ಅಶ್ಲೀಲ ವಿಡಿಯೋ ಪ್ರಕರಣ: ರಾಜ್ ಕುಂದ್ರಾ ವಿರುದ್ಧ ಸಲ್ಲಿಕೆಯಾಯ್ತು ಚಾರ್ಜಶೀಟ್

ಅಶ್ಲೀಲ ವಿಡಿಯೋ ತಯಾರಿಕೆ ಹಾಗೂ ಪ್ರಸಾರದ ಆರೋಪದಡಿಯಲ್ಲಿ ಜೈಲು ಸೇರಿರುವ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಎರಡನೇ ಚಾರ್ಜಶೀಟ್ ಸಲ್ಲಿಕೆಯಾಗಿದೆ. 1467 ಪುಟಗಳ ಚಾರ್ಜಶೀಟ್ 43 ಸಾಕ್ಷಿಗಳ ಹೇಳಿಕೆ ಒಳಗೊಂಡಿದೆ.

ಕೇವಲ ಆರೋಪಿತ ರಾಜ್ ಕುಂದ್ರಾ ಮಾತ್ರವಲ್ಲದೇ, ಇತರ ಆರೋಪಿಗಳಾದ ರಯಾನ್ ಥೋರ್ಪ್,ಇನ್ನೂ ಬಂಧನಕ್ಕೊಳಗಾಗದೇ ತಪ್ಪಿಸಿಕೊಂಡಿರುವ ಪ್ರದೀಪ ಭಕ್ಷಿ ಸೇರಿದಂತೆ ಹಲವರ ವಿರುದ್ಧ ಚಾರ್ಜಶೀಟ ಸಲ್ಲಿಕೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 5 ಸಾಕ್ಷಿಗಳು 164 ಸಿಆರ್ಪಿಸಿ ಪ್ರಕಾರ ಹೇಳಿಕೆ ದಾಖಲಿಸಿದ್ದಾರೆ. ಈಗಾಗಲೇ ಮೊದಲ ಚಾರ್ಜಶೀಟ ಸಲ್ಲಿಕೆಯಾಗಿದ್ದು 3 ಸಾವಿರ ಪುಟಗಳ ದೋಷಾರೋಪಣೆಯನ್ನು ಸಲ್ಲಿಸಲಾಗಿದ್ದು, ಇದರ ಆಧಾರದ ಮೇಲೆ ನಟಿ ಗೆಹನಾ ವಸಿಷ್ಠ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.

ಬಳಿಕ ಜುಲೈ 19 ರಂದು ರಾಜ್ ಕುಂದ್ರಾರನ್ನು ಬಂಧಿಸಲಾಗಿದ್ದು, ಬಳಿಕ ರಾಜ್ ಕುಂದ್ರಾಗೆ ಸೇರಿದ ಮೊಬೈಲ್,ಲ್ಯಾಪ್ ಟ್ಯಾಪ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಭಾರತದಲ್ಲಿ ಅಶ್ಲೀಲ ಚಿತ್ರ ತಯಾರಿಕೆ ಹಾಗೂ ಪ್ರದರ್ಶನ ಶಿಕ್ಷಾರ್ಹ ಅಪರಾಧವಾಗಿದ್ದು, ರಾಜ್ ಕುಂದ್ರಾ ತಮ್ಮ ಮಾಲಿಕತ್ವದ ವಿಯಾನ್ ಸಂಸ್ಥೆ ಮೂಲಕ ಅಶ್ಲೀಲ ಚಿತ್ರ ತಯಾರಿಸುತ್ತಿದ್ದರು.

ಮಾತ್ರವಲ್ಲದೇ ತಮ್ಮ ಸಹೋದರ ಸಂಬಂಧಿ ಪ್ರದೀಪ ಭಕ್ಷಿ ಮೂಲಕ ವಿದೇಶದಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿಸುತ್ತಿದ್ದರು ಎನ್ನಲಾಗಿದೆ. ರಾಜ್ ಕುಂದ್ರಾ ಬಂಧನ ಬಳಿಕ ಶೆರ್ಲಿನ ಚೋಫ್ರಾ ಹಾಗೂ ಪೂನಂ ಪಾಂಡೆ ರಾಜ್ ಕುಂದ್ರಾ ವಿರುದ್ಧ ಆರೋಪ ಮಾಡಿದ್ದರು.

ಆದರೆ ನಟಿ ಗೆಹನಾ ವಶಿಷ್ಠ ಮಾತ್ರ ರಾಜ್ ಕುಂದ್ರಾ ಅಶ್ಲೀಲ ವಿಡಿಯೋವಲ್ಲ ಬದಲಾಗಿ ಶೃಂಗಾರ ವಿಡಿಯೋ ಸಿದ್ಧಪಡಿಸುತ್ತಿದ್ದರು ಎಂದಿದ್ದರು. ಈಗ ಎರಡನೇ ಚಾರ್ಜಶೀಟ್ ಕೂಡ ಸಲ್ಲಿಕೆಯಾಗಿರೋದರಿಂದ ರಾಜ್ ಕುಂದ್ರಾಗೆ ಜಾಮೀನು ಸಿಗೋ ಸಾಧ್ಯತೆ ಇದೆ.

police submitted chargesheet to mumbai court against raj kundra

Comments are closed.