ಬೆಂಗಳೂರು : ಈ ಕಾಲದಲ್ಲಿ ಮನುಷ್ಯರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಚಿಕ್ಕ ಪುಟ್ಟ ಮಾತಿಗೆ, 10 ರೂಪಾಯಿಗೂ ಕೊಲೆ ನಡೆದು ಹೋಗುತ್ತದೆ. ಇಂಥ ಮಾನವೀಯತೆ ಮರೆಯಾಗಿರೋ ಕಾಲಘಟ್ಟದಲ್ಲಿ ಇಲ್ಲೊಬ್ಬರು ಮಾತ್ರ ತಾವು ಸಾಕಿದ ಬೆಕ್ಕಿಗಾಗಿ ಪರದಾಡಿದ್ದಾರೆ.ಮಾತ್ರವಲ್ಲ ಸಾಕಿದ ಬೆಕ್ಕನ್ನು ಕಳೆದುಕೊಂಡು ಸಂಕಷ್ಟಕ್ಕಿಡಾಗಿರೋ ಮಾಲೀಕರು ಬೆಕ್ಕಿಗಾಗಿ ಪೊಲೀಸ್ ಠಾಣೆ ( cat missing ) ಮೆಟ್ಟಿಲೇರಿದ್ದಾರೆ. ಅಷ್ಟೇ ಅಲ್ಲ ಬೆಕ್ಕನ್ನು ಹುಡುಕಿಕೊಟ್ಟವರಿಗೆ ಬಹುಮಾನ ಕೂಡ ಘೋಷಿಸಿದ್ದಾರೆ.
ಹೌದು ಕಾರು, ಹಣ, ಬೈಕ್, ಚಿನ್ನಾಭರಣ ಕಳ್ಳರನ್ನೇ ಹುಡುಕೋದೇ ಕಷ್ಟವಾಗಿರೋ ಕಾಲದಲ್ಲಿ ಇಲ್ಲೊಬ್ಬರು ತಮ್ಮ ಮನೆಯ ಬೆಕ್ಕನ್ನು ಕದ್ದ ಆರೋಪಿಯನ್ನ ಬಂಧಿಸಿ ಸಾಕು ಬೆಕ್ಕನ್ನು ಹುಡುಕಿಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಬೆಂಗಳೂರಿನ ತಿಲಕನಗರದಲ್ಲಿ ಇಂತಹದೊಂದು ವಿಚಿತ್ರ ಪ್ರಕರಣ ದಾಖಲಾಗಿದೆ. ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬುವವರೇ ಬೆಕ್ಕು ಕಳೆದುಕೊಂಡವರು. ಮಿಸ್ಬಾ ಶರೀಫ್ ತಮ್ಮ ಮನೆಯಲ್ಲಿ ದುಬಾರಿ ತಳಿಯ ಬೆಕ್ಕು ಸಾಕಿದ್ದರು. ಈ ಬೆಕ್ಕು ಜನವರಿ 15 ರಿಂದ ಕಣ್ಮರೆಯಾಗಿದೆ. ಬೆಕ್ಕಿಗಾಗಿ ಹೊಂಚುಹಾಕಿ ಈ ಕಳ್ಳತನ ನಡೆದಿದ್ದು, ಮನೆಯ ಮೆಲ್ಛಾವಣಿಯಿಂದ ಬಂದು ಬೆಕ್ಕನ್ನು ಕಳ್ಳತನ ಮಾಡಿದ್ದಾರಂತೆ. ಈ ಬಗ್ಗೆ ತಿಲಕ ನಗರ ಪೊಲೀಸರಿಗೆ ಮಿಶ್ಬಾ ಶರೀಫ್ ದೂರು ನೀಡಿದ್ದಾರೆ. ಮಾತ್ರವಲ್ಲ ಬೆಕ್ಕಿನ ಬಗೆ ಬಗೆಯ ಪೋಟೋಗಳನ್ನು ಶೇರ್ ಮಾಡಿದ್ದಾರೆ.
ವೈಟ್ ಪರ್ಶಿಯನ್ ತಳಿಯ ಬೆಕ್ಕು ಇದಾಗಿದ್ದು ಈ ಬೆಕ್ಕನ್ನು ಮನೆಯ ಮಗುವಿನಂತೆ ಮಿಸ್ಬಾ ಶರೀಫ್ ಸಾಕಿದ್ದರಂತೆ. ಇದರೊಂದಿಗೆ ಒಂದು ಮೊಲವನ್ನು ಸಾಕಿದ್ದರಂತೆ ಮಿಸ್ಬಾ, ಈಗ ಬೆಕ್ಕು ಕಾಣೆಯಾದ ಬಳಿಕ ಮೊಲಸಹ ಮಂಕಾಗಿದೆ ಎನ್ನಲಾಗಿದೆ. ಮಿಸ್ಬಾ ಮನೆಯ ಬಳಿ ಎಲ್ಲೂ ಸಿಸಿಟಿವಿ ಇಲ್ಲದೇ ಇರೋದರಿಂದ ಕಳ್ಳರ ಕೃತ್ಯ ಎಲ್ಲೂ ರೆಜಾರ್ಡ್ ಆಗಿಲ್ಲ. ಇಂಡಿಯಾದಲ್ಲಿ ಈ ವೈಟ್ ಪರ್ಶಿಯನ್ ಕ್ಯಾಟ್ ಮೇಲೆ ೩೦ ಸಾವಿರ ರೂಪಾಯಿವರೆಗೂ ಇದೆ. ಹೀಗಾಗಿ ಕಳ್ಳರು ಬೆಕ್ಕನ್ನು ಕದ್ದು ಮಾರಾಟಮಾಡುವ ಸಲುವಾಗಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಕೇವಲ ಪೊಲೀಸರಿಗೆ ದೂರು ನೀಡಿರೋದು ಮಾತ್ರವಲ್ಲ ಮಿಸ್ಬಾ ಶರೀಫ್ ಬೆಕ್ಕಿಗಾಗಿ ಸೋಷಿಯಲ್ ಮೀಡಿಯಾ ಸಹಾಯ ಕೋರಿದ್ದು ತಮ್ಮ ಬೆಕ್ಕನ್ನು ಹುಡುಕಿಕೊಟ್ಟವರಿಗೆ ೩೫ ಸಾವಿರ ರೂಪಾಯಿ ಬಹುಮಾನ ಸಹ ಘೋಷಿಸಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಮಿಸ್ಬಾ ಬೆಕ್ಕಿನ ಪೋಟೋ ಸಖತ್ ಶೇರ್ ಆಗ್ತಿದೆ.
ಇದನ್ನೂ ಓದಿ : Bedroom Vastu Tips : ದಾಂಪತ್ಯ ಜೀವನದ ವಿರಸ ದೂರ ಮಾಡುತ್ತದೆ ಈ ವಾಸ್ತು ಟಿಪ್ಸ್
ಇದನ್ನೂ ಓದಿ : Life is ‘More’ Beautiful: ರವಿವಾರದ ವಿಶೇಷ: ಲೈಫ್ ಈಸ್ ‘ಮೋರ್’ ಬ್ಯುಟಿಫುಲ್ ಆಗುವುದು ಯಾವಾಗ…?
(cat missing, owner compliant in Tilaknagar Police Station Bangalore)