ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಕೊರೊನಾ ಸೋಂಕಿನ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ಸಿಲಿಕಾನ್ ಸಿಟಿಯಲ್ಲೀಗ ಕೋವಿಡ್ ಸೋಂಕಿಗೆ ತುತ್ತಾದ್ರೆ ಆಸ್ಪತ್ರೆಯಿಲ್ಲ. ಒಂದೊಮ್ಮೆ ಮೃತರಾದ್ರೆ ಸ್ಮಶಾನದಲ್ಲೂ ಜಾಗವಿಲ್ಲ.

ಬೆಂಗಳೂರು ನಗರದ ಚಾಮರಾಜಪೇಟೆಯ ಟಿ ಆರ್ ಮಿಲ್ ಸಮೀಪ ದಲ್ಲಿರುವ ಸ್ಮಶಾನದ ಗೇಟ್ ಬಳಿಯಲ್ಲಿ ಹೌಸ್ ಪುಲ್ ಬೋರ್ಡ್ ಹಾಕಿದ್ದಾರೆ. ಈ ಬೋರ್ಡ್ ಇದೀಗ ಸಿಲಿಕಾನ್ ಸಿಟಿಯ ಕೊರೊನಾ ಭೀಕರತೆಯನ್ನು ಅನಾವರಣಗೊಳಿಸಿದೆ.

ಸ್ಮಶಾನದಲ್ಲಿ ಪ್ರತಿನಿತ್ಯವೂ 20 ಶವಗಳ ಅಂತ್ಯಕ್ರಿಯೆ ನಡೆಸಲು ಅವಕಾಶವಿದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಸೋಂಕಿ ನಿಂದ ಮೃತರಾಗುವವರ ಸಂಖ್ಯೆ ತೀರಾ ಹೆಚ್ಚಿದೆ. ಹೀಗಾಗಿ 19 ಮೃತದೇಹಗಳ ದಹನಕ್ಕೆ ಬುಕ್ಕಿಂಗ್ ಆಗಿದೆ. ಹೀಗಾಗಿ ಸ್ಮಶಾನದಲ್ಲಿ ಹೌಸ್ ಪುಲ್ ಬೋರ್ಡ್ ಅನ್ನು ಹಾಕಲಾಗಿದೆ ಎನ್ನುತ್ತಾರೆ ಸ್ಮಶಾನ ಸಿಬ್ಬಂದಿ.

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗು ತ್ತಿದ್ದು, ಇನ್ನೊಂದೆಡೆ ಕೊರೊನಾದಿಂದಾಗಿ ಮೃತರ ಸಂಖ್ಯೆಯೂ ಹೆಚ್ಚುತ್ತಿದೆ. ನಿತ್ಯವೂ 200ಕ್ಕೂ ಅಧಿಕ ಶವಗಳ ಅಂತ್ಯಕ್ರೀಯೆ ನಡೆಯು ತ್ತಿದೆ. ಇದರಿಂದಾಗಿ ಚಿತಾಗಾರಗಳು ಶವಗಳಿಂದಲೇ ತುಂಬಿ ಹೋಗಿವೆ.

ನಿಜಕ್ಕೂ ರಾಜ್ಯದಲ್ಲಿ ಕೊರೊನಾ ಸೋಂಕು ಆತಂಕವನ್ನು ಮೂಡಿಸಿದೆ. ಹಿಂದೆಲ್ಲಾ ಸಿನಿಮಾ ಮಂದಿರಗಳ ಮುಂದೆ ಕಾಣಿಸುತ್ತಿದ್ದ ಹೌಸ್ ಪುಲ್ ಬೋರ್ಡ್ ಇದೀಗ ಚಿತಾಗಾರದಲ್ಲಿ ಕಾಣಿಸಿರೋದು ಆತಂಕವನ್ನು ಮೂಡಿಸಿದೆ. ಸರಕಾರ ಕೋವಿಡ್ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿ. ಜನರು ಎಚ್ಚರದಿಂದ ಕೋವಿಡ್ ನಿಯಮ ಪಾಲನೆ ಮಾಡಲಿ. ಇಲ್ಲವಾದ್ರೆ ಅಪಾಯ ಗ್ಯಾರಂಟಿ.
