ಸಂಗೀತ ನಿರ್ದೇಶಕ‌ ಅರ್ಜುನ್ ಜನ್ಯ ಸಹೋದರ ಕೊರೊನಾ‌ಗೆ ಬಲಿ

ಬೆಂಗಳೂರು : ಕೊರೊನಾ ವೈರಸ್ ಸೋಂಕು‌ ಕರ್ನಾಟಕದಲ್ಲಿ ಮರಣ‌ ಮೃದಂಗ ಬಾರಿಸುತ್ತಿದೆ. ಇದೀಗ ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕಿರಣ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

49 ವರ್ಷ ಪ್ರಾಯದ ಕಿರಣ್ ಅವರಿಗೆ ಕಳೆದ 15 ದಿನಗಳ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಚಿಕಿತ್ಸೆ ಫಲಕಾರಿ ಯಾಗದೇ ಕಿರಣ್ ಸಾವನ್ನಪ್ಪಿದ್ದಾರೆ. ಈ ಕುರಿತು ಅರ್ಜುನ್ ಜನ್ಯ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Comments are closed.