Miss Universe 2021 Harnaaz Sandhu: ಭಾರತದ ಹರ್ನಾಜ್ ಸಂಧುಗೊಲಿದ ಮಿಸ್ ಯುನಿವರ್ಸ್ 2021 ಪ್ರಶಸ್ತಿ; 21 ವರ್ಷಗಳ ನಂತರ ಈ ಸಾಧನೆ

ಭಾರತದ ಚಂಡೀಘಡ ಮೂಲದ ಹರ್ನಾಜ್ ಸಂಧು (Harnaaz Sandhu) 2021ರ ಮಿಸ್ ಯುನಿವರ್ಸ್ (Miss Universe 2021) ಸೌಂದರ್ಯ ಸ್ಪರ್ಧೆಯ ವಿಜೇತೆಯಾಗಿ ಹೊರ ಹೊಮ್ಮಿದ್ದಾರೆ. ಈ ಮೂಲಕ 21 ವರ್ಷಗಳ ನಂತರ ಭಾರತಕ್ಕೆ ಮತ್ತೆ ಭುವನ ಸುಂದರಿ ಕಿರೀಟ ಒಲಿದಿದೆ. ಈ ಹಿಂದೆ 2000 ದಲ್ಲಿ ಲಾರ ದತ್ತಾ ಭುವನ ಸುಂದರಿ ಕಿರೀಟ ಪಡೆದಿದ್ದರು. ಇದೀಗ 21 ವರ್ಷಗಳ ನಂತರ ಹರ್ನಾಜ್ ಸಂಧು ಭಾರತಕ್ಕೆ ಹೆಮ್ಮೆ ಉಂಟು ಮಾಡಿದ್ದಾರೆ.

ಇಸ್ರೇಲ್ ಇಲಿಯಟ್‌ನಲ್ಲಿ ನಡೆದ 70 ನೆ ಮಿಸ್ ಯುನಿವರ್ಸ್ ಸ್ಪರ್ಧೆಯ ಕೊನೆ ರೌಂಡ್ ನಲ್ಲಿ ತಮ್ಮ ಪ್ರತಿ ಸ್ಪರ್ಧಿಗಳಾದ ದಕ್ಷಿಣ ಆಫ್ರಿಕಾ ಮತ್ತು ಪರಗ್ವೆಯ ಸುಂದರಿಯರನ್ನು ಹಿಂದಿಕ್ಕಿ ಕಿರೀಟ ಮುಡಿಗೇರಿಸಿಕೊಂಡರು.

2020 ರ ಮಾಜಿ ಭುವನ ಸುಂದರಿ ಮೆಕ್ಸಿಕೋದ ಆಂಡ್ರಿಯಾ ಮೆಜಾ ಅವರು ಹಾಲಿ ವಿಜೇತೆ ಹರ್ನಾಜ್ ಸಂಧು ಅವರಿಗೆ ಕಿರೀಟ ತೊಡಿಸಿದರು. ಪರಗ್ವೆ ಹಾಗೂ ದಕ್ಷಿಣ ಆಫ್ರಿಕಾ ಎರಡು ಹಾಗೂ ಮೂರನೇ ಸ್ಥಾನಕ್ಕೆ ತೃಪ್ತಿ ಪಡೆಯಬೇಕಾಯ್ತು. ರೂಪದರ್ಶಿ ಹಾಗೂ ನಟಿ ಆಗಿರುವ ಹರ್ನಾಜ್, ಅಕ್ಟೋಬರ್‌ನಲ್ಲಿ ನಡೆದ ಮಿಸ್ ಯುನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದು ಮಿಸ್ ಯುನಿವರ್ಸ್ ಸ್ಪರ್ಧೆಗೆ ಆಯ್ಕೆ ಆಗಿದ್ದರು. ಪ್ರಸ್ತುತ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.

2017ರ ಟೈಮ್ಸ್ ಫ್ರೇಶ್ ಫೇಸ್ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಸೌಂದರ್ಯ ಸ್ಪರ್ಧೆಯ ಪಯಣ ಫ್ರಾರಂಭಿಸಿದರು. ಈಗಾಗಲೇ ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೇ ಫೆಮಿನಾ ಮಿಸ್ ಪಂಜಾಬ್ ಹಾಗೂ ಇತರ ಕೆಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಸಂಧು ಅವರಿಗೆ ಈಗಿನ ಮಹಿಳೆಯರು ಯಾವೆಲ್ಲಾ ಒತ್ತಡಗಳನ್ನು ಎದುರಿಸುತ್ತಾರೆ ಎಂದು ಕೇಳಲಾಗಿತ್ತು. ” ಇಂದಿನ ಯುವ ಸಮೂಹ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ಆತ್ಮವಿಶ್ವಾಸದ ಕೊರತೆ. ತಮ್ಮ ಮೇಲೆ ತಮಗೇ ನಂಬಿಕೆ ಇಲ್ಲದಿರುವುದು. ಇನ್ನೊಬ್ಬರು ಏನು ಹೇಳುತ್ತಾರೆ ಎಂದು ಅದೆಷ್ಟೋ ಮಂದಿ ಕೆಲಸದಿಂದ ವಿಮುಖರಾಗುತ್ತಿದ್ದರೆ. ಇದಕ್ಕೆ ಸಲಹೆಯನ್ನು ನೀಡಿದ ಸಂಧು, ಮೊದಲು ಇತರರ ಜೊತೆ ಕಂಪೆರ್ ಮಾಡುವುದು ನಿಲ್ಲಿಸಿ. ನಿಮ್ಮ ಕನಸುಗಳ ಬೆನ್ನಟ್ಟಿ. ಇತರ ಉತ್ತಮ ವಿಷಯಗಳ ಕುರಿತು ಗಮನ ಹರಿಸಿ. ನನ್ನನ್ನು ನಾನು ಹೆಚ್ಚು ನಂಬುತ್ತೇನೆ ಅದರಿಂದಾಗಿ ಇಂದು ಈ ಸ್ಥಾನದಲ್ಲಿ ಇರಲು ಸಾಧ್ಯ ಆಯಿತು ಎಂದಿದ್ದಾರೆ.

ಇದನ್ನೂ ಓದಿ: ಅಕ್ಕಿ ಹಿಟ್ಟಿನಿಂದಲೂ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳ ಬಹುದು

ಇದನ್ನೂ ಓದಿ : Puneeth Raj Kumar Dream : ಪುನೀತ್ ಕನಸು, ಗಾಜನೂರಿನಲ್ಲಿ ನಿರ್ಮಾಣವಾಗಲಿದೆ ಡಾ.ರಾಜ್ ಮ್ಯೂಸಿಯಂ

(Harnaaz Sandhu of India new 70th Miss Universe)

Comments are closed.