Jobs: ಮನೆಯಲ್ಲೇ ಕುಳಿತು ಇಂಗ್ಲಿಷ್ ಕಲಿಯಿರಿ ಮತ್ತು ಉದ್ಯೋಗ ಪಡೆಯಿರಿ

ಬೆಂಗಳೂರು: ಯುವ ಜನರಿಗೆ ಉದ್ಯೋಗ ತರಬೇತಿ ಒದಗಿಸುವ ದಿ ನಡ್ಜ್ ಸಂಸ್ಥೆ ( Nudge foundation ) ” ಗುರುಕುಲ” ಎಂಬ ಜಾಬ್ (jobs) ಸ್ಕಿಲ್ ಕೋರ್ಸ್ ಮೂಲಕ ಸುಮಾರು ಆರು ಸಾವಿರ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಕಾರ್ಯ ಕೈಗೊಂಡಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿದ ಅದೆಷ್ಟೋ ಮಂದಿಗೆ ಈ ಸಂಸ್ಥೆ ಸಹಾಯ ಹಸ್ತ ಚಾಚಿದೆ. ಈಗಾಗಲೇ 5 ವರ್ಷಗಳಿಂದ ಬೆಂಗಳೂರಿನಲ್ಲಿ ಹಲವರಿಗೆ ಉದ್ಯೋಗ ಕಲ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಬಾರಿ, ಹೊಸ ಕಲ್ಪನೆಯೊಂದಿಗೆ ಸಂಸ್ಥೆ ಬಂದಿದ್ದು, ಮನೆಯಲ್ಲಿಯೇ ಕುಳಿತ ಯುವಜನತೆಗೆ ಇಂಗ್ಲೀ‍ಷ್ ಭಾಷಾ ಜ್ಞಾನ (English Knowledge) ಒದಗಿಸುವ ಹಾಗೂ ಅವರಿಗೆ ಅದಕ್ಕೆ ತಕ್ಕ ಪ್ರಮಾಣ ಪತ್ರ ನೀಡಿ, ಉದ್ಯೋಗ ಒದಗಿಸಲು ನೆರವಾಗುವ ಯೋಜನೆಯೊಂದನ್ನು ಕೂಡ ಈ ಫೌಂಡೇಷನ್ ಆರಂಭಿಸಿದೆ. ಕೋವಿಡ್ ನಿಂದಾಗಿ ಮನೆಯಿಂದ ಹೊರ ಬರಲು ಸಾಧ್ಯ ಆಗದವರಿಗಾಗಿ, “ಫ್ಯೂಚರ್ ಪರ್ಫೆಕ್ಟ್” (Future Perfect) ಅನ್ನುವ ಹೊಸ ಕೋರ್ಸ್ ಆರಂಭಿಸಿದೆ. ಈ ಯೋಜನೆಯಡಿ ಜನರು ಮನೆಯಲ್ಲೇ ಕೂತು ಕೇವಲ ಎರಡು ತಿಂಗಳಲ್ಲಿ ಸ್ಪೋಕನ್ ಇಂಗ್ಲೀಷ್ ಕಲಿಯಲು ಸಾಧ್ಯವಾಗಲಿದೆ.


ಇಷ್ಟೇ ಅಲ್ಲದೆ, ಜಾಬ್ ಒರಿಯೆಂಟೆಡ್ ಸ್ಕಿಲ್ ಹಾಗೂ ಪ್ರಮಾಣ ಪತ್ರವನ್ನು ಸಹ ಸಂಸ್ಥೆ ನೀಡಲಾಗುತ್ತದೆ. ಫ್ಯೂಚರ್ ಪರ್ಫೆಕ್ಟ್ ಕೋರ್ಸ್ ಮೂಲಕ 10 ರಾಜ್ಯಗಳ ಸುಮಾರು 18200 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಅದೆಷ್ಟೋ ಮಂದಿಗೆ ಕುಟುಂಬ ಸಾಲಗಳಿಗೆ 18% ಹೆಚ್ಚಿನ ಕೊಡುಗೆ ನೀಡಿದ್ದಾರೆ. ಉದ್ಯೋಗ ಪಡೆಯಲು ನೆರವಾಗುವುದು ಈ ಸಂಸ್ಥೆಯ ವಿಶೇಷ ಹೆಗ್ಗಳಿಕೆಯಾಗಿದೆ.


ದಿ ನಡ್ಜ್ ಸಂಸ್ಥೆಯಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಸ್ಟಾರ್‌ಬಕ್ಸ್‌, ಟಾಟಾ ಸಿಎಚ್‌ಎ, ಆ್ಯಕ್ಸಿಸ್ ಸೆಕ್ಯೂರಿಟಿಗಳು ಮತ್ತು ಗ್ರಾಸ್‌ರೂಟ್‌ ಮುಂತಾದ ಪ್ರಸಿದ್ಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಡ್ಜ್ ಫೌಂಡೇಷನ್‌ನ ಸಂಸ್ಥಾಪಕ ಮತ್ತು ಸಿಇಒ ಅತುಲ್ ಸತೀಜ ತಮ್ಮ ಸಂಸ್ಥೆಯು ಕಾರ್ಯ ವೈಖರಿ ಕುರಿತು ಮಾತನಾಡಿ ” ಪ್ರತಿ ತಿಂಗಳು10 ಲಕ್ಷ ಯುವಕರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಉದ್ಯೋಗಾವಕಾಶದ ಜೊತೆಗೇ, ಯುವಕರಿಗೆ ಆತ್ಮವಿಶ್ವಾಸ ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸಂಸ್ಥೆಯು ನೆರವಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Work from Home : ಓಮಿಕ್ರಾನ್‌ ಆರ್ಭಟ : ಐಟಿ ಕಂಪೆನಿ ಉದ್ಯೋಗಿಗಳಿಗೆ ಮತ್ತೆ ವರ್ಕ್‌ ಫ್ರಂ ಹೋಮ್‌

Realme Discounts Offers: ರಿಯಲ್‌ ಮಿ ಸ್ಮಾರ್ಟ್‌ಫೋನ್‌ಗೆ ಭರ್ಜರಿ 5 ಸಾವಿರ ಡಿಸ್ಕೌಂಟ್; ಗ್ರಾಹಕರು ಫುಲ್ ಖುಷ್

( Nudge foundation start a project called Future perfect learn english from home to get jobs)

Comments are closed.