ಸೋಮವಾರ, ಏಪ್ರಿಲ್ 28, 2025
HomekarnatakaFix My Street ಗೆ ದೂರಿನ ಸುರಿಮಳೆ : 9 ಸಾವಿರ ರಸ್ತೆ ಗುಂಡಿ ಮುಚ್ಚಲು...

Fix My Street ಗೆ ದೂರಿನ ಸುರಿಮಳೆ : 9 ಸಾವಿರ ರಸ್ತೆ ಗುಂಡಿ ಮುಚ್ಚಲು ಸಾರ್ವಜನಿಕರಿಂದ ದೂರು

- Advertisement -

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳು ಜನರ ಸುಗಮ ಸಂಚಾರಕ್ಕಿಂತ ಸಾವಿನ ರಹದಾರಿಗಳಾಗಿ ಬದಲಾಗುತ್ತಿವೆ. ರಸ್ತೆಗಳ‌ ಮಧ್ಯೆ ಗುಂಡಿ ಅನ್ನೋದಕ್ಕಿಂತ ಗುಂಡಿ ಮಧ್ಯೆ ರಸ್ತೆ ಎಂದರೇ ತಪ್ಪಿಲ್ಲ ಎಂಬಷ್ಟು ಗುಂಡಿಗಳು ಇಲ್ಲಿನ ರಸ್ತೆಗಳಲ್ಲಿವೆ. ಹೀಗಾಗಿ ಹೈಕೋರ್ಟ್ ಚಾಟಿ ಬಳಿಕ ಎಚ್ಚೆತ್ತ ರಸ್ತೆ ಗುಂಡಿ ಮುಚ್ಚಲು ಸಿದ್ಧತೆ ನಡೆಸಿದ್ದು, ರಸ್ತೆ ಗುಂಡಿಗಳ ಬಗ್ಗೆ ದೂರು ನೀಡಲು ಅ್ಯಪ್ ಸಿದ್ಧಪಡಿಸಿತ್ತು. ಈ ಆ್ಯಪ್ ಗೆ (Fix My Street) ಬರೋಬ್ಬರಿ 9 ಸಾವಿರ ದೂರು ಹರಿದು ಬಂದಿದೆ.

Fix My Street ಎಂಬ ಆ್ಯಪ್ ನಲ್ಲಿ ನಿಮ್ಮ ಹತ್ತಿರದ ಅಥವಾ ನೀವು ಓಡಾಡುವ ರಸ್ತೆಯ ಗುಂಡಿಗಳ ಬಗ್ಗೆ ಮಾಹಿತಿ ನೀಡುವಂತೆ ಬಿಬಿಎಂಪಿ ಸೂಚಿಸಿತ್ತು. ಈ ಸೂಚನೆಯ ಬೆನ್ನಲ್ಲೇ ಬಿಬಿಎಂಪಿಗೆ ಸಾವಿರಾರು ಸಂಖ್ಯೆಯಲ್ಲಿ ರಸ್ತೆಗುಂಡಿ ಬಗ್ಗೆ ದೂರಗಳು ಬಂದಿವೆ‌. ಇದುವರೆಗೂ Fix My Street ಅ್ಯಪ್ ಗೆ ಸಾರ್ವಜನಿಕರು 9207 ದೂರುಗಳನ್ನು ನೀಡಿದ್ದಾರೆ. ಹಲವೆಡೆ ಸಾರ್ವಜನಿಕರು ಗುಂಡಿಗಳು ಎಷ್ಟು ಡೆಡ್ಲಿಯಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಇನ್ನು ಎಲ್ಲೆಲ್ಲಿ ಎಷ್ಟೆಷ್ಟು ಗುಂಡಿಗಳಿವೆ ಅನ್ನೋದನ್ನು ಗಮನಿಸೋದಾದರೇ, ಬೆಂಗಳೂರು ಪೂರ್ವ ವಲಯದಲ್ಲೇ 2066 ಗುಂಡಿಗಳಿವೆ. ಇನ್ನು ದಾಸರಹಳ್ಳಿ, ಯಲಹಂಕ, ಮಹದೇವಪುರದಲ್ಲಿ ಸಾವಿರಕ್ಕಿಂತ ಕಡಿಮೆ ಗುಂಡಿಗಳ ಬಗ್ಗೆ ದೂರು ದಾಖಲಾಗಿದೆ.

Fix My Street ಗೆ ದಾಖಲಾದ ವಲಯವಾರು ದೂರು :

ಬೊಮ್ಮನಹಳ್ಳಿ – 1076
ದಾಸರಹಳ್ಳಿ – 867
ಪೂರ್ವ – 2066
ಮಹದೇವಪುರ – 729
ಆರ್ ಆರ್ ನಗರ – 1068
ದಕ್ಷಿಣ ವಲಯ – 1414
ಪಶ್ಚಿಮ ವಲಯ – 1232
ಯಲಹಂಕ – 755
ಒಟ್ಟು – 9207

ಗುಂಡಿಗಳ ಲೆಕ್ಕ ಸಿಗುತ್ತಿದ್ದಂತೆ ಬಿಬಿಎಂಪಿ ಇಂದಿನಿಂದ ಗುಂಡಿ ಮುಚ್ಚುವ ಕಾರ್ಯಾಚರಣೆ ನಡೆಸೋದಾಗಿ ಹೇಳಿದೆ. ಈ ಬಗ್ಗೆ ಬೆಂಗಳೂರಿನ ಪ್ರಮುಖ ಐದು ವಿಧಾನಸಭಾ ಕ್ಷೇತ್ರದ ಅಧಿಕಾರಿಗಳಿಗೆ ಬಿಬಿಎಂಪಿ ಸೂಚನೆ ರವಾನಿಸಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರೋ ನೂತನ ಆಯುಕ್ತ ತುಷಾರ್ ಗಿರಿನಾಥ್, ಈಗಾಗಲೇ ಸಾರ್ವಜನಿಕರು 9 ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳ ಮಾಹಿತಿ ನೀಡಿದ್ದಾರೆ. ಶುಕ್ರವಾರದಿಂದಲೇ ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭವಾಗಬೇಕಿತ್ತು‌. ಆದರೆ‌ಮೋಡ ಕವಿದ ವಾತಾವರಣ ಇರೋದರಿಂದ ಕಾಮಗಾರಿ ಆರಂಭಿಸಿರಲಿಲ್ಲ. ಇಂದಿನಿಂದ ಗುಂಡಿಗೆ ತೇಪೆ ಹಾಕುವ ಕೆಲಸ ನಡೆಯಲಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರು ರಸ್ತೆಗುಂಡಿಗಳ ಕಾರಣಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗುತ್ತಿರುವ ಹೊತ್ತಿನಲ್ಲೇ ಬಿಬಿಎಂಪಿ ಕೊನೆಗೂ ಎಚ್ಚೆತ್ತುಕೊಂಡಿದ್ದು, ಗುಂಡಿ ಮುಚ್ಚುವ ಕೆಲಸ ಮಾತ್ರ ಎಷ್ಟು ಗುಣಾತ್ಮಕವಾಗಿ ನಡೆಯುತ್ತೇ ಅನ್ನೋದು ಮುಂದಿನ ದಿನದಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ : ಪಾರ್ಕ್​ನಲ್ಲಿ ಬೆತ್ತಲಾಗಿ ಓಡಾಡಿ ಅಸಭ್ಯ ವರ್ತನೆ ವಿದೇಶಿ ಪ್ರಜೆಯ ಬಂಧನ

ಇದನ್ನೂ ಓದಿ : ಕೊರೋನಾ ಬಳಿಕ ಡೆಂಗ್ಯೂ ಆತಂಕ : ರಾಜಧಾನಿಯಲ್ಲಿ 2 ಸಾವಿರ ದಾಟಿದ ಪ್ರಕರಣ

Fix My Street app registered 9000 Complaints from Public for road whole

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular