Swachh Bharat Mission : ಸ್ವಚ್ಛಭಾರತ್ ಮಿಷನ್‌ 2ನೇ ಹಂತದ ಯೋಜನೆಗೆ ಮೋದಿ ಚಾಲನೆ

ನವದೆಹಲಿ : ನಗರೀಕರಣದ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದು, ತ್ಯಾಜ್ಯ ಮುಕ್ತ ನಗರ, ಸಮರ್ಪಕ ಕುಡಿಯುವ ನೀರನ್ನು ಪೂರೈಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿಯ ಸ್ವಚ್ಛ ಭಾರತ್‌ ಮಿಷನ್‌- ಅರ್ಬನ್ ಮತ್ತು ಅಮೃತ್ ಕಾರ್ಯಕ್ರಮದ ಎರಡನೇ ಹಂತದ ಯೋಜನೆಗಳಿಗೆ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಸ್ವಚ್ಛಭಾರತ್ ಮಿಷನ್‌ನ 2ನೇ ಹಂತದ ಯೋಜನೆಗೆ 1.41 ಲಕ್ಷ ಕೋಟಿ ಹಣ ನಿಗದಿಪಡಿಸಿದೆ. ಅಮೃತ್‌ 2.0 ಯೋಜನೆಗಾಗಿ 2.87 ಲಕ್ಷ ಕೋಟಿ ಹಣ ನಿಗದಿಪಡಿಸಲಾಗಿದೆ. ನಗರ ಪ್ರದೇಶಗಳಲ್ಲಿ ಸಮರ್ಪಕ ಕುಡಿಯುವನೀರು ಸೌಲಭ್ಯ ಕಲ್ಪಿಸುವುದು ಅಮೃತ್ ಯೋಜನೆಯ ಗುರಿ. 4,700 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ, 2.68 ಕೋಟಿ ನಲ್ಲಿ ಸಂಪರ್ಕ ನೀಡುವ ಉದ್ದೇಶವಿದೆ ಎಂದಿದ್ದಾರೆ.

ಇದನ್ನೂ ಓದಿ : Tata-Air India : ಟಾಟಾ ತೆಕ್ಕೆಗೆ ಏರ್‌ ಇಂಡಿಯಾ : 68 ವರ್ಷದ ಬಳಿಕ ಮರಳಿ ಪಡೆದ ಟಾಟಾ ಗ್ರೂಪ್

ಸ್ವಚ್ಛ ಭಾರತ್‌ ಮಿಷನ್‌ 2.0 ಯೋಜನೆಯಡಿ ಎಲ್ಲ ನಗರಗಳನ್ನು ತ್ಯಾಜ್ಯ ಮುಕ್ತಗೊಳಿಸುವುದು, ಬಯಲು ಶೌಚಮುಕ್ತಗೊಳಿಸುವುದು ಈ ಮೂಲಕ ನಗರ ಪ್ರದೇಶಗಳಲ್ಲಿ ನೈರ್ಮಲ್ಯ ರಕ್ಷಣೆಗೆ ಒತ್ತು ನೀಡುವ ಗುರಿ ಇದೆ. ಅಲ್ಲದೆ, ಘನ್ಯ ತ್ಯಾಜ್ಯವನ್ನು ವಿಭಾಗಿಸಿ ಮೂರು ಆರ್ ಧ್ಯೇಯದಡಿ (ರೆಡ್ಯೂಸ್‌, ರೀ ಯೂಸ್‌ ಮತ್ತು ರೀ ಸೈಕಲ್) ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವ ಗುರಿ ಹೊಂದಲಾಗಿದೆ.

ಅಮೃತ್ 2.0 ಯೋಜನೆಯಡಿ 4,700 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗುಣಮಟ್ಟದ ನೀರು ಪೂರೈಕೆ, 2.68 ಕೋಟಿ ನಲ್ಲಿಗಳ ಸಂಪರ್ಕ, ಶೇ 100ರಷ್ಟು ನೀರು ಸಂಸ್ಕರಣೆಗೆ ಒತ್ತು ನೀಡಲಿದ್ದು, ನಗರ ಪ್ರದೇಶಗಳ ಸುಮಾರು 10.5 ಕೋಟಿ ಜನರಿಗೆ ಇದರ ಲಾಭ ದೊರೆಯಲಿದೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ತಿಳಿಸಿದೆ.

ಸ್ವಚ್ಛ ಎಂಬುದು ಇಂದು ಜನಾಂದೋಲನವಾಗಿ ಹೊರಹೊಮ್ಮಿದೆ. ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಬಯಲುಶೌಚ ಮುಕ್ತ ಎಂಂಬುದನ್ನು ಘೋಷಿಸಿವೆ. ಶೇ 70 ರಷ್ಟು ಘನತ್ಯಾಜ್ಯವನ್ನು ವೈಜ್ಞಾನಿಕ ಕ್ರಮದಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ಇದನ್ನೂ ಓದಿ: Mamata Banerjee : ಸಿಎಂ ಕುರ್ಚಿ ಉಳಿಸಿಕೊಳ್ತಾರಾ ಮಮತಾ ಬ್ಯಾನರ್ಜಿ : ಭವಾನಿಪುರದಲ್ಲಿಂದು ಬಂಗಾಳ ಸಿಎಂ ಭವಿಷ್ಯ ನಿರ್ಧಾರ

Comments are closed.