒಂಬತ್ತು ತಿಂಗಳ ಮಗುವನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಪ್ರಕರಣ ನಡೆದ ಬೆನ್ನಲ್ಲೇ ಪತ್ನಿಯ ವಿರುದ್ದ ಗಂಭೀರ ಆರೋಪ ಮಾಡಿದ್ದ ಶಂಕರ್‌ಗೆ ಪ್ರಕರಣ ಉರುಳಾಗಿ ಪರಿಣಮಿಸುತ್ತಿದೆ. ಅದ್ರಲ್ಲೂ ಮನೆಯಲ್ಲಿ ನಡೆದ ಮಹಜರು ವೇಳೆಯಲ್ಲಿ ಸಿಕ್ಕ ಮೂರು ಡೆತ್‌ನೋಟ್‌ನಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮಗ ಮಧುಸಾಗರ್‌ ಗಂಭೀರ ಆರೋಪವನ್ನು ಮಾಡಿದ್ದಾರೆ.

ಮಧುಸಾಗರ ಬದುಕಿದ್ದಾಗಲೇ ತನ್ನ ತಂದೆಯ ವಿರುದ್ದ ಪೊಲೀಸರಿಗೆ ದೂರನ್ನು ನೀಡಿದ್ದಾನೆ. ತಂದೆಯ ವಿರುದ್ದದ ಆರೋಪ ಹಾಗೂ ದೂರಿನ ಪ್ರತಿಯನ್ನು ಜೆರಾಕ್ಸ್‌ ಮಾಡಿ ತನಗೆ ಗೊತ್ತಿದ್ದವರಿಗೆಲ್ಲಾ ಹಂಚಿದ್ದಾನೆ. ಅದ್ರಲ್ಲೂ ತಂದೆಯ ವಿರುದ್ದ ನೀಡಿದ್ದ ದೂರಿನಲ್ಲಿ ಮಧು ಸಾಗರ್‌ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾನೆ. ತಾಯಿಗೆ ಹಲವು ವರ್ಷಗಳಿಂದಲೂ ಕಿರುಕುಳ ನೀಡುತ್ತಿದ್ದ. ತಾಯಿಯ ಬಾಯಲ್ಲಿ ಚಪ್ಪಲಿಯನ್ನು ಇಟ್ಟು ಅವಮಾನಿಸಿದ್ದ. ಅಪ್ಪ ತುಂಬಾ ಸ್ವಾರ್ಥಿ, ಅಪ್ಪನಿಗೆ ಅನೈತಿಕ ಸಂಬಂಧವಿತ್ತು ಎಂದು ಮೂರ್ನಾಲ್ಕು ಮಹಿಳೆಯ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ಅಷ್ಟೇ ಅಲ್ಲಾ ತನ್ನ ತಂದೆ ಸ್ಯಾಡಿಸ್ಟ್‌, ಕಾಮುಕ, ಆತನಿಗೆ ಕಚೇರಿಯಲ್ಲಿರುವ ಮಹಿಳೆಯ ಜೊತೆಗೆ ಸಂಬಂಧವಿತ್ತು. ನಮ್ಮ ಏರಿಯಾದಲ್ಲಿರುವ ಮಹಿಳೆಯ ಜೊತೆಗೂ ಸಂಪರ್ಕವಿತ್ತು. ಆಕೆಯ ಮಗಳನ್ನೇ ಮದುವೆಯಾಗುವಂತೆಯೂ ನನಗೆ ಹೇಳಿದ್ದ. ಇಷ್ಟೇ ಅಲ್ಲ ಹಲವು ಮಹಿಳೆಯರಿಗೆ ಬ್ಲ್ಯಾಕ್‌ ಮೇಲ್‌ ಮಾಡಿ ಲೈಂಗಿಕ ಸಂಪರ್ಕವನ್ನೂ ಹೊಂದಿದ್ದಾನೆ. ಹಲವರನ್ನು ಟ್ರ್ಯಾಪ್‌ ಮಾಡಿ ಸಂಬಂಧ ಇರಿಸಿಕೊಂಡಿದ್ದ. ಅಪ್ಪನ ಅನೈತಿಕ ಸಂಬಂಧದದ ಕಾರಣದಿಂದಲೇ ಅಮ್ಮ ಹಾಗೂ ನಾವು ದೂರ ಉಳಿದ್ದಿದ್ದೇವು. ಅಪ್ಪನ ಕಿರುಕುಳದಿಂದಲೇ ಅಮ್ಮನಿಗೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದೇವು ಅಂತಾ ಬರೆದುಕೊಂಡಿದ್ದಾನೆ.

ಇನ್ನ ತನ್ನ ಸಹೋದರಿಯರ ಬಾಳು ಹಾಳಾಗೋದಕ್ಕೂ ಕೂಡ ತನ್ನ ತಂದೆಯೇ ಕಾರಣವೆಂದು ಉಲ್ಲೇಖಿಸಿದ್ದಾನೆ. ಅಪ್ಪ ಅಮ್ಮನಿಗೆ ಮಾತ್ರವಲ್ಲ, ತನ್ನಿಬ್ಬರು ಅಕ್ಕಂದಿರಿಗೂ ಕೂಡ ಕಿರುಕುಳವನ್ನು ನೀಡುತ್ತಿದ್ದ. ಅಕ್ಕಂದಿರಿಗೆ ಯಾವುದೇ ಅಸ್ತಿಯನ್ನೂ ಅಪ್ಪ ನೀಡಿಲ್ಲ, ಜೊತೆಗೆ ಗಂಡನ ಮನೆಯಲ್ಲೂ ಚೆನ್ನಾಗಿ ನೋಡಿಕೊಳ್ಳುತ್ತಾ ಇರಲಿಲ್ಲ. ಅಷ್ಟೇ ಯಾಕೆ ತನ್ನ ಹಿರಿಯ ಸಹೋದರಿಯ ಅತ್ತೆ ಮಾವ ಹಾಗೂ ಗಂಡನಿಗೆ ಹೇಳಿ ಆಕೆಗೆ ಹೊಡೆಸುವ ಕಾರ್ಯವನ್ನು ಅಪ್ಪ ಮಾಡುತ್ತಿದ್ದರು. ಈ ಮೂಲಕ ಅಕ್ಕಂದಿರ ಬಾಳನ್ನೂ ಹಾಳು ಮಾಡಿದ್ದಾನೆ ಎಂದು ಬರೆದುಕೊಂಡಿದ್ದಾನೆ. ಅಪ್ಪ ಅಮ್ಮನ ಅಸಹಾಯಕತೆಯನ್ನೇ ಬಳಸಿಕೊಂಡು ನಮಗೆ ಕಿರುಕುಳ ನೀಡುತ್ತಿದ್ದರು. ನಿತ್ಯವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಕಾರಣದಿಂದಲೇ ನಾವು ಊಟ ಮಾಡಿ ಬೇಗನೇ ಮಲಗುತ್ತಿದ್ದೇವು. ಅಪ್ಪನ ಕಿರುಕುಳ ತಾಳಲಾರದೆ ನಾನು ಕೆಲಸಕ್ಕೆ ಕೂಡ ರಾಜೀನಾಮೆಯನ್ನು ನೀಡದ್ದೇ. ಅಕ್ಕನ ಶಿಕ್ಷಣ ಕೂಡ ಹಾಳಾಗಿತ್ತು ಎಂದು ಅಪ್ಪ ಶಂಕರ್‌ ನೀಡುತ್ತಿದ್ದ ಕಿರುಕುಳವನ್ನು ಮಧುಸಾಗರ್‌ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಮನೆಯಲ್ಲಿ ಸಿಕ್ಕಿರುವ ಡೆತ್‌ ನೋಟ್‌ ಹಲವು ವಿಚಾರಗಳನ್ನು ತಿಳಿಸಿ ಹೇಳುತ್ತಿದೆ. ಮಮೆಯಲ್ಲಿ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆಯುತ್ತಲೇ ಇತ್ತು ಅನ್ನೋ ವಿಚಾರವೂ ಬಹಿರಂಗವಾಗಿದೆ. ಅಲ್ಲದೇ ಶಂಕರ್‌ ಕುಟುಂಬ ಸ್ಥಳೀಯರು, ಸ್ನೇಹಿತರು, ಸಂಬಂಧಿಕರ ಸಂಪರ್ಕವನ್ನೇ ಕಡಿದುಕೊಂಡು ಜೀವನ ಮಾಡುತ್ತಿತ್ತು. ಹೊರ ಪ್ರಪಂಚವನ್ನೇ ನೋಡದೆ ಬೆಳೆದ ಮಕ್ಕಳಿಗೆ ಗಂಡನ ಮನೆಗೆ ಹೋಗಿ ಬಾಳುವುದಕ್ಕೂ ಕಷ್ಟವಾಗ್ತಿತ್ತಂತೆ. ಇನ್ನು ಡೆತ್‌ ನೋಟ್‌ನಲ್ಲಿ ತಮ್ಮ ಮೃತದೇಹವನ್ನು ತಂದೆಗೆ ನೀಡಬೇಡಿ ಎಂದು ಬರೆಯಲಾಗಿತ್ತು. ಆದರೆ ಡೆತ್‌ ನೋಟ್‌ ಸಿಗುವ ಮೊದಲೇ ಮೃತ ದೇಹವನ್ನು ಶಂಕರ್‌ಗೆ ಹಸ್ತಾಂತರ ಮಾಡಲಾಗಿತ್ತು. ಶಂಕರ್‌, ಸಿಂಚನ ಪತಿ ಪ್ರವೀಣ್‌, ಸಿಂಧೂರಾಣಿ ಪತಿ ಶ್ರೀಕಾಂತ್‌ ಅಂತ್ಯಕ್ರೀಯೆಯನ್ನೂ ನೆರವೇರಿಸಿದ್ದರು.

ಇದನ್ನೂ ಓದಿ : ಒಂದೇ ಕುಟುಂಬದ ಐವರ ಸಾವು ಪ್ರಕರಣ : ಹಲ್ಲೆಗೆರೆ ಶಂಕರ್‌, ಅಳಿಯ ಶ್ರೀನಾಥ್‌ ಪೊಲೀಸ್‌ ವಶಕ್ಕೆ

ಇದನ್ನೂ ಓದಿ : ಬಿರಿಯಾನಿ ಆಸೆಗೆ 2 ಲಕ್ಷ ರೂಪಾಯಿ ಕಳೆದುಕೊಂಡ ಆಟೋ ಚಾಲಕ !

( Byadarahalli Suicide Case major twist)

Comments are closed.