ಶಿವರಾಮ ಕಾರಂತ ಬಡಾವಣೆ ವಿವಾದ : 5 ಸಬ್ ರಿಜಿಸ್ಟ್ರಾರ್‌ ಅಮಾನತು

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನ ವಿವಾದಿತ ಶಿವರಾಮ ಕಾರಂತ ಬಡಾವಣೆಯಲ್ಲಿ ಅಕ್ರಮವಾಗಿ ನಿವೇಶನಗಳ ನೋಂದಣಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶಕ್ಕೆ ಬೆದರಿಮ ರಾಜ್ಯ ಸರ್ಕಾರ ಐದು ಸಬ್ ರಿಜಿಸ್ಟ್ರಾರ್ ಗಳನ್ನು ಅಮಾನತು ಮಾಡಿದೆ ಎಂದು ಕರ್ನಾಟಕ ಕಂದಾಯ ಸಚಿವ ಆರ್ ಅಶೋಕ ಮಾಹಿತಿ ನೀಡಿದ್ದಾರೆ.

ವಿಧಾನ ಪರಿಷತ್‌ ಅಧಿವೇಶನದಲ್ಲಿ ಜೆಡಿಎಸ್ ವಿಧಾನಪರಿಷತ್‌ ಸದಸ್ಯ ಕಾಂತರಾಜ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಿವರಾಮ ಕಾರಂತ ಬಡಾವಣೆಯಲ್ಲಿ ಆಸ್ತಿ ನೋಂದಣಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಮಗೆ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿಐದು ಮಂದಿ ಸಬ್ ರಿಜಿಸ್ಟ್ರಾರ್‌ಗಳನ್ನು ಅಮಾನತು ಗೊಳಿಸಬೇಕಾಗಿತ್ತು ಹೀಗಾಗಿ ಕ್ರಮಕೈಗೊಂಡಿದ್ದೇವೆ ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ.

ಮಾರ್ಚ್ 2018 ರಲ್ಲಿ ಶಿವರಾಮ ಕಾರಂತ್‌ ಬಡಾವಣೆಗೆ ಭೂಸ್ವಾಧೀನಕ್ಕಾಗಿ ಅದರ ನಿರ್ದೇಶನಗಳನ್ನು ಪೋಸ್ಟ್ ಮಾಡಿದ ನಂತರ ಮೂರನೇ ವ್ಯಕ್ತಿಗಳ ಪರವಾಗಿ ಯಾವುದೇ ಸೈಟ್‌ಗಳ ನೋಂದಣಿಯನ್ನು ಪ್ರಾರಂಭಿಸಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಅಶೋಕ ಅವರು ಸರ್ಕಾರವು ಸಬ್ ರಿಜಿಸ್ಟ್ರಾರ್‌ಗಳ ಅಮಾನತನ್ನು ಉಲ್ಲೇಖಿಸಿ, ಕ್ರಮ ಕೈಗೊಂಡ ವರದಿಯನ್ನು ಎಸ್‌ಸಿಗೆ ಅಫಿಡವಿಟ್‌ನಲ್ಲಿ ಸಲ್ಲಿಸಿದೆ ಎಂದು ಹೇಳಿದರು.

ಇದನ್ನೂ ಓದಿ : ಶಾಲಾ ಮಕ್ಕಳಿಗೆ ಕೊರೊನಾ ಟೆಸ್ಟ್‌ ಕಡ್ಡಾಯ : ಕೋವಿಡ್‌ ತಾಂತ್ರಿಕ ಸಮಿತಿ ಸಲಹೆ

ಇದನ್ನೂ ಓದಿ : ಬೆಳಕಿನ ಹಬ್ಬದ ಮೇಲೆ ಕೊರೋನಾ ಕರಿನೆರಳು: ಈ ವರ್ಷವೂ ನೋ ಪಟಾಕಿ ಎಂದ ಸಿಎಂ

ಇದನ್ನೂ ಓದಿ : ಪೋಟೋದಲ್ಲೇ ಸೋಷಿಯಲ್ ಮೀಡಿಯಾಗೆ ಕಿಚ್ಚು ಹಚ್ಚಿದ ಕಾಲಿವುಡ್ ನಟಿ

(Shivaram Karantha Layout controversy: Karnataka govt suspends 5 sub-registrars)

Comments are closed.