Namma Metro : ತಮಿಳುನಾಡು – ಕರ್ನಾಟಕ ಗಡಿ ಭಾಗದಲ್ಲಿ ಓಡಾಡಲಿದೆ ನಮ್ಮ ಮೆಟ್ರೋ

ಬೆಂಗಳೂರು : ನಮ್ಮ‌ಮೆಟ್ರೋ (Namma Metro) ಹಂತ 2 ರ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಹೊಸೂರಿನವರಿಗೆ ವಿಸ್ತರಿಸಲು ಸರ್ಕಾರ ಅನುಮೋದನೆ ಸಿಕ್ಕಿದ್ದು ಇದರಿಂದ ಐಟಿ ಉದ್ಯೋಗಸ್ಥರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮಾತ್ರವಲ್ಲ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಸಂಚರಿಸುವ ಜನರಿಗೂ ಸಹಾಯವಾಗಲಿದೆ. ನಮ್ಮ‌ ಮೆಟ್ರೋ ಯೋಜನೆಯ ಅಡಿಯಲ್ಲಿ ರಾಷ್ಟ್ರೀಯ ವಿದ್ಯಾಲಯ ರಸ್ತೆ ಹಾಗೂ ಬೊಮ್ಮಸಂದ್ರ ಮಾರ್ಗವನ್ನು ಹೊಸೂರಿನವರೆಗೆ ವಿಸ್ತರಿಸುವ ಪ್ರಸ್ತಾವನೆಯನ್ನು ಬಿಎಂಆರ್ಸಿಎಲ್ ಸರ್ಕಾರಕ್ಕೆ ಸಲ್ಲಿಸಿತ್ತು.

ಈ ಮಧ್ಯೆ ಇಲ್ಲಿಯವರೆಗಿನ ಮೆಟ್ರೋ ಮಾರ್ಗಕ್ಕಾಗಿ ಕೃಷ್ಣಗಿರಿ ಸಂಸದ ಡಾ.ಎ.ಚೆಲ್ಲಕುಮಾರ್ ಮೆಟ್ರೋ ಮಾರ್ಗಕ್ಕೆ ಕರ್ನಾಟಕ ಸರ್ಕಾರಕ್ಕೆ ಈ ಹಿಂದೆ ಮನವಿ ಸಲ್ಲಿಸಿದ್ದರು. ಕರ್ನಾಟಕ ಸರ್ಕಾರದ ಒಪ್ಪಿಗೆ ಈ ಯೋಜನೆಗೆ ಸಿಕ್ಕಿರೋದರಿಂದ ಉಭಯ ರಾಜ್ಯಗಳ ನಡುವಿನ ಸಕಾರಾತ್ಮಕ ಬೆಳವಣಿಗೆಗೆ ನೆರವಾಗಲಿದೆ ಎಂದು ಡಾ.ಎ.ಚೆಲ್ಲಕುಮಾರ್ ಹೇಳಿದ್ದು, ತಮಿಳುನಾಡಿನ ಸರ್ಕಾರದ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.

ಇನ್ನೂ ಈಗಾಗಲೇ ರಾಜ್ಯ ಸರ್ಕಾರ ಅನುಮೋದನೆ ನೀಡಿರೋ ಸಂಗತಿಯನ್ನು ನಮ್ಮ ಮೆಟ್ರೋ ರೈಲು ಕಾರ್ಪೋರೇಶನ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಈಗಾಗಲೇ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗೂ ಮಾಹಿತಿ ನೀಡಿದ್ದಾರಂತೆ. 20.5 ಕಿಲೋಮೀಟರ್ ಉದ್ದದ ರಸ್ತೆ ಇದಾಗಿದ್ದು, ಇದರಲ್ಲಿ ಅರ್ಧ ಭಾಗ ತಮಿಳುನಾಡಿನ ಗಡಿಯಲ್ಲಿ ಬರಲಿದೆ.11. 7 ಕಿಲೋಮೀಟರ್ ಕರ್ನಾಟಕದ ಗಡಿಗೆ ಬಂದರೇ, ಉಳಿದರ್ಧ ಹೊಸೂರಿನ ಭಾಗಕ್ಕೆ ಬರುತ್ತದೆ.

ರಾಜ್ಯದ ಗಡಿಗಳನ್ನು ಮೀರಿದ ಯೋಜನೆಗಳನ್ನು ಕುರಿತು ಇರುವ ನಮ್ಮ ಮೆಟ್ರೋ ರೈಲು ನೀತಿ 2017 ರ ಮಾರ್ಗಸೂಚಿಗಳ ಪ್ರಕಾರ ತಮಿಳುನಾಡು ಅಧ್ಯಯನ ಕೈಗೊಳ್ಳುವಂತೆ ಬಿಎಂಅರ್ ಸಿಎಲ್ ಮನವಿ ಮಾಡಿದೆ. ನಾಲ್ಕು ಟರ್ಮಿನಲ್ ಪಾಯಿಂಟ್ ಗಳನ್ನು ವಿಸ್ತರಿಸುವ ಮೂಲಕ ಬೆಂಗಳೂರು ಉಪನಗರ ರೈಲು ಯೋಜನೆಯೊಂದಿಗೆ ಹೊಸೂರನ್ನು ಸಂರ್ಪಕಿಸಲು ರಾಜ್ಯ ಸರ್ಕಾರ ಈ ಹಿಂದೆ ಯೋಜನೆ ಸಿದ್ದಪಡಿಸಿತ್ತು.

ಈ ಯೋಜನೆಯಿಂದ ಹೊಸೂರು, ಕೆಂಗೇರಿಯಿಂದ ರಾಮನಗರ, ರಾಜಾನುಕುಂಟೆಯಿಂದ ದೊಡ್ಡಬಳ್ಳಾಪುರ ಮತ್ತು ವೈಟ್ ಫಿಲ್ಡ್ ನಿಂದ ಬಂಗಾರದ ಪೇಟೆಯ ವರೆಗೆ ವಿಸ್ತರಿಸಲು ಉದ್ದೇಶಿಸಿದೆ. ಇನ್ನು ಈ ಯೋಜನೆಗೆ ಮುಖ್ಯವಾಗಿ ಮೆಟ್ರೋ ಮಾರ್ಗ ನಿರ್ಮಾಣದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಯೋಜನಾ ವೆಚ್ಚದ ಹಂಚಿಕೆ ಮತ್ತು ಕಾಮಗಾರಿ ಸಮಯದಲ್ಲಿ ಹಣಕಾಸಿನ ಹಂಚಿಕೆಯ ಸಮನ್ವಯತೆಯ ಅಗತ್ಯವಿದೆ ಎಂದು ಬಿಎಂಆರ್ಸಿಎಲ್ ಅಭಿಪ್ರಾಯಿಸಿದೆ.

ಇದನ್ನೂ ಓದಿ : Metro train : ಸೈಕ್ಲಿಂಗ್ ಪ್ರಿಯರಿಗೆ ಸಿಹಿಸುದ್ದಿ: ಮೆಟ್ರೋದಲ್ಲಿ ಕೊಂಡೊಯ್ಯಬಹುದು ಸೈಕಲ್‌

ಇದನ್ನೂ ಓದಿ : ಬಿಎಂಟಿಸಿಗೆ ಖಾಸಗಿಕರಣ ? ನಷ್ಟ ತುಂಬಿಸಿಕೊಳ್ಳು ಖಾಸಗಿ ಚಾಲಕರ ನೇಮಕ

Good News Tamil Nadu Karnataka Travel Namma metro

Comments are closed.