ಸೋಮವಾರ, ಏಪ್ರಿಲ್ 28, 2025
Homeನಮ್ಮ ಬೆಂಗಳೂರುforeign man : ಪಾರ್ಕ್​ನಲ್ಲಿ ಬೆತ್ತಲಾಗಿ ಓಡಾಡಿ ಅಸಭ್ಯ ವರ್ತನೆ ವಿದೇಶಿ ಪ್ರಜೆಯ ಬಂಧನ

foreign man : ಪಾರ್ಕ್​ನಲ್ಲಿ ಬೆತ್ತಲಾಗಿ ಓಡಾಡಿ ಅಸಭ್ಯ ವರ್ತನೆ ವಿದೇಶಿ ಪ್ರಜೆಯ ಬಂಧನ

- Advertisement -

ಬೆಂಗಳೂರು : foreign man :ರಾಜಧಾನಿಯ ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿ ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರದಂದು ಸಂಪಿಗೆ ಹಳ್ಳಿಯ ಶಿವರಾಮ ಕಾರಂತ ಬಡಾವಣೆಯ ಪಾರ್ಕ್​ವೊಂದರಲ್ಲಿ ಈ ಘಟನೆ ಸಂಭವಿಸಿದೆ. ಪಾರ್ಕ್​ನ ಸುತ್ತ ಬೆತ್ತಲಾಗಿ ಓಡುತ್ತಾ ಸಾರ್ವಜನಿಕರ ಎದುರು ಅಸಭ್ಯ ವರ್ತನೆ ತೋರುತ್ತಿದ್ದ ವಿದೇಶಿ ಪ್ರಜೆಯನ್ನು ಸ್ಥಳೀಯರು ಪೊಲೀಸರ ವಶಕ್ಕೆ ಒಪ್ಪಿದ್ದಾರೆ.

ವಿದೇಶಿ ಪ್ರಜೆಯ ವರ್ತನೆಯನ್ನು ಕಂಡ ಸ್ಥಳೀಯ ನಿವಾಸಿಗಳು ಸಂಪಿಗೆಹಳ್ಳಿ ಠಾಣಾ ಪೊಲೀಸರಿಗೆ ಕರೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸಂಪಿಗೆ ಹಳ್ಳಿ ಠಾಣಾ ಪೊಲೀಸರು ಮೊದಲು ವಿದೇಶಿ ಪ್ರಜೆಗೆ ಬುದ್ಧಿವಾದ ಹೇಳಲು ಯತ್ನಿಸಿದ್ದಾರೆ. ಆದರೆ ಆತ ಮಾತು ಕೇಳದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.


ಬುದ್ಧಿವಾದ ಹೇಳಲು ಮುಂದಾದ ಪೊಲೀಸ್​ ಅಧಿಕಾರಿಗಳಿಗೆ ವಿದೇಶಿ ಪ್ರಜೆಯು ಕಾಲಿನಿಂದ ತುಳಿದು ಹಲ್ಲೆ ನಡೆಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಇದರಿಂದ ಪೊಲೀಸರು ಈತನನ್ನು ಕೂಡಲೇ ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ವೇಳೆಯಲ್ಲಿ ಈತ ತನ್ನ ಹೆಸರು ಜೇಮ್ಸ್​ ಎಂದು ಹೇಳಿಕೊಂಡಿದ್ದಾನೆ. ಈತನ ದೇಶ ಯಾವುದು ಎಂಬುದಕ್ಕೆ ಈತ ಯಾವುದೇ ಉತ್ತರವನ್ನು ನೀಡಿಲ್ಲ ಎನ್ನಲಾಗಿದೆ. ಪೊಲೀಸ್​ ಪೇದೆ ಶ್ರೀನಿವಾಸ ಮೂರ್ತಿ ನೀಡಿರುವ ದೂರನ್ನಾಧರಿಸಿ ಪೊಲೀಸರು ವಿದೇಶಿಗರ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ : bengali actress pallavi dey : ಖ್ಯಾತ ಕಿರುತೆರೆ ನಟಿ ಪಲ್ಲವಿ ಡೇ ಫ್ಲಾಟ್​ನಲ್ಲಿ ಶವವಾಗಿ ಪತ್ತೆ

ಇದನ್ನೂ ಓದಿ : Tomato fever in Udupi : ಉಡುಪಿಯ 4 ವರ್ಷದ ಮಗುವಿಗೆ ಟೊಮೆಟೊ ಜ್ವರ ? ಸ್ಪಷ್ಟನೆ ಕೊಟ್ಟ ಆರೋಗ್ಯ ಇಲಾಖೆ

foreign man wandering around naked in bengaluru

RELATED ARTICLES

Most Popular