Dhruva Sarja Prerana Sarja : ಸರ್ಜಾ ಕುಟುಂಬಕ್ಕೆ ಹೊಸ ಅತಿಥಿ ಆಗಮನ: ಧ್ರುವ್ ಸರ್ಜಾ ಕೊಟ್ರು ಸಿಹಿಸುದ್ದಿ

Dhruva Sarja Prerana Sarja : ಸ್ಯಾಂಡಲ್ ವುಡ್‌ನಲ್ಲಿ ವಿಶಿಷ್ಟ ಮ್ಯಾನರಿಸಂ ಹಾಗೂ ನಟನೆಯ ಮೂಲಕ ಸದ್ದು ಮಾಡಿದ್ದು ಸರ್ಜಾ ಕುಟುಂಬ.‌ ಆದರೆ ಚಿರಂಜೀವಿ ಸರ್ಜಾ ಅಕಾಲಿಕ ನಿಧನದ ಬಳಿಕ ಸರ್ಜಾ ಕುಟುಂಬದ ಖುಷಿಯ ದಿನಗಳೇ ಮುಗಿದಂತಾಗಿತ್ತು. ಚಿರು ಹಾಗೂ ಮೇಘನಾ ಪುತ್ರ ರಾಯನ್ ಜನನದ ಬಳಿಕ‌ ಕೊಂಚ ಉತ್ಸಾಹ ಕಂಡಿತ್ತು. ಆದರೆ ಈಗ ಮತ್ತೊಮ್ಮೆ ಸರ್ಜಾ‌ಕುಟುಂಬದಲ್ಲಿ ಸಂತೋಷ ಮನೆ ಮಾಡಿದ್ದು, ಸರ್ಜಾ ಕುಟುಂಬ ಮತ್ತೊಂದು ಹೊಸ ಸದಸ್ಯರ ಆಗಮನದ (Prerana Sarja Baby Bump Photoshoot) ಖುಷಿಯಲ್ಲಿದೆ.

ಹೌದು ಸರ್ಜಾ ಕುಟುಂಬದಲ್ಲಿ ಹೊಸ ಅತಿಥಿಯ ಆಗಮನದ ಸದ್ದು ಜೋರಾಗಿದೆ. ಅದು ಮತ್ಯಾರೂ ಅಲ್ಲ ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಮಗು. ಆಕ್ಷ್ಯನ್ ಪ್ರಿನ್ಸ್ ಧ್ರುವ್ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ತಮ್ಮ ಚೊಚ್ಚಲ‌ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಸದ್ಯದಲ್ಲೇ ಅಂದ್ರೇ ಸಪ್ಟೆಂಬರ್ ತಿಂಗಳಿನಲ್ಲೇ ಪ್ರೇರಣಾ ತಾಯಿಯಾಗಲಿದ್ದಾರೆ. ಪ್ರೇರಣಾ ತಾಯ್ತನದ ಸಂಭ್ರಮದಲ್ಲಿರೋ ಸಂಗತಿಯನ್ನು ಸ್ವತಃ ಧ್ರುವ್ ಸರ್ಜಾ ಖಚಿತಪಡಿಸಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಪ್ರೇರಣಾ ಬೇಬಿ ಬಂಪ್ ಪೋಟೋ ಶೂಟ್ ನ ಕ್ಯೂಟ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ನಾವು ಹೊಸತಾದ ಬದುಕಿಗೆ ಕಾಲಿಡುತ್ತಿದ್ದೇವೆ. ದಿವ್ಯವಾದ ಅನುಭವವೊಂದಕ್ಕೆ ಸಿದ್ಧವಾಗುತ್ತಿದ್ದೇವೆ. ಸದ್ಯದಲ್ಲೇ ಬರಲಿರುವ ನಮ್ಮ ಮಗುವನ್ನು ಆಶೀರ್ವದಿಸಿ ಎಂದು ಧ್ರುವ್ ಸರ್ಜಾ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಪ್ರೇರಣಾ ತೆಳು ನೀಲಿ, ಕಾಫಿ ಹಾಗೂ ವೈಟ್ ಗೌನ್ ಗಳಲ್ಲಿ ಮಿಂಚಿದ್ದು, ಬೇಬಿ ಬಂಪ್ ಜೊತೆ ಮುದ್ದಾಗಿ ಪೋಟೋಸ್ ಗೆ ಪೋಸ್ ನೀಡಿದ್ದಾರೆ. ಇನ್ನು ಧ್ರುವ್ ಸರ್ಜಾ ಕೂಡ ಪತ್ನಿ ಜೊತೆ ಸೇರಿ ಮಗುವಿನ ಮೊದಲ ಸೋನೋಗ್ರಫಿ ಪ್ರೇಮ್ ಜೊತೆ‌ ತಮ್ಮ ಖುಷಿ ಶೇರ್ ಮಾಡಿಕೊಂಡಿದ್ದಾರೆ.

ಅಲ್ಲದೇ ಮಗು ಇದೇ ಸಪ್ಟೆಂಬರ್ ತಿಂಗಳಿನಲ್ಲೇ ಜನಿಸಲಿದೆ ಅನ್ನೋ ಸಂಗತಿಯನ್ನು ಧ್ರುವ್ ಮತ್ತು ಪ್ರೇರಣಾ ದಂಪತಿ ತಮ್ಮ ಬೇಬಿ ಬಂಪ್ ವಿಡಿಯೋದಲ್ಲಿ ಶೇರ್ ಮಾಡಿದ್ದಾರೆ. ಧ್ರುವ್ ಸರ್ಜಾ ಈ ಪೋಸ್ಟ್ ಗೆ ಮೇಘನಾ ಮೊದಲು‌ಕಮೆಂಟ್ ಮಾಡಿದ್ದು, ಮೋಸ್ಟ್ ಬ್ಯೂಟಿಫುಲ್ ನ್ಯೂಸ್,ದೇವರು ಒಳ್ಳೆದು ಮಾಡಲಿ ಎಂದು ಹಾರೈಸಿದ್ದಾರೆ. ಸದ್ಯ ಧ್ರುವ್ ಸರ್ಜಾ ಅಭಿಮಾನಿಗಳು ಈ ಸುದ್ದಿ ಸಾಕಷ್ಟು ಸಂಭ್ರಮ ಮೂಡಿಸಿದ್ದು ಪ್ರೇರಣಾ ಹಾಗೂ ಧ್ರುವ್ ಸರ್ಜಾ ವಿಡಿಯೋ ನೋಡಿ ಖುಷಿಯಿಂದ ಶುಭ ಹಾರೈಸುತ್ತಿದ್ದಾರೆ.

ಇದನ್ನೂ ಓದಿ : Meghanaraj Sarja foreign trip : ನೋವುಗಳಿಗೆ ನಲಿವಿನ ಉತ್ತರ ಕೊಟ್ಟ ದಿಟ್ಟೆ: ಮೇಘನಾ ರಾಜ್‌ ಸರ್ಜಾ ಫಾರಿನ್ ಟ್ರಿಪ್ ಪೋಟೋ ವೈರಲ್

ಇದನ್ನೂ ಓದಿ : Teen Serial Killer- ‘KGF’ ರಾಕಿ ಭಾಯ್ ಆಗಲು ಸರಣಿ ಕೊಲೆ

Dhruva Sarja Prerana Sarja Baby Bump Photoshoot Good news for Sarja Family

Comments are closed.