basavaraj horatti resigns : ವಿಧಾನಪರಿಷತ್​ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಸವರಾಜ ಹೊರಟ್ಟಿ

ಬೆಂಗಳೂರು :basavaraj horatti resigns : ಕಳೆದ ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಸೇರ್ಪಡೆಯಾಗಲಿರುವ ವಿಧಾನಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಇಂದು ವಿಧಾನಪರಿಷತ್​ ಸಭಾಪತಿ ಸ್ಥಾನ ಹಾಗೂ ಪರಿಷತ್​ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಘೋಷಿಸಿದ್ದಾರೆ. 18ನೇ ತಾರೀಖು ತಾವು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೊರಟ್ಟಿ ಈ ಹಿಂದೆ ಹೇಳಿದ್ದರು. ಆದರೆ ಪರಿಷತ್​ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಮುಂಚೆಯೇ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.


ಈ ಸಂಬಂಧ ವಿಧಾನಸೌಧದ ಸಭಾಪತಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ಕರೆದ ಬಸವರಾಜ ಹೊರಟ್ಟಿ ತಾವು ವಿಧಾನಪರಿಷತ್​ ಸಭಾಪತಿ ಹಾಗೂ ಪರಿಷತ್​ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರೋದಾಗಿ ಹೇಳಿದರು. ಜೆಡಿಎಸ್​ ಆಗಲಿ ಅಥವಾ ದೇವೇಗೌಡರ ಮೇಲಾಗಲಿ ನನಗೆ ಯಾವುದೇ ಬೇಸರವಿಲ್ಲ.ಶಿಕ್ಷಕರು ಒತ್ತಾಯ ಮಾಡಿದ್ದಾರೆ ಎಂಬ ಕಾರಣಕ್ಕೆ ನಾನು ಈ ಬದಲಾವಣೆಯನ್ನು ಮಾಡುತ್ತಿದ್ದೇನೆ. ನನಗೆ ದೇವೇಗೌಡರನ್ನು ನೇರವಾಗಿ ಭೇಟಿ ಮಾಡಲು ಧೈರ್ಯ ಸಾಲಲಿಲ್ಲ. ಹೀಗಾಗಿ ಪತ್ರದ ಮೂಲಕ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.


ಈಗಿನ ರಾಜಕೀಯ ಪರಿಸ್ಥಿತಿಯನ್ನು ನೋಡುತ್ತಿದ್ದರೆ ರಾಜಕೀಯವೇ ಬೇಡ ಎಂದೆನಿಸುತ್ತದೆ. ಪರಿಷತ್​ ಸದಸ್ಯನನ್ನಾಗಿ ಶಿಕ್ಷಕರು ನನ್ನನ್ನು ಏಳು ಬಾರಿ ಆಯ್ಕೆ ಮಾಡಿದ್ದಾರೆ. ಇಡೀ ದೇಶದಲ್ಲಿಯೇ ಇನ್ಯಾರಿಗೂ ಈ ಮಟ್ಟಕ್ಕೆ ಗೌರವ ಸಿಕ್ಕಿದ್ದು ನಾನು ನೋಡಿಲ್ಲ. ಇದಕ್ಕಾಗಿ ನಾನು ಶಿಕ್ಷಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಮಾತ್ರವಲ್ಲದೇ ಅವರ ಕಷ್ಟಕ್ಕೆ ಎಂದಿಗೂ ಮಿಡಿಯುತ್ತೇನೆ . ಮೊದಲು ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೆ. ಬಳಿಕ 2000ರಿಂದ ಜೆಡಿಎಸ್​ನಿಂದ ಸ್ಪರ್ಧಿಸಲು ಆರಂಭಿಸಿದೆ. ಕೆಲವೊಂದು ಬದಲಾವಣೆಗಳು ನಿಜಕ್ಕೂ ಮನಸ್ಸಿಗೆ ನೋವುಂಟು ಮಾಡುತ್ತವೆ. ದೇವೆಗೌಡರು ನನ್ನನ್ನ ಕುಟುಂಬ ಸದಸ್ಯನಂತೆ ನೋಡಿದ್ದಾರೆ. ಆದರೆ ನಾನೀಗ ಅನಿವಾರ್ಯವಾಗಿ ಪಕ್ಷ ಬದಲಾವಣೆ ಮಾಡುತ್ತಿದ್ದೇನೆ. ಪಕ್ಷವೊಂದರ ಆಸರೆ ಬೇಕಾಗುತ್ತದೆ. ನಾನು ಯಾವುದೇ ಅಧಿಕಾರದ ಆಸೆಗೆ ಪಕ್ಷ ಬದಲಿಸುತ್ತಿಲ್ಲ ಎಂದು ಹೇಳಿದರು.

ಇದನ್ನು ಓದಿ : bengali actress pallavi dey : ಖ್ಯಾತ ಕಿರುತೆರೆ ನಟಿ ಪಲ್ಲವಿ ಡೇ ಫ್ಲಾಟ್​ನಲ್ಲಿ ಶವವಾಗಿ ಪತ್ತೆ

ಇದನ್ನೂ ಓದಿ : KL Rahul, Rohit Sharma :ಕೆಎಲ್ ರಾಹುಲ್, ರೋಹಿತ್ ಶರ್ಮಾ ವಿಶ್ರಾಂತಿ; ದಕ್ಷಿಣ ಆಫ್ರಿಕಾ ಟಿ20ಗೆ ಟೀಂ ಇಂಡಿಯಕ್ಕೆ ನೂತನ ನಾಯಕ

basavaraj horatti resigns to the sabhapathi post of vidhana parishad

Comments are closed.