Byadrahalli Suicide : ಒಂದೇ ಕುಟುಂಬದ ಐವರ ಸಾವು ಪ್ರಕರಣ : ಹಲ್ಲೆಗೆರೆ ಶಂಕರ್‌, ಅಳಿಯ ಶ್ರೀನಾಥ್‌ ಪೊಲೀಸ್‌ ವಶಕ್ಕೆ

ಬೆಂಗಳೂರು : ಸ್ಥಳೀಯ ಪತ್ರಿಕೆಯ ಸಂಪಾದ ಹಲ್ಲೆಗೆರೆ ಶಂಕರ್‌ ಕುಟುಂಬದ ಐವರ ಸಾವಿನ ಪ್ರಕರಣಕ್ಕೆ ಇದೀಗ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಶಂಕರ್‌ ಹಾಗೂ ಕಿರಿಯ ಮಗಳು ಸಿಂಧೂ ರಾಣಿ ಪತಿ ಶ್ರೀನಾಥ್‌ ಎಂಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿರುವ ಶಾಸಕ ಪತ್ರಿಕೆಯ ಸಂಪಾದಕ ಶಂಕರ್‌ ಮನೆಯಲ್ಲಿ ಶಂಕರ್‌ ಅವರ ಎರಡನೇ ಮಗಳು ಸಿಂಧೂರಾಣಿ ಅವರ 9 ತಿಂಗಳ ಮಗುವನ್ನು ಕೊಲೆಗೈದು, ನಂತರ ಪತ್ನಿಭಾರತಿ (50 ವರ್ಷ), ಮಗಳು ಸಿಂಚನ(33 ವರ್ಷ), 2 ನೇ ಮಗಳು ಸಿಂಧುರಾಣಿ (30 ವರ್ಷ), ಮಗ ಮಧುಸಾಗರ್ (27 ವರ್ಷ) ಮನೆಯಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು. ಆತ್ಮಹತ್ಯೆಯ ಬೆನ್ನಲ್ಲೇ ಸಾವಿಗೆ ಮನೆ ಮಾಲೀಕ ಶಂಕರ್‌ ಕಾರಣ ಅನ್ನೋದು ಬಯಲಿಗೆ ಬಂದಿತ್ತು. ಸ್ವತಃ ಮಕ್ಕಳಾದ ಸಿಂಚನ, ಸಿಂಧೂರಾಣಿ ಹಾಗೂ ಮಧುಸಾಗರ್‌ ಪ್ರತ್ಯೇಕವಾಗಿ ಡೆತ್‌ನೋಟ್‌ ಬರೆದಿಟ್ಟಿದ್ದರು. ಅದ್ರಲ್ಲೂ ಮಧುಸಾಗರ್‌ ತನ್ನ ತಂದೆಗೆ ಐವರು ಮಹಿಳೆಯರ ಜೊತೆಗೆ ಅನೈತಿಕ ಸಂಬಂಧವಿದೆ ಅಂತಾ ಗಂಭೀರ ಆರೋಪವನ್ನೂ ಮಾಡಿದ್ದಾನೆ.

ಇದನ್ನೂ ಓದಿ : ನನ್ನಪ್ಪ ಕಾಮುಕ, ಕುಡುಕ, ಸಹೋದರಿಯರ ಬಾಳು ಹಾಳು ಮಾಡಿದ : ಮಧುಸಾಗರ್‌ ಗಂಭೀರ ಆರೋಪ

ಈಗಾಗಲೇ ಎರಡು ಬಾರಿ ಶಂಕರ್‌ ಅವರನ್ನು ವಿಚಾರಣೆಗೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸಿದ್ದಾರೆ. ಆದರೆ ಮತ್ತೆ ಹಲ್ಲೆಗೆರೆ ಶಂಕರ್‌ ಹಾಗೂ ಅಳಿಯ ಶ್ರೀನಾಥ್‌ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಮನೆಯ ಮಹಜರು ಕಾರ್ಯದ ವೇಳೆಯಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹಲವು ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಯನ್ನು ನಡೆಸಲಿದ್ದಾರೆ. ಈ ವೇಳೆಯಲ್ಲಿ ಐವರ ಸಾವಿಗೆ ಶಂಕರ್‌ ಕಾರಣ ಅನ್ನೋದು ಖಚಿತವಾದ್ರೆ ಪೊಲೀಸರು ಇಬ್ಬರನ್ನೂ ಕೂಡ ಬಂಧಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : ಐವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : 3 ಡೆತ್‌ ನೋಟ್‌ ಪತ್ತೆ, ಅನೈತಿಕ ಸಂಬಂಧಕ್ಕೆ ಬಲಿಯಾತ್ತ ಕುಟುಂಬ !

ಪ್ರಕರಣದ ಬೆನ್ನಲ್ಲೇ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಎಲ್ಲಾ ಆಂಗಲ್‌ನಿಂದಲೂ ತನಿಖೆಯನ್ನು ನಡೆಸುತ್ತಿದ್ದಾರೆ. ಮೂವರು ಮಕ್ಕಳು ಬರೆದಿರುವ ಡೆತ್‌ ನೋಟ್‌, ಮೊಬೈಲ್‌, ಲ್ಯಾಪ್‌ ಟಾಪ್‌ ಸೇರಿದಂತೆ ತಾಂತ್ರಿಕ ಸಾಕ್ಷ್ಯಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಎಲ್ಲರ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿನ ಅಂಶಗಳನ್ನು ಪರಿಗಣಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ : ಶಾಸಕ ಪತ್ರಿಕೆಯ ಸಂಪಾದಕ ಶಂಕರ್‌ ಮನೆಯಲ್ಲಿ 15 ಲಕ್ಷ ರೂ. ನಗದು , 2 ಕೆ.ಜಿ ಚಿನ್ನಾಭರಣ ಪತ್ತೆ

ಇದನ್ನೂ ಓದಿ : ಚಿಕ್ಕಮಗಳೂರು : ಯುವಕನಿಗೆ ಮೂತ್ರ ನೆಕ್ಕಿಸಿದ ಪ್ರಕರಣ : ಪಿಎಸ್‌ಐ ಅರ್ಜುನ್‌ಗೆ ಜಾಮೀನು ನಿರಾಕರಣೆ

Comments are closed.